Facebook love story: ಫೇಸ್‌ಬುಕ್‌ನಲ್ಲಿ ಸ್ನೇಹ ನಂತರ ಪ್ರೀತಿ! ರೈಡ್‌ ನೆಪದಲ್ಲಿ ಕಾಡಿಗೆ ಕರೆದುಕೊಂಡು ಹೋದ ಯುವಕರು ಮಾಡಿದ್ದೇನು?

latest news attempt rape news man cheated a girl who friendship turned into love on Facebook

Facebook love story: ಸಾಮಾಜಿಕ ಜಾಲತಾಣದ ಮೂಲಕ ಹುಡುಗ, ಹುಡುಗಿ ಒಬ್ಬರನ್ನೊಬ್ಬರು ಪ್ರೀತಿ ಮಾಡುವುದು ಅನಂತರ ಮೋಸ ಹೋಗುವುದು ಇದೆಲ್ಲ ವರದಿಯಾಗುತ್ತಲೇ ಇರುತ್ತದೆ. ಈಗ ಇದಕ್ಕೊಂದು ಹೊಸ ಸೇರ್ಪಡೆಯಾಗಿ ಫೇಸ್‌ಬುಕ್‌ ಮೂಲಕ ಮೂವರು ಯುವಕರು ಮೊದಲು ಫೇಸ್‌ಬುಕ್‌ ಮೂಲಕ ಮೂವರು ಹುಡುಗಿಯರನ್ನು ತಮ್ಮ ಪ್ರೀತಿಯ ಬಲೆಯಲ್ಲಿ ಬೀಳಿಸಿದ್ದಾರೆ. ಮುಗ್ಧ ಬಾಲಕಿಯರು ಇವರ ಪ್ರೀತಿಯನ್ನು ನಿಜವೆಂದು ನಂಬಿದ್ದಾರೆ. ಇದಾದ ನಂತರ ಯುವಕರು ರೈಡ್‌ಗೆ ಕರೆದುಕೊಂಡು ಹೋಗುವ ನೆಪದಲ್ಲಿ ಕಾರಿನಲ್ಲಿ ಕಾಡಿಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಅತ್ಯಾಚಾರ ಮಾಡಿದ್ದಾರೆ.

ಈ ಘಟನೆ ನಡೆದಿರುವುದ ಜಾರ್ಖಾಂಡ್‌ನ ಗುಮ್ಲಾ ಜಿಲ್ಲೆಯಲ್ಲಿ. ಈ ಪ್ರಕರಣ ಈಗ ಗುಮ್ಲಾದ ಬಸಿಯಾ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ.

ತಮ್ಮ ಮಕ್ಕಳು ಎಷ್ಟು ಹೊತ್ತಾದರೂ ಮನೆಗೆ ಬಾರದೇ ಇದ್ದಾಗ ಹೆದರಿದ ಕುಟುಂಬಸ್ಥರು ಆತಂಕಗೊಂಡು, ಸಂಬಂಧಿಕರೊಂದಿಗೆ ಠಾಣೆಗೆ ತೆರಳಿ ಬಾಲಕಿಯರ ಕಾಣೆಯಾದ ಬಗ್ಗೆ ದೂರು ನೀಡಿದ್ದಾರೆ. ನಂತರ ಪೊಲೀಸರು ಬಾಲಕಿಯರನ್ನು ಘನ್ಸೇರಾ ಅರಣ್ಯದಿಂದ ವಶಪಡಿಸಿಕೊಂಡಿದ್ದಾರೆ.

ಈ ಘಟನೆಯ ಆರೋಪಿಗಳಾದ ಗುಮ್ಲಾ ಜಿಲ್ಲೆಯ ಬಸಿಯಾ ಪೊಲೀಸ್‌ ಠಾಣಾ ವ್ಯಾಪ್ತಿಯ ಘುನ್ಸೆರಾ ಗ್ರಾಮದ ನಿವಾಸಿಗಳಾದ ಅಮಿತ್‌ ಬರಾಲಾ, ಅನಿಲ್‌ ಇಂದ್ವಾರ್‌ ಮತ್ತು ಮುನ್ನಾ ಗೋಪ್‌ ಎಂಬ ಮೂವರು ಯುವಕರನ್ನು ಅತ್ಯಾಚಾರದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ. ಮೂವರು ಬಾಲಕಿಯರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಎಲ್ಲಾ ಮೂವರು ಆರೋಪಿಗಳು ತಮ್ಮ ಆರೋಪವನ್ನು ಒಪ್ಪಿಕೊಂಡಿದ್ದಾಗಿ ಎಸ್‌ಡಿಪಿಒ ವಿಕಾಸ್‌ ಆನಂದ ಲಾಂಗುರಿ ತಿಳಿಸಿದ್ದಾರೆ. ಈ ಘಟನೆಯಿಂದ ಮೂವರು ಬಾಲಕಿಯರ ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ ಎಂದು ವರದಿಯಾಗಿದೆ.

Leave A Reply

Your email address will not be published.