Optical Illusion: ಸ್ನೇಹಿತರೇ, ಈ ಚಿತ್ರದಲ್ಲಿ ಮರೆಮಾಚಿರುವ ಎರಡು ಮುಖಗಳನ್ನು ಕಂಡು ಹಿಡಿಯಲು ನಿಮ್ಮ ಬಳಿ ಇದೆ ಕೇವಲ 7 ಸೆಕೆಂಡ್‌!

latest news game Optical Illusion intresting game

Optical Illusion: ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳ ಬಗ್ಗೆ ನಿಮಗೆ ಈಗಾಗಲೇ ತಿಳಿದಿರಬಹುದು. ಇವು ಮೆದುಳಿನ ಗ್ರಹಿಕೆಯ ಶಕ್ತಿಯನ್ನು ಹೆಚ್ಚಾಗಿಸುತ್ತದೆ. ಸಾಮಾನ್ಯವಾಗಿ ಮಾನವನ ಮನಸ್ಸು ಒಂದೇ ಸಮಯದಲ್ಲಿ ವಿವಿಧ ದೃಷ್ಟಿಕೋನಗಳಿಂದ ವಸ್ತುಗಳು ಅಥವಾ ಚಿತ್ರಗಳನ್ನು ನೋಡುವ ಶಕ್ತಿ ಹೊಂದಿದೆ. ಅದಕ್ಕಾಗಿ ಒಂದು ಒಗಟನ್ನು ನೀಡಿ ಪರಿಹರಿಸಲು ಹೇಳುತ್ತಿದ್ದೇವೆ. ಇದೊಂದು ಆಸಕ್ತಿದಾಯಕ ಆಪ್ಟಿಕಲ್‌ ಫೋಟೋವನ್ನು ನೀಡಿದ್ದು, ಇವುಗಳಲ್ಲಿ ಅಡಗಿರುವ ಗುಪ್ತ ಮುಖಗಳನ್ನು ನೀವು ಕಂಡುಹಿಡಿಯಬೇಕು.

ಈ ಚಿತ್ರದಲ್ಲಿ ಮಹಿಳೆಯೊಬ್ಬಳು ಹೂದಾನಿಯಲ್ಲಿ ಇರಿಸಲಾಗಿರುವ ತಾಜಾ ಹೂವುಗಳ ಪರಿಮಳವನ್ನು ಆಘ್ರಾಣಿಸುತ್ತಿರುವುದನ್ನು ನೀವು ನೋಡಬಹುದು. ಈಕೆ ತನ್ನ ಮನೆಗೆ ಬರುವ ಅತಿಥಿಗಳಿಗಾಗಿ ಕಾಯುತ್ತಿರುತ್ತಾಳೆ. ಅದಕ್ಕಾಗಿ ವಾತಾವರಣವನ್ನು ಆಹ್ಲಾದಕರ ಮತ್ತು ತಾಜಾವಾಗಿರಲು ಪ್ರಯತ್ನ ಪಡುತ್ತಿದ್ದಾಳೆ. ಅದಕ್ಕಾಗಿ ಎಲ್ಲವನ್ನೂ ಕೂಲಂಕುಷವಾಗಿ ಪರೀಕ್ಷೆ ಮಾಡುತ್ತಿದ್ದಾಳೆ. ಆದರೂ, ಮಹಿಳೆಯ ಮನೆಗೆ ಅತಿಥಿಗಳು ಈಗಾಗಲೇ ಬಂದಿದ್ದು, ಅವರು ಎಲ್ಲೋ ಅಡಗಿಕೊಂಡಿದ್ದಾರೆ. ಹಾಗಾಗಿ ನೀವು ಆ ಇಬ್ಬರು ಅತಿಥಿಗಳನ್ನು ಹುಡುಕಬೇಕು. ಆದರೆ ಈ ಕೆಲಸಕ್ಕಾಗಿ ನಿಮ್ಮ ಬಳಿ ಇರುವುದು ಕೇವಲ 7 ಸೆಕೆಂಡ್‌.

ಇಂತಹ ಒಗಟುಗಳನ್ನು ಬಿಡಿಸಲು ನೀವು ಹೆಚ್ಚು ಗಮನಹರಿಸಿದರೆ ನಿಮ್ಮ ಮನಸ್ಸು ಚುರುಕಾಗುತ್ತದೆ ಎಂದು ಸಂಶೋಧನೆ ಹೇಳುತ್ತದೆ. ಆ ಗುಪ್ತ ಮುಖಗಳನ್ನು ಕಂಡುಹಿಡಿಯುವಲ್ಲಿ ನೀವು ಯಶಸ್ವಿಯಾಗಿದ್ದೀರಾ ಅಥವಾ ಇಲ್ಲವೇ? ನಿಮಗೆ ಉತ್ತರ ದೊರೆಯಿತೇ? ಉತ್ತರ ಈ ಕೆಳಗೆ ನೀಡಲಾಗಿದೆ.

 

ಇದನ್ನು ಓದಿ: Bakrid: ಬಕ್ರೀದ್‌ ಹಿನ್ನಲೆ ಶಾಲಾ ಮಕ್ಕಳಿಂದ ಸಾಮೂಹಿಕ ನಮಾಜ್‌ ಮಾಡಿಸಿದ ಆರೋಪ! ಆಡಳಿತ ಮಂಡಳಿ ಸ್ಪಷ್ಟನೆ ಏನು?

Leave A Reply

Your email address will not be published.