Sushant Death Case: ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ರಹಸ್ಯ ಬಯಲಿಗೆ ಬರುತ್ತಾ? ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೀಡಿದ್ರು ಬಿಗ್‌ ಅಪ್ಡೇಟ್‌

latest news Devendra Fadnavis Big Update on Actor Sushant Singh Rajput's Death Mystery

Sushant Death Case: ಬಾಲಿವುಡ್‌ನ ಜನಪ್ರಿಯ ನಟ ಸುಶಾಂತ್‌ ಸಿಂಗ್‌ ರಜಪೂತ್‌ ನಮ್ಮನಗಲಿ ಮೂರು ವರ್ಷವಾಗಿದೆ ಆದರೆ ಇಂದಿಗೂ ಇದೊಂದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ರಹಸ್ಯ ಬಹಿರಂಗವಾಗಿಲ್ಲ. 2020 ರಲ್ಲಿ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಲಾಗಿತ್ತು. ಆದರೆ ತನಿಖೆಯಲ್ಲಿ ಯಾವುದೇ ಪ್ರಗತಿ ಕಾಣಲಿಲ್ಲ. ಹಾಗಾಗಿ ಈ ಪ್ರಶ್ನೆಯನ್ನು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ಅವರಿಗೆ ಕೇಳಲಾಗಿದ್ದು, ಅವರು ಸುಶಾಂತ್‌ ಸಿಂಗ್‌ ರಜಪೂರ್‌ನ ಸಾವಿನ ಬಗ್ಗೆ ದೊಡ್ಡ ಸುದ್ದಿಯೊಂದನ್ನು ಹೇಳಿದ್ದಾರೆ.

ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಫಡ್ನವೀಸ್‌ ಅವರು, ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿಗೆ ಸಂಬಂಧಿಸಿದಂತೆ ದೊರೆತಿರುವ ಸಾಕ್ಷ್ಯಗಳ ವಿಶ್ವಾಸಾರ್ಹತೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ, ಪುರಾವೆಗಳಿಗೆ ವಾಸ್ತವಕ್ಕೆ ಹೊಂದಿಕೆಯಾಗುತ್ತದೆಯೇ ಇಲ್ಲವೇ ಎಂಬುವುದನ್ನು ನೋಡಲಾಗುತ್ತಿದೆ. ಈ ವಿಚಾರಲ್ಲಿ ಕೆಲವು ಖಚಿತವಾದ ಸಾಕ್ಷ್ಯಗಳನ್ನು ಹೊಂದಿದ್ದಾರೆ, ಅವರ ಜೊತೆ ಮಾತುಕತೆ ನಡೆಸಲಾಗುತ್ತಿದ್ದು, ಸಾಕ್ಷ್ಯಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಹೇಳಿದರು. ಸಾಕ್ಷ್ಯಾಧಾರಗಳು ನಿಜವೆಂದು ಕಂಡುಬಂದರೆ ಖಂಡಿತವಾಗಿಯೂ ಕ್ರಮ ತೆಗೆದುಕೊಳ್ಳಲಾಗುವುದು. ಸರಿಯಾದ ಸಮಯ ಬಂದಾಗ ನಾನು ಖಂಡಿತವಾಗಿಯೂ ಈ ಬಗ್ಗೆ ಮಾತನಾಡುತ್ತೇನೆ ಎಂಬ ಮಾತನ್ನು ಹೇಳಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ಅವರ ಮೃತ ದೇಹವು 14 ಜೂನ್ 2020 ರಂದು ಮುಂಬೈನ ಬಾಂದ್ರಾದಲ್ಲಿನ ಅವರ ಬಾಡಿಗೆ ಫ್ಲಾಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಜನಪ್ರಿಯ ನಟನ ಸಾವಿನಿಂದ ಜನಸಾಮಾನ್ಯರು ಬಾಲಿವುಡ್‌ ವಿರುದ್ಧ ತಿರುಗಿ ಬಿದ್ದಿದ್ದು, ಸೂಕ್ತ ರೀತಿಯಲ್ಲಿ ತನಿಖೆ ಆಗಬೇಕು ಎಂದು ಜನರು ಕೋಲಾಹಲ ಎಬ್ಬಿಸಿದ್ದರು. ಆದರೆ ಇಂದಿಗೂ ಸುಶಾಂತ್‌ ಸಾವಿನ ರಹಸ್ಯ ಬಹಿರಂಗವಾಗಿಲ್ಲ.

Leave A Reply

Your email address will not be published.