Uttar Pradesh: ಲಿಫ್ಟ್‌ನಲ್ಲಿ ಬಂಧಿಯಾದ ಆಸ್ಪತ್ರೆಯ 12 ಮಂದಿ ರೋಗಿಗಳು!

Latest news Uttar Pradesh news 12 patients from Stuck Hospital in the lift

Uttar Pradesh: ಉತ್ತರಪ್ರದೇಶದ ಆಸ್ಪತ್ರೆಯ ಲಿಫ್ಟ್‌ನಲ್ಲಿ 12 ಮಂದಿ ರೋಗಿಗಳು ಸಿಲುಕಿಕೊಂಡ ಘಟನೆಯೊಂದು ನಡೆದಿದೆ. ಉತ್ತರಪ್ರದೇಶದ ಸಂಭಾಲ್‌ನಲ್ಲಿರುವ ಜಿಲ್ಲಾ ಆಸ್ಪತ್ರೆಯ ಎರಡನೇ ಮಹಡಿಗೆ ಹೋಗಲೆಂದು ರೋಗಿಗಳು, ಆಸ್ಪತ್ರೆ ಸಿಬ್ಬಂದಿ ಲಿಫ್ಟ್‌ ಒಳಗಡೆ ಹೋಗಿದ್ದರು ಆದರೆ 20ನಿಮಿಷ ಲಿಫ್ಟ್‌ ನಿಂತಿತ್ತು. ಮೇಲಕ್ಕೆ ಹೋಗುತ್ತಿದ್ದಂತೆ ಮಧ್ಯದಲ್ಲಿ ನಿಂತು ಈ ಅವಘಡ ನಡೆದು, ಎಲ್ಲರೂ ಬೆದರಿದ ಘಟನೆ ನಡೆದಿದೆ.

ಲಿಫ್ಟ್‌ ನಿಂತಾಗ ಎಲ್ಲರೂ ಕಿರುಚಲಾರಂಭಿಸಿದ್ದಾರೆ. ಕೂಡಲೇ ಅವರ ಕೂಗು ಹೊರಗಡೆ ಕೇಳಿಸಿದೆ. ಕೂಡಲೇ ಲಿಫ್ಟನ್ನು ಸರಿಪಡಿಸುವ ಎಲ್ಲಾ ಕೆಲಸ ಮಾಡಲಾಯಿತು. ಎಲಿವೇಟರ್‌ ರಿಪೇರಿ ಮಾಡುತ್ತಿದ್ದ ವ್ಯಕ್ತಿಯನ್ನು ಕೂಡಲೇ ಕರೆಸಿ ಆತನಿಂದ ಲಿಫ್ಟ್‌ ತೆರೆದು ಜನರ ರಕ್ಷಣೆ ಕಾರ್ಯ ಮಾಡಲಾಯಿತು.

Leave A Reply

Your email address will not be published.