Accident: ಭೀಕರ ರಸ್ತೆ ಅಪಘಾತ! ಕ್ರೂಸರ್-ಐಚರ್‌ ಡಿಕ್ಕಿಗೆ ಪತಿ-ಪತ್ನಿ ಸೇರಿ 18 ತಿಂಗಳ ಮಗು ಸಾವು

latest news car accident road accident between Cruiser-Eicher

Accident: ಮಹಾರಾಷ್ಟ್ರದಲ್ಲಿ ನಡೆದ ಭೀಕರ ಅಪಘಾತವೊಂದರಲ್ಲಿ ಪತಿ ಪತ್ನಿ ಮತ್ತು ಅವರ 18 ತಿಂಗಳ ಹೆಣ್ಣು ಮಗು ಸಾವನ್ನಪ್ಪಿದೆ. ಕ್ರೂಸರ್‌ ಮತ್ತು ಐಷರ್‌ ವಾಹನಗಳ ನಡುವೆ ಡಿಕ್ಕಿ ಸಂಭವಿಸಿದ ಕಾರಣ ಈ ಅಪಘಾತ ನಡೆದಿದೆ. ಈ ಘಟನೆ ಸಮೃದ್ಧಿ ಹೆದ್ದಾರಿಯಲ್ಲಿ ನಡೆದಿದೆ. ಸಹೋದರನ ಮದುವೆ ಮುಗಿಸಿ ದಂಪತಿ ಜೊತೆಗೆ ಕುಟುಂಬಸ್ಥರು ಕ್ರೂಸರ್‌ ಕಾರಿನಲ್ಲಿ ಮುಂಬೈಗೆ ವಾಪಸಾಗುತ್ತಿದ್ದರು. ಈ ಘಟನೆ ಶುಕ್ರವಾರ ರಾತ್ರಿ ಒಂದು ಗಂಟೆಗೆ ಶಿರಡಿ ಸಮೀಪದ ಕೋಪರ್‌ಗಾಂವ್‌ ತಹಸಿಲ್‌ನ ಕೋಕಮ್‌ಥಾನ್‌ನಲ್ಲಿ ಈಚರ್‌ ಟೆಂಪೋಗೆ ಡಿಕ್ಕಿ ಹೊಡೆದು ನಡೆದಿದೆ.

ಸಂತೋಷ್‌ ಅಶೋಕ್‌ ರಾಥೋಡ್‌ (35), ಸಂತೋಷ್‌ ರಾಥೋಡ್‌ (29), ಅವ್ನಿ (18 ತಿಂಗಳು) ಮೃತರು. ಇಷ್ಟು ಮಾತ್ರವಲ್ಲದೇ ಗಾಡಿಯಲ್ಲಿದ್ದ ಇವರ ಮಗ ಐದು ವರ್ಷದ ಅರ್ನವ್‌ ಸೇರಿದಂತೆ 5 ರಿಂದ 6 ಮಂದಿ ಗಾಯಗೊಂಡಿದ್ದಾರೆ. ಸ್ಥಳೀಯ ಜನರ ಸಹಾಯದಿಂದ ಕೋಪರಗಾಂವ್‌ ನಗರ ಪೊಲೀಸರು ಅವರನ್ನು ಹತ್ತಿರ ಮಲಿಕ್‌ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೃತರ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕೋಪರಗಾಂವ್‌ನ ಗ್ರಾಮಾಂತರ ಆಸ್ಪತ್ರೆಗೆ ಕಳುಹಿಸಲಾಗಿದೆ.

ಕ್ರೂಸರ್ ವಾಹನದಲ್ಲಿ ಎರಡು ದಿನಗಳ ಹಿಂದೆ ಮದುವೆಯಾಗಿ ವಾಪಸಾಗುತ್ತಿದ್ದ ಕೃಷ್ಣ ರಾಥೋಡ್ (ವಯಸ್ಸು 27) ಮತ್ತು ಅವರ ಪತ್ನಿ ಕೋಮಲ್ ರಾಥೋಡ್ (ವಯಸ್ಸು 19) ಕೂಡ ಗಾಯಗೊಂಡಿದ್ದಾರೆ. ಮೃತ ಸಂತೋಷ್‌ ಅವರ ತಾಯಿ ಬಾಟಾಬಾಯಿ ಅಶೋಕ್‌ ರಾಥೋಡ್‌ (65) ಅವರಿಗೂ ಗಂಭೀರ ಗಾಯವಾಗಿದ್ದು ಚಿಕಿತ್ಸೆ ನೀಡಲಾಗುತ್ತದೆ.

ಜೂನ್‌.26 ರಂದು ಸಂತೋಷ್‌ ರಾಥೋಡ್‌ ಅವರು ತನ್ನ ಕಿರಿಯ ಸಹೋದರನ ಮದುವೆಯಲ್ಲಿ ಕುಟುಂಬ ಸಮೇತ ಪಾಲ್ಗೊಂಡು ತಮ್ಮ ಗ್ರಾಮಕ್ಕೆ ಬಂದಿದ್ದರು. ಸಹೋದ ಕೃಷ್ಣ ರಾಥೋಡ್‌ ಅವರ ಮದುವೆ ಸ್ಥಳಿಯ ಸ್ಥಳವಾದ ಜಲ್ನಾ ಬಳಿಯ ಹಳ್ಳಿಯಲ್ಲಿ ನಡೆದಿತ್ತು. ನಂತರ ರಾಥೋಡ್‌ ಕುಟುಂಬ ಜೂನ್‌.29 ರಂದು ರಾತ್ರಿ ಕ್ರೂಸರ್‌ನಲ್ಲಿ ಕುಳಿತು ಸಮೃದ್ಧಿ ಹೆದ್ದಾರಿ ಮೂಲಕ ಮುಂಬೈಗೆ ಹೊರಟಿತ್ತು.

ಕೋಪರ್‌ಗಾಂವ್ ತಹಸಿಲ್‌ನ ಕೋಕಮ್ಥಾನ್ ಬಳಿ ತಲುಪಿದಾಗ ಕ್ರೂಸರ್ ವಾಹನವು ಮುಂದಿನಿಂದ ಹೋಗುತ್ತಿದ್ದ ಐಚರ್ ಟೆಂಪೋಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕ್ರೂಸರ್ ನಲ್ಲಿ ಕುಳಿತಿದ್ದ ಮೂವರು ಸಾವನ್ನಪ್ಪಿದ್ದು, ಕ್ರೂಸರ್ ಚಾಲಕ ಸೇರಿ 5 ರಿಂದ 6 ಮಂದಿ ಗಾಯಗೊಂಡಿದ್ದಾರೆ. ಸಮೀಪದ ಆತ್ಮ ಮಲಿಕ್ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ಆರಂಭಿಸಲಾಗಿದೆ. ಐಷರ್ ಟೆಂಪೋ ಚಲಾಯಿಸುತ್ತಿದ್ದ ಚಾಲಕ ಕ್ರೂಸರ್ ವಾಹನದ ಚಾಲಕನ ವಿರುದ್ಧ ಕೋಪರಗಾಂವ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕೋಪರಗಾಂವ್ ನಗರ ಪೊಲೀಸರು ಹೆಚ್ಚಿನ ತನಿಖೆ ಮತ್ತು ವಿಚಾರಣೆ ನಡೆಸುತ್ತಿದ್ದಾರೆ.

Leave A Reply

Your email address will not be published.