ಒಂಟಿ ಮಹಿಳೆಯ ಕೊಲೆ ಮಾಡಿದ ಹಂತಕರು! ತಿಂದ ಮನೆಗೆ ಕನ್ನ ಹಾಕಿದ ಡ್ರೈವರ್‌!

ಆಕೆ ಗೃಹಿಣಿ. ಮನೆಯಲ್ಲಿ ಯಾವುದೇ ವಿಷಯಕ್ಕೂ ಕೊರತೆಯಿರಲಿಲ್ಲ. ಗಂಡ ನೀರಾವರಿ ಇಲಾಖೆಯಲ್ಲಿ AEE. ಮಗ ಎಂ.ಡಿ. ಮಾಡುವವನಿದ್ದ. ಮನೆಯಲ್ಲಿ ಖುಷಿ ಇತ್ತು. ನೆಮ್ಮದಿ ಇತ್ತು. ಆದರೆ ಆ ದೇವರಿಗೆ ಈ ಖುಷಿ ನೋಡಲು ಆಗಲಿಲ್ಲವೇನೋ. ಹಂತಕರ ದೃಷ್ಟಿ ಈ ಮನೆ ಮೇಲೆ ಬಿತ್ತು. ಒಂಟಿಯಾಗಿದ್ದ ಮಹಿಳೆಯ ಕತ್ತು ಕೊಯ್ದ ಹಂತಕರು ಮಹಿಳೆಯ ಬಳಿ ಇದ್ದ ಮನೆಯಲ್ಲಿದ್ದ ದುಡ್ಡನ್ನು ತಗೊಂಡು ಎಸ್ಕೇಪ್‌ ಆಗಿದ್ದರು. ಈ ಘಟನೆ ನಡೆದಿರುವುದು ಶಿವಮೊಗ್ಗದಲ್ಲಿ.

ಹತ್ಯೆ ನಡೆದ ದಿನ ಮನೆಯಲ್ಲಿ ಯಾರೂ ಇರಲಿಲ್ಲ. ಗಂಡ ಸ್ನೇಹಿತರೊಂದಿಗೆ ಗೋವಾಕ್ಕೆ ಹೋಗಿದ್ದರೆ, ಮಗ ಬೆಂಗಳೂರಿಗೆ ಹೋಗಿದ್ದ. ಹತ್ಯೆ ವಿಷಯ ತಿಳಿದ ನಂತರ ಪೊಲೀಸರು ಸ್ಥಳಕ್ಕೆ ಬಂದಿದ್ದರು. ಆದರೆ ಎಷ್ಟೇ ಪ್ರಯತ್ನ ಪಟ್ಟರೂ ಹಂತಕರು ಯಾರೆಂದು ಕಂಡು ಹಿಡಿಯಲು ಆಗಲಿಲ್ಲ. ಮಹಿಳೆಯನ್ನು ಕೊಲೆ ಮಾಡಿ 35ಲಕ್ಷ ದೋಚಿದ್ದ ಹಂತಕರ ಬಗ್ಗೆ ಯಾವುದೇ ಸುಳಿವು ಸಿಗದೆ ಪೊಲೀಸರಿಗೆ ತಲೆನೋವಾಗಿತ್ತು. ಆದರೆ ಹತ್ಯೆಯಾದ ಕಮಲಮ್ಮನವರ ಗಂಡ ಮಲ್ಲಿಕಾರ್ಜುನಯ್ಯನವರೇ ಒಂದು ಕ್ಲೂ ಕೊಟ್ಟರು. ಅವರ ಬಳಿ ಕೆಲಸ ಮಾಡಿಕೊಂಡಿದ್ದ ಡ್ರೈವರ್‌ ಹನುಮಂತ ನಾಯ್ಕ ಕೊಲೆಯಾದ ದಿನದಿಂದ ನಾಪತ್ತೆಯಾಗಿದ್ದಾನೆಂದು.

 

ಕೊನೆಗೆ ಪೊಲೀಸರಿಗೆ ಹಂತಕರು ಸಿಕ್ಕೇ ಬಿದ್ದರು. ಡ್ರೈವರ್‌ ಹನುಮಂತ ತಿಂದ ಮನೆಗೇ ಕನ್ನ ಹಾಕಿದ್ದ. 8 ತಿಂಗಳು ಚೆನ್ನಾಗಿ ವಾಚ್‌ ಮಾಡಿದ್ದ ಹನುಮಂತ ಮತ್ತು ಅವನ ಗ್ಯಾಂಗ್‌ ನಂತರ ಹಣ ದೋಚುವ ಕೆಲಸಕ್ಕೆ ಕೈ ಹಾಕಿತ್ತು. ಇವರ ಗ್ಯಾಂಗ್ ನಲ್ಲಿ ಇದ್ದವರು ಏಳು ಜನ. ದೋಚಿದ ದುಡ್ಡನ್ನು ಎಲ್ಲರೂ ಸಮಾನವಾಗಿ ಹಂಚಿದ್ದಾರೆ. ಇದಕ್ಕಾಗಿ ಪ್ಲ್ಯಾನ್‌ ಮಾಡಿ ಇವರು ಈ ಕೃತ್ಯ ಮಾಡಿದ್ದಾರೆ.

Leave A Reply

Your email address will not be published.