MB Patil: ಬಿಜೆಪಿಗೆ ತಕ್ಕ ಪಾಠ ಕಲಿಸಬೇಕೆಂದೇ ಜನರ ಅಕೌಂಟ್‌ಗೆ ದುಡ್ಡು ಹಾಕುವುದು-ಎಂಬಿ ಪಾಟೀಲ್‌

pilotical news We put money in the people account to teach BJP a lesson MB Patil

ಸಚಿವ ಎಂಬಿ ಪಾಟೀಲ್‌ ಅವರು ಬಿಜೆಪಿಯ ಬಗ್ಗೆ ವ್ಯಂಗ್ಯದ ಮಾತುಗಳನ್ನಾಡಿದ್ದಾರೆ. ಜನರೇ ಬಿಜೆಪಿಯನ್ನು ತಿರಸ್ಕಾರ ಮಾಡಿದ್ದಾರೆ. ಜನ ಬಿಜೆಪಿಗೆ ಶಿಕ್ಷೆ ನೀಡಿದ್ದಾರೆ ಎಂಬ ಮಾತುಗಳನ್ನಾಡಿದ್ದಾರೆ. ಬಿಜೆಪಿ ಇಂದು ಇಪ್ಪತ್ತು ಗುಂಪು ಆಗಿದೆ. ಯಾರು ಏನೇ ಬಂದು ಮಾಡಿದ್ರೂ ಜೋಡಿಸೋಕೆ ಆಗಲ್ಲ. ಅಷ್ಟು ಛಿದ್ರ ಛಿದ್ರ ಆಗಿದೆ. ಫೆವಿಕಲ್‌ ಹಚ್ಚಿದ್ರೂ ಅಂಟಲ್ಲ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಬಿಜೆಪಿ ಬಗ್ಗೆ ಕಾಲೆಳೆದಿದ್ದಾರೆ.

ಕೆಲಸ ಇಲ್ಲದೆ ಟೀಕೆ ಮಾಡುವುದೇ ಬಿಜೆಪಿ ಕೆಲಸವಾಗಿದೆ, ಅಕ್ಕಿ ವಿಷಯದಲ್ಲಿ ಕೂಡಾ ಟೀಕೆ ಮಾಡಿದ್ರು, ಅದಕ್ಕೆ ಬಿಜೆಪಿಯವರಿಗೆ ತಕ್ಕ ಪಾಠ ಕಲಿಸಬೇಕು ಎಂದೇ ನಾವು ಜನರ ಅಕೌಂಟ್‌ಗೆ ದುಡ್ಡಿ ಹಾಕ್ತಿದ್ದೇವೆ. ಈ ಬಗ್ಗೆ ಜನರಿಗೆ ತೊಂದರೆ ಇಲ್ಲ, ಆದರೆ ಬಿಜೆಪಿಯರಿಗೆ ತೊಂದರೆ ಅಷ್ಟೇ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಕೇಂದ್ರ ಸರಕಾರ ಮೋಸ ಮಾಡಿದ್ದಕ್ಕೆ ಜನ ನಮ್ಮ ನಿರ್ಧಾರದಿಂದ ಖುಷಿಯಾಗಿದ್ದಾರೆ ಎಂದು ಹೇಳಿದ್ದಾರೆ.

Leave A Reply

Your email address will not be published.