Actress Priyamani: ತೆರೆ ಮೇಲೆ ಕಿಸ್‌ ಮಾಡಲು ʼನೋʼ ಎಂದ ನಟಿ ಪ್ರಿಯಾಮಣಿ! ಕಾರಣ ಇಲ್ಲಿದೆ

latest news cinima news Actress Priyamani says she can't kiss on screen

Actress Priyamani: ಪ್ರಿಯಾಮಣಿ ಸೌತ್‌ ಸಿನಿಮಾರಂಗದಲ್ಲಿ ಬಹಳ ಒಳ್ಳೆ ಹೆಸರು ಮಾಡಿದ ನಟಿ. ಇತ್ತೀಚೆಗೆ ಮದುವೆಯಾದ ನಂತರ ಸಿನಿಮಾ ಸೆಲೆಕ್ಷನ್‌ ವಿಷಯದಲ್ಲಿ ಚ್ಯೂಸಿಯಾಗಿದ್ದಾರೆ. ಸಿನಿಮಾರಂಗದಲ್ಲಿ ಕೆಲವೊಂದು ವಿಷಯದಲ್ಲಿ ಕೆಲವರು ಮಡಿವಂತಿಕೆ ತೋರಿಸುತ್ತಾರೆ. ಕೆಲವು ನಟ, ನಟಿಯರು ತೆರೆ ಮೇಲೆ ಕಿಸ್ಸಿಂಗ್‌ ವಿಷಯಕ್ಕೆ ತಮ್ಮನ್ನು ತಾವು ಯಾವುದೇ ರೀತಿಯಲ್ಲಿ ಬಳಸಿಕೊಳ್ಳುವುದಕ್ಕೆ ರೆಡಿ ಇರುತ್ತಾರೆ. ಆದರೆ ಕೆಲವರು ಈ ಕಿಸ್ಸಿಂಗ್‌ ದೃಶ್ಯದಲ್ಲಿ ಬಹಳ ದೂರ. ಅದರಲ್ಲಿ ಪ್ರಿಯಾಮಣಿ ಕೂಡಾ ಸೇರುತ್ತಾರೆ. ಈ ಬಗ್ಗೆ ನಟಿ ಮಾದ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಿಯಾಮಣಿ (Actress Priyamani) ಅವರು “ನಾನು ಸಿನಿಮಾದಲ್ಲಿ ಕಿಸ್‌ ಮಾಡೋ ಪಾತ್ರ ಮಾಡುವುದಿಲ್ಲ. ಇದಕ್ಕೆಲ್ಲ ನನ್ನ ಕಡೆಯಿಂದ ಬಿಗ್‌ ನೋ ಹೇಳುತ್ತೇನೆ. ಎಲ್ಲರಿಗೂ ಗೊತ್ತಿರುವ ಹಾಗೆ ಅದೊಂದು ಪಾತ್ರ, ನನ್ನ ಕೆಲಸ. ಆದರೆ ಕಿಸ್‌ ಮಾಡಲು ನನಗೆ ಇಷ್ಟವಿಲ್ಲ. ಕೊನೆಗೆ ನಾನು ಉತ್ತರ ಕೊಡಬೇಕಾಗಿರುವುದು ನನ್ನ ಗಂಡನಿಗೆ ಮಾತ್ರ” ಎಂದು ಹೇಳಿದ್ದಾರೆ ನಟಿ.

ಮುಸ್ತಾಫಾ ಅವರೊಂದಿಗೆ 2017ರಲ್ಲಿ ಮದುವೆಯಾಗಿದ್ದು, ಅನಂತರ ಸಿನಿಮಾ ಆಯ್ಕೆಯಲ್ಲಿ ಬಹಳ ಚ್ಯೂಸಿಯಾಗಿದ್ದಾರೆ. ʼಫ್ಯಾಮಿಲಿ ಮ್ಯಾನ್‌ʼ ಬಾಲಿವುಡ್‌ನ ಹಿಟ್‌ ವೆಬ್‌ ಸಿರೀಸ್‌. ಇದರಲ್ಲಿ ಮನೋಜ್‌ ಬಾಜಪೇಯಿ ಅವರ ಹೆಂಡತಿಯಾಗಿ ನಟಿಸಿದ ಪ್ರಿಯಾಮಣಿ ಅವರ ಪಾತ್ರಕ್ಕೆ ಬಹಳ ಪ್ರಶಂಸೆ ದೊರಕಿದೆ. ಮಹಿಳಾ ಪ್ರಧಾನ ಪಾತ್ರದಲ್ಲಿ ಇತ್ತೀಚೆಗೆ ಪ್ರಿಯಾಮಣಿ ಹೆಚ್ಚಾಗಿ ಕಾಣಿಸಿಕೊಳ್ಳಲು ಇಷ್ಟ ಪಡುತ್ತಾರೆ. ಮದುವೆಯಾದ ನಂತರ ಎಲ್ಲಾ ನಟಿಯರ ಹಾಗೇ ಸಿನಿಮಾ ಸೆಲೆಕ್ಷನ್‌ ವಿಷಯದಲ್ಲಿ ಚ್ಯೂಸಿಯಾಗುವುದು ಸಾಮಾನ್ಯ. ಕೆಲವರು ಸಿನಿಮಾ ರಂಗ ತೊರೆದರೆ, ಇನ್ನು ಕೆಲವರು ತಮ್ಮ ನಟನಾ ವೃತ್ತಿಯಲ್ಲಿ ಆಯ್ಕೆಯ ಪಾತ್ರಗಳನ್ನು ಸೆಲೆಕ್ಟ್‌ ಮಾಡಿ ಮುಂದುವರಿಯುತ್ತಿರುವುದು ಗಮನಾರ್ಹ.

Leave A Reply

Your email address will not be published.