ಮಗಳನ್ನು ಕರೆತರಲು ಹೊರಟಿದ್ದ ದಂಪತಿ ಕಾರಿಗೆ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ! ದಂಪತಿ ಸಾವು

ಕೊಡಗಿನ ದಂಪತಿಗಳು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಕಾರು ಮುತ್ತು ಕೆಎಸ್‌ಆರ್‌ಟಿಸಿ ಬಸ್‌ ಮುಖಾಮುಖಿ ಡಿಕ್ಕಿಯಾದ ಪರಿಣಾದ ದಂಪತಿಗಳಿಬ್ಬರು ಸಾವನ್ನಪ್ಪಿರುವ ಘಟನೆಯೊಂದು ಹುಣಸೂರು-ಮೈಸೂರು ಹೆದ್ದಾರಿಯ ರಂಗಯ್ಯನಕೊಪ್ಪಲು ಗೇಟ್‌ ಬಳಿ ನಡೆದಿದೆ.

 

ಎಚ್‌.ಬಿ.ಬೆಳ್ಳಿಯಪ್ಪ (65), ವೀಣಾ (56) ಈ ದುರ್ಘಟನೆಯಲ್ಲಿ ಸಾವನ್ನಪ್ಪಿದ ದಂಪತಿಗಳು. ಇವರಿಬ್ಬರಿಗೆ ಇಬ್ಬರು ಮಕ್ಕಳಿದ್ದಾರೆ, ಬೆಳ್ಳಿಯಪ್ಪ ಅವರು ಮಡಿಕೇರಿ ತಾಲೂಕಿನ ಮರಗೋಡು ಸರಕಾರಿ ಪಿಯು ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ್ದರು. ಆಕ್ಸಿಡೆಂಟ್‌ ರಭಸ ಎಷ್ಟು ರಭಸವಾಗಿತ್ತೆಂದರೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿತ್ತು. ಬಸ್‌ ಮುಂಭಾಗ ಹಾನಿಯಾಗಿದ್ದು, ಬಸ್ಸಿನಲ್ಲಿದ್ದವರಿಗೆ ಯಾವುದೇ ಪ್ರಾಣಹಾನಿಯಾಗಿಲ್ಲ. ಬಿಳಿಕೆರೆ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

 

ಪುತ್ರಿ ವಿಜ್ಞಾನಿ ಶೃತಿಯವರನ್ನು ಕರೆತರಲು ಹೋದ ಸಂದರ್ಭದಲ್ಲಿ ಈ ಅವಘಡ ನಡೆದಿದೆ. ಮಗಳು ಶೃತಿ ಅವರು ಉತ್ತರ ಪ್ರದೇಶದ ಅಲಹಾಬಾದ್‌ನಿಂದ ಮೈಸೂರು ವಿಮಾನ ನಿಲ್ದಾಣಕ್ಕೆ ಬರುವವರಿದ್ದರು. ಅವರು ಕರೆತರಲು ತೆರಳಿದ್ದ ಸಂದರ್ಭದಲ್ಲಿ ಮೈಸೂರು ಕಡೆಯಿಂದ ಬರುತ್ತಿದ್ದ ಹುಣಸೂರು ಡಿಪೋಗೆ ಸೇರಿದ ಬಸ್‌ ಡಿಕ್ಕಿ ಹೊಡೆದಿದ್ದು, ದಂಪತಿಗಳು ಸಾವನ್ನಪ್ಪಿದ್ದಾರೆ.

Leave A Reply

Your email address will not be published.