Optical Illusion: ಸ್ನೇಹಿತರೇ, ಈ ಚಿತ್ರದಲ್ಲಿ ಅಡಗಿರುವ 808 ಅನ್ನು ಹುಡುಕಿ, ನಿಮ್ಮ ಬಳಿ ಇರುವುದು ಕೇವಲ 15 ಸೆಕೆಂಡುಗಳು!

Optical illusion to find the hidden 808 number in this picture

Optical illusion: ಆಪ್ಟಿಕಲ್‌ ಭ್ರಮೆಯಂತಹ(Optical illusion) ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವುದು ಹಾಗೂ ಜನರು ಅದಕ್ಕೆ ಉತ್ತರ ಹುಡುಕುವುದರಲ್ಲಿ ಆಸಕ್ತಿ ತೋರುತ್ತಿರುವುದು ನಾವು ನೋಡಿದ್ದೇವೆ. ಅನೇಕ ಚಿತ್ರಗಳು ನಮ್ಮ ಮೆದುಳನ್ನು ಹಿಂಡಿ ಹಿಪ್ಪೆ ಮಾಡಿದರೆ ಇನ್ನು ಕೆಲವು ತಟ್ಟನೆ ಉತ್ತರ ಸಿಗುವಂತೆ ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಜನರಿಗೆ ಇದು ನಿಜಕ್ಕೂ ಮೋಜಿನ ಆಟ ಎಂದೇ ಹೇಳಬಹುದು.

ಆದರೆ ಇಲ್ಲಿ ನಾವು ನಿಮಗೆ ನೀಡಿರುವ ಚಿತ್ರವೊಂದು ನಿಜಕ್ಕೂ ಭ್ರಮೆ. ಇದು ನಮ್ಮ ಕಣ್ಣುಗಳಿಗೆ ಮಾತ್ರವಲ್ಲದೇ ನಮ್ಮ ಮನಸ್ಸಿಗೂ ಕೆಲಸ ಕೊಡುತ್ತಿದೆ. ಇದು ನಿಜಕ್ಕೂ ಒಂದು ಮನಸ್ಸಿಗೆ ವ್ಯಾಯಾಮ ನೀಡುವ ಆಟ. ಇಲ್ಲಿ ಕಾಣುವುದು ಬೇರೆಯೇ ಆದರೂ ನಿಜಕ್ಕೂ ಇದರಲ್ಲಿ ಸತ್ಯ ಏನೋ ಇದೆ. ಮನೋವಿಜ್ಞಾನಿಗಳ ಪ್ರಕಾರ ಅವರು ತಮ್ಮ ಅಧ್ಯಯನದಲ್ಲಿ ಹೇಳಿರುವ ಹಾಗೆ ಈ ಆಪ್ಟಿಕಲ್‌ ಭ್ರಮೆಯು ದೃಷ್ಟಿಯನ್ನು ಸುಧಾರಿಸುತ್ತದೆ ಎಂದು ಹೇಳುತ್ತಾರೆ.

ಈಗ ಈ ಚಿತ್ರದಲ್ಲಿ ನೀವು ಎಲ್ಲಾ ಕಡೆ 888 ಅನ್ನು ಕಾಣುತ್ತಿದ್ದೀರಿ. ಆದರೆ ಎಚ್ಚರಿಕೆಯಿಂದ ನೋಡಿದರೆ ನಿಮಗೆ 808 ಸಂಖ್ಯೆ ಇಲ್ಲಿ ಅಡಗಿದೆ ಎಂಬುವುದನ್ನು ನೀವು ಗಮನವಿಟ್ಟು ನೋಡಿದರೆ ಕಾಣುತ್ತದೆ. ಆದರೆ ಇದಕ್ಕೆ ನಿಮಗೆ ಇದನ್ನು ಹುಡುಕಲು ಸಮಯಾವಕಾಶ ಕಡಿಮೆ ಇದೆ. ನಿರ್ದಿಷ್ಟ ಸಮಯದಲ್ಲಿ ಇದನ್ನು ನೀವು ಹುಡುಕಬೇಕು. ಈ ಕ್ಲಿಷ್ಟಕರವಾದ ಆಪ್ಟಿಕಲ್‌ ಭ್ರಮೆಯ ಪ್ರಶ್ನೆಯನ್ನು ಪರಿಹರಿಸಲು ನಿಮ್ಮ ಬಳಿ ಇದೆ ಕೇವಲ 15 ಸೆಕೆಂಡ್‌. ಈ ಭ್ರಮೆಯನ್ನು ನೀವು ಕೊಟ್ಟ ಸಮಯದೊಳಗೆ ಪರಿಹರಿಸಿದರೆ ತೆನಾಲಿ ರಾಮನಂತಹ ತೀಕ್ಷ ಮನಸ್ಸು ನಿಮ್ಮದು ಎಂದು ನಾವು ಒಪ್ಪಿಕೊಳ್ಳುತ್ತೇವೆ.

ನೀವು ನಿಗದಿತ ಸಮಯದೊಳಗೆ ಈ ಪ್ರಶ್ನೆಗೆ ಉತ್ತರ ಹುಡುಕುವಿರಿ ಎಂಬ ಭರವಸೆ ನಮಗೆ ಇದೆ. ಆದರೆ ಹಾಗೆ ಮಾಡಲು ಸಾಧ್ಯವಾಗದಿದ್ದರೆ ನೀವು ನಿರಾಶೆಗೊಳ್ಳುವ ಅವಶ್ಯಕತೆಯಿಲ್ಲ. ಇದಕ್ಕೆ ಉತ್ತರವನ್ನು ನಾವು ಈ ಕೆಳಗೆ ನೀಡಿದ್ದೇವೆ.

Leave A Reply

Your email address will not be published.