Fire death: ಮನೆಯೊಳಗೆ ತುಂಬಿಕೊಂಡ ದಟ್ಟ ಹೊಗೆ, ಉಸಿರುಗಟ್ಟಿ ಮನೆಯ ಆರು ಮಂದಿ ಪ್ರಜ್ಞಾಹೀನ, ಓರ್ವ ಮಹಿಳೆ ಸಾವು!

latest news death news woman died of suffocation due to smoke filling the house

Fire death: ಬ್ರೆಡ್‌ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಕುಟುಂಬವೊಂದು ಬೆಳಗ್ಗೆಗಾವುದರೊಳಗೆ ಮನೆಯೊಳಗೆ ತುಂಬಿಕೊಂಡ ಹೊಗೆಯಿಂದಾಗಿ (Fire death) ಮಹಿಳೆಯೋರ್ವಳು ಸಾವನ್ನಪ್ಪಿದ್ದ ದಾರುಣ ಘಟನೆಯೊಂದು ಕೋಲ್ಕತ್ತಾ ಪಶ್ಚಿಮ ಬಂಗಾಳದ ಅಸನ್ಸೋಲ್‌ನಲ್ಲಿ ನಡೆದಿದೆ. ಈ ದುರಂತದಲ್ಲಿ ಒಂದು ಮಗು ಸೇರಿದಂತೆ ಐವರು ತೀವ್ರ ಅಸ್ವಸ್ಥರಾಗಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಇವರನ್ನೆಲ್ಲ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಸನ್ಸೋಲ್ ದಕ್ಷಿಣ ಪೊಲೀಸ್ ಠಾಣೆ ವ್ಯಾಪ್ತಿಯ ಮಹಿಶಿಲಾ ಕಾಲೋನಿಯ ಅರಬಿಂದಪಲ್ಲಿ ಪ್ರದೇಶದಲ್ಲಿ ಶನಿವಾರ ಈ ಘಟನೆ ನಡೆದಿದೆ.

ಪೊಲೀಸರ ಪ್ರಕಾರ ಮೃತಪಟ್ಟ ಮಹಿಳೆಯ ಹೆಸರು ಹಸಿನಾಥ್‌ (47ವರ್ಷ). ಬಾಡಿಗೆ ಮನೆಯೊಂದರಲ್ಲಿ ಇವರ ಕುಟುಂಬ ವಾಸಿಸುತ್ತಿದ್ದು. ಬ್ರೆಡ್‌ ಮಾಡಿ ಮಾರಾಟ ಮಾಡುವ ವೃತ್ತಿ ಮಾಡುತ್ತಿದ್ರು. ಆದರೆ ಮಹಿಳೆ ಬ್ರೆಡ್‌ ತಯಾರಿಸಲು ಬಳಸುವ ಕುಲುಮೆಯನ್ನು ನಂದಿಸಲು ಮರೆತಿದ್ದು, ಅದರಿಂದ ಉಂಟಾದ ದಟ್ಟ ಹೊಗೆಯಿಂದ ಉಸಿರುಗಟ್ಟಿ ಈ ದುರಂತ ಸಂಭವಿಸಿದೆ ಎಂದು ವರದಿಯಾಗಿದೆ.

ಸಾಮಾನ್ಯವಾಗಿ ಕುಟುಂಬದ ಸದಸ್ಯರು ಬೆಳಗ್ಗೆ ಬೇಗ ಏಳುತ್ತಿದ್ದರು. ಆದರೆ ಶನಿವಾರ ಬೆಳಗ್ಗೆ 8.30 ರವರೆಗೂ ಮನೆಯಲ್ಲಿ ಯಾರೂ ಬಾಗಿಲು ತೆರೆಯದಿದ್ದರಿಂದ, ಸಂಶಯ ಬಂದು ಸ್ಥಳೀಯರು ಮನೆಯ ಕದ ತಟ್ಟಿದ್ದಾರೆ. ಆದರೆ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನಂತರ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಬಂದು ಮನೆ ಬಾಗಿಲು ಒಡೆದು ಒಳ ಪ್ರವೇಶಿಸಿದಾಗ ಮನೆ ಹೊಗೆಯಿಂದ ತುಂಬಿಕೊಂಡಿರುವುದು ಕಂಡು ಬಂದಿದೆ. ಹಾಗೂ ಮನೆಯಲ್ಲಿ ಆರು ಜನ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡು ಬಂದಿದೆ. ಎಲ್ಲರನ್ನೂ ಅಸನ್ಸೋಲ್‌ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅದರಲ್ಲಿ ಓರ್ವ ಮಹಿಳೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಣೆ ಮಾಡಿದ್ದಾರೆ. ಉಳಿದವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ

Leave A Reply

Your email address will not be published.