Marriage: ಮದುವೆಯಾದ 17 ದಿನದಲ್ಲೇ ಓಡಿ ಹೋದ ನವವಧು! ಪ್ರೇಮಿ ಜೊತೆ ವೀಡಿಯೋ ಮಾಡಿ ಇದು ನನ್ನ ಪ್ರೀತಿ ಎಂದಳು!

latest news newlywed left with her lover within 17 days marriage

Marriage: ಮದುವೆ ಎನ್ನುವುದು ಏಳು ಜನ್ಮದ ಬಂಧ ಎಂದು ಹೇಳಲಾಗುತ್ತದೆ. ಆದರೆ ಬಿಹಾರದಲ್ಲಿ ನಡೆದ ಮದುವೆಯೊಂದು 7 ಜನ್ಮ ಬಿಡಿ 17 ದಿನ ಕೂಡಾ ಉಳಿಯಲಿಲ್ಲ. ಮದುವೆಯಾದ 17 ದಿನದಲ್ಲೇ ವಧುವೊಬ್ಬಳು ತನ್ನ ಪತಿಯನ್ನು ತೊರೆದು ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ. ಈಗ ಯುವತಿಯ ತಂದೆ ಪ್ರಿಯಕರನ ವಿರುದ್ಧ ಮಗಳ ಅಪಹರಣ ಪ್ರಕರಣ ದಾಖಲು ಮಾಡಲಾಗಿದೆ.

ಓಡಿ ಹೋದ ನಂತರ ವಧು ತನ್‌ ಪ್ರಿಯಕರನೊಂದಿಗೆ ಮದುವೆಯಾಗುವ ವೀಡಿಯೋವೊಂದನ್ನು ಕುಟುಂಬದ ಸದಸ್ಯರಿಗೆ ಕಳುಹಿಸಿದ್ದಾಳೆ. ವಧು ಕಳೆದ ಎರಡು ವರ್ಷಗಳಿಂದ ರಾಕೇಶ್‌ ಅಲಿಯಾಸ್‌ ಡೀಲರ್‌ ಸಿಂಗ್‌ ಎಂಬಾತನನ್ನು ಪ್ರೀತಿಸುತ್ತಿದ್ದೇನೆ ಎಂದು ವೀಡಿಯೋದಲ್ಲಿ ಹೇಳಿದ್ದಾಳೆ. ತನ್ನ ಸ್ವಂತ ಇಚ್ಛೆಯಿಂದ ತಾನು ಪ್ರಿಯಕರನೊಂದಿಗೆ ಹೋಗಿರುವುದು ಮತ್ತು ಪ್ರಿಯಕರನ ಕುಟುಂಬಕ್ಕೆ ಏನಾದರೂ ಸಂಭವಿಸಿದೆ ಅದಕ್ಕೆ ನನ್ನ ತಂದೆ ತಾಯಿ ಮತ್ತು ಅತ್ತೆ ಮಾವ ಹೊಣೆಯಾಗುತ್ತಾರೆ ಎಂದು ವೀಡಿಯೋದಲ್ಲಿ ಹೇಳಿದ್ದಾಳೆ.

ವಧು ಮೋಹನ್‌ಪುರ ಗ್ರಾಮದ ನಿವಾಸಿ ವಿಶುನ್ ಪಾಸ್ವಾನ್ ಅವರ 18 ವರ್ಷದ ಮಗಳು ಸಜ್ನಿ, ಈಕೆ ರಾಕೇಶ್ ಕುಮಾರ್ ಅಲಿಯಾಸ್ ಡೀಲರ್ ಸಿಂಗ್ ನೊಂದಿಗೆ ಮದುವೆಯಾಗಲು ಬಯಸಿದ್ದಳು. ಆದರೆ ಮನೆಯವರ ಒತ್ತಾಯದ ಮೇರೆಗೆ ಜೂನ್ 7 ರಂದು ಸಜ್ನಿ ಝಾಝಾ ಪೊಲೀಸ್ ಠಾಣೆಯ ನಿವಾಸಿ ಅನ್ಮೋಲ್ ಪಾಸ್ವಾನ್‌ನನ್ನು ಮದುವೆಯಾಗಿದ್ದಾಳೆ. ಮದುವೆಯಾದ 17 ನೇ ದಿನದಂದು, ಸಜ್ನಿ ತನ್ನ ಪ್ರೇಮಿ ಜೊತೆ ಓಡಿಹೋಗಿದ್ದಾಳೆ. ಸಜ್ನಿ ತನ್ನ ಸೋದರ ಸಂಬಂಧಿಯ ಮದುವೆಗೆಂದು ತನ್ನ ಪತಿ ಮತ್ತು ಅತ್ತೆಯೊಂದಿಗೆ ತನ್ನ ತಾಯಿಯ ಮನೆಗೆ ಬಂದಿದ್ದಳು. ಅಲ್ಲಿಂದ ಅವಳು ತನ್ನ ಪ್ರಿಯಕರನೊಂದಿಗೆ ಎಸ್ಕೇಪ್‌ ಆಗಿದ್ದಾಳೆ.

ಇದಾದ ನಂತರ ರಾಕೇಶ್ ಕುಮಾರ್ ಅಲಿಯಾಸ್ ಡೀಲರ್ ಸಿಂಗ್ ಮತ್ತು ಆತನ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಸೇರಿದಂತೆ ಒಟ್ಟು 4 ಜನರ ವಿರುದ್ಧ ಸಜ್ನಿ ತಂದೆ ವಿಶುನ್ ಪಾಸ್ವಾನ್ ಲಕ್ಷ್ಮಿಪುರ ಪೊಲೀಸ್ ಠಾಣೆಯಲ್ಲಿ ಮಗಳ ಅಪಹರಣ ಪ್ರಕರಣವನ್ನು ದಾಖಲಿಸಿದ್ದಾರೆ. ವೈರಲ್ ವಿಡಿಯೋದಲ್ಲಿ ತನ್ನ ಮಗಳಿಗೆ ಹೆದರಿಸಿ ಇದನ್ನೆಲ್ಲಾ ಹೇಳುವಂತೆ ಒತ್ತಾಯಿಸಲಾಗಿದೆ ಎಂದು ಹುಡುಗಿಯ ತಂದೆ ಹೇಳಿದ್ದಾರೆ.

Leave A Reply

Your email address will not be published.