Viral video: ಸಾಹಸಮಯ ಆಟದಲ್ಲಿ ದುರ್ಘಟನೆ, 40 ಅಡಿ ಆಳಕ್ಕೆ ಬಿದ್ದ 6 ರ ಬಾಲಕ! ವೀಡಿಯೋ ವೈರಲ್‌

latest news viral video 6 year old boy fell 40 feet deep in an adventure game

Viral video: ಇತ್ತೀಚೆಗೆ ಹೆಚ್ಚಿನ ಜನರು ರಜೆ ಸಿಕ್ಕಿತೆಂದರೆ ಸಾಕು ಬಿಜಿ ಲೈಪ್‌ನ ಮಧ್ಯೆ ಹೊರಗಡೆ ಸುತ್ತಾಡಲು ಹೋಗುವುದು ಸಾಮಾನ್ಯ. ಹಾಗೆನೇ ಇಲ್ಲೊಂದು ಫ್ಯಾಮಿಲಿ ವೀಕೆಂಡ್‌ ಎಂದು ಹೊರಗಡೆ ಹೋಗಿದೆ. ಆದರೆ ಇದೇ ಅವರ ಪಾಲಿಗೆ ಆಘಾತಕಾರಿ ಘಟನೆಯನ್ನು ಎದುರಿಸುವ ಹಾಗೇ ಮಾಡಿದೆ. ಸಾಹಸಮಯ ಆಟಕ್ಕೆ ಪೋಷಕರು ತಮ್ಮ ಆರು ವರ್ಷದ ಮಗುವನ್ನು ಕಳಿಸಿದ್ದು, ಮಗು 40 ಅಡಿ ಆಳದಿಂದ ಬಿದ್ದಿರುವ ಘಟನೆಯೊಂದು ನಡೆದಿದೆ. ಈ ಘಟನೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಈ ಘಟನೆ ಮೆಕ್ಸಿಕೋದ ಮಾಂಟೆರ್ರಿಯ ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ ನಡೆದಿದೆ.

ಆರು ವರ್ಷದ ಬಾಲಕನೊಬ್ಬ ಜಿಪ್‌ಲೈನ್‌ನಿಂದ ಸುಮಾರು 40 ಅಡಿ ಆಳಕ್ಕೆ ಬಿದ್ದಿದ್ದು, ಪೋಷಕರ ಎದೆ ಬಡಿತ ಏರಿಸುವ ಹಾಗೇ ಮಾಡಿದೆ. ಸುರಕ್ಷತೆಯ ಬಗ್ಗೆ ಇಲ್ಲಿ ಏನೆಲ್ಲಾ ಕ್ರಮ ವಹಿಸಿದ್ದಾರೆ ಎನ್ನುವುದು ನೆಟ್ಟಿಗರ ಪ್ರಶ್ನೆ. ಮಗು 40 ಅಡಿ ಎತ್ತರದಿಂದ ಬಿದ್ದಿರುವ ದೃಶ್ಯ ನಿಜಕ್ಕೂ ಭಯಾನಕವಾಗಿದೆ. ಬಾಲಕ ಮೇಲಿನಿಂದ ಕೆಳಕ್ಕೆ ಸೀದಾ ಹೋಗಿ ಕೊಳಕ್ಕೆ ಬಿದ್ದಿದ್ದಾನೆ. ಕೂಡಲೇ ಅಲ್ಲೇ ಇದ್ದ ಪ್ರವಾಸಿಗರೊಬ್ಬರು ಕೊಳಕ್ಕೆ ಹಾರಿ ಬಾಲಕನನ್ನು ರಕ್ಷಿಣೆ ಮಾಡಿದ್ದಾರೆ. ಬಾಲಕನಿಗೆ ಸಣ್ಣಪುಟ್ಟ ಗಾಯ ಉಂಟಾಗಿದ್ದು, ಬಾಲಕ ಮಾನಸಿಕವಾಗಿ ತೀವ್ರ ಕುಗ್ಗಿದ್ದಾನೆ ಎಂದು ವರದಿಯಾಗಿದೆ.

 

ಇದನ್ನು ಓದಿ: Optical Illusion: ಸ್ನೇಹಿತರೇ, ಈ ಚಿತ್ರದಲ್ಲಿ ಮರೆಮಾಚಿರುವ ಎರಡು ಮುಖಗಳನ್ನು ಕಂಡು ಹಿಡಿಯಲು ನಿಮ್ಮ ಬಳಿ ಇದೆ ಕೇವಲ 7 ಸೆಕೆಂಡ್‌! 

Leave A Reply

Your email address will not be published.