West Bengal: ಕಾಂಗ್ರೆಸ್ ಕಾರ್ಯಕರ್ತನೋರ್ವನ ಗುಂಡಿಕ್ಕಿ ಹತ್ಯೆ! ಜೀವ ಬೆದರಿಕೆ ಇತ್ತು ಎಂದ ಕುಟುಂಬ!

Latest national crime news Congress worker shot dead in West Bengal

West Bengal : ತೃಣಮೂಲ ಕಾಂಗ್ರೆಸ್‌ (TMC)ಕಾರ್ಯಕರ್ತನೋರ್ವನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆಯೊಂದು ನಡೆದಿದೆ. ಈ ಘಟನೆ ನಡೆದಿರುವು ಪಶ್ಚಿಮ ಬಂಗಾಳದಲ್ಲಿ(West Bengal ). ಗಂಭೀರ ಸ್ಥಿತಿಯಲ್ಲಿದ್ದ ಕಾರ್ಯಕರ್ತನನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದರೂ, ಅವರು ಮೃತರಾಗಿರುವುದಾಗಿ ವೈದ್ಯರು ಸೂಚಿಸಿದ್ದಾರೆ.

ಜಿಯಾರುಲ್‌ ಮೊಲ್ಲಾ ಎಂಬ ಯುವ ತೃಣಮೂಲ ಕಾಂಗ್ರೆಸ್‌ ಸದಸ್ಯನೇ ಗುಂಡೇಟಿನಿಂದ ಮೃತಗೊಂಡ ವ್ಯಕ್ತಿ. ಇವರಿಗೆ ಜೀವಬೆದರಿಕೆ ಇತ್ತು ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ ಎಂದು ವರದಿಯಾಗಿದೆ.

ರಾಜಕೀಯ ದ್ವೇಷದಿಂದಾಗಿ ಇನ್ನೊಂದು ಬಣದಿಂದ ಬೆದರಿಕೆ ಕರೆ ಇತ್ತು. ಹಲವಾರು ಸಂಖ್ಯೆಗಳಿಂದ ಫೋನ್‌ ಕರೆಗಳು ನನ್ನ ತಂದೆಗೆ ಬರುತ್ತಿದ್ದವು. ಅವರ ಬಣಕ್ಕೆ ಸೇರಬೇಕೆಂದು ಒತ್ತಾಯ ಹೇರಲಾಗುತ್ತಿತ್ತು ಎಂದು ಮೃತ ವ್ಯಕ್ತಿಯ ಕುಟುಂಬದವರು ಹೇಳಿದ್ದಾರೆ. ಪೊಲೀಸರು ಈ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: Optical Illusion: ಸ್ನೇಹಿತರೇ, ಈ ಚಿತ್ರದಲ್ಲಿ ಅಡಗಿರುವ 808 ಅನ್ನು ಹುಡುಕಿ, ನಿಮ್ಮ ಬಳಿ ಇರುವುದು ಕೇವಲ 15 ಸೆಕೆಂಡುಗಳು!

Leave A Reply

Your email address will not be published.