Shakthi scheme effect: ಮಹಿಳಾ ಶಕ್ತಿಗೆ ನಾವು ಯಾವತ್ತೂ ಜಗ್ಗಂಗಿಲ್ಲ: ಶಕ್ತಿ ಫ್ರೀ ಬಸ್‍ನಲ್ಲಿ ಪುರುಷರ ಸಂಖ್ಯೆ ಬೃಹತ್ ಪ್ರಮಾಣದಲ್ಲಿ ಹೆಚ್ಚಳ !

latest news Free bus for women Shakthi scheme effect

Shakthi scheme effect: ಕರ್ನಾಟಕದಲ್ಲಿ ಮಹಿಳೆಯರಿಗೆ ಉಚಿತ ಬಸ್ ಶಕ್ತಿ ಯೋಜನೆ (Shakthi scheme effect) ಜಾರಿಯಾಗಿ ಇಂದಿಗೆ 20 ದಿನ ಕಳೆದಿದೆ. ಈ ಯೋಜನೆಗೆ ಊಹೆಗೂ ಮೀರಿದ ಪ್ರತಿಕ್ರಿಯೆ ಸಿಕ್ಕಿದೆ. ಈ ಯೋಜನೆ ಜಾರಿಗೆ ಬರುವ ಮುಂಚೆ ಎಲ್ಲರು ಯೋಚಿಸಿದಂತೆ ಉಚಿತ ಬಸ್ ಯೋಜನೆಯ ಮೂಲಕ ಸರ್ಕಾರಕ್ಕೆ ದೊಡ್ಡ ಮಟ್ಟದ ನಷ್ಟ ಉಂಟಾಗುತ್ತದೆ ಎನ್ನಲಾಗಿತ್ತು. ಆದರೆ ಎಲ್ಲಾ ಊಹೆಗಳು ಲೆಕ್ಕಾಚಾರಗಳು ತಲೆಕೆಳಗಾಗಿವೆ. ಅತ್ತ ಮಹಿಳೆಯರಿಂದ ಆಗುವ ನಷ್ಟವನ್ನು ಪುರುಷರು ತುಂಬಿಕೊಡುತ್ತಿದ್ದಾರೆ. ಹೌದು, ಮಹಿಳೆಯರು ಜೊತೆಗೆ ಪುರುಷರ ಸಂಖ್ಯೆ ಕೂಡ ಜಾಸ್ತಿಯಾಗುತ್ತದೆ ಎನ್ನುತ್ತಿದೆ ಸರಕಾರದ ವರದಿ. ಮಹಿಳೆಯರು ಸರ್ಕಾರಿ ಉಚಿತ ಬಸ್ಸಿನಲ್ಲಿ ಎಷ್ಟೇ ರಶ್ ಮಾಡಲಿ ನಮ್ಮ ಪುರುಷರು ಯಾವುದಕ್ಕೂ ಜಗ್ಗಂಗಿಲ್ಲ !! ತಾವೂ ಕೂಡಾ ಹಿಂದಿನ ದೋಣಿನಿಂದ ಬಸ್ ಹತ್ತಿದ್ದ ಎಂದು ಸಾಧಿಸಿ ತೋರಿಸಿ ಬಿಟ್ಟಿದ್ದಾರೆ.

ಮಹಿಳೆಯರು ಇಲ್ಲಿಯವರೆಗೂ ಉಚಿತವಾಗಿ 10 ಕೋಟಿಗೂ ಅಧಿಕ ಉಚಿತ ಓಡಾಟ ಮಾಡಿದ್ದಾರೆ. ಈ ನಡುವೆ ಮಹಿಳೆಯರಿಗೆ ಉಚಿತ ನೀಡಿದ ಕಾರಣ ಪುರುಷ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಬಹುದು ಅನ್ನೋ ಮಾತುಗಳಿದ್ದವು. ಆದರೆ ಆದದ್ದೇ ಬೇರೆ. ದಿನನಿತ್ಯ ಓಡಾಟ ಮಾಡುತ್ತಿದ್ದ ಪುರುಷರ ಸಂಖ್ಯೆಗಿಂತಲೂ ಹೆಚ್ಚು ಪುರುಷರು ಪ್ರಯಾಣ ಮಾಡ್ತಿದ್ದಾರೆ ಅನ್ನುವ ಕುತೂಹಲಕಾರಿ ಮಾಹಿತಿ ಬಂದಿದೆ. ಇಷ್ಟೇ ಅಲ್ಲದೆ, ಸಾರಿಗೆ ಬಸ್ ನಲ್ಲಿ ಪುರುಷರ ಓಡಾಟದಿಂದ ಬರ್ತಿರುವ ಆದಾಯವೂ ಡಬಲ್ ಆಗಿರೋ ಸುದ್ದಿ ಮತ್ತೊಂದು ವಿಶೇಷ.

ಏನು ಹೇಳುತ್ತೆ ಅಂಕಿ ಅಂಶ ?
ಉಚಿತ ಶಕ್ತಿ ಯೋಜನೆ ಜಾರಿಗೂ ಮುಂಚೆ ದಿನನಿತ್ಯ 42 ಲಕ್ಷ ಪುರುಷ ಪ್ರಯಾಣಿಕರು ಸಾರಿಗೆ ಬಸ್‍ನಲ್ಲಿ ಸಂಚರಿಸುತ್ತಿದ್ದರು. ಆದರೆ ಈಗ ನಿತ್ಯ ಸರಾಸರಿ 55 ಲಕ್ಷ ಪುರುಷರ ಓಡಾಟ ಇದೆ. ಅಂದರೆ ಆದದ್ದು ದಿನಕ್ಕೆ ಸರಾಸರಿ 13 ಲಕ್ಷ ಹೆಚ್ಚಳ. ಇದೊಂದು ಗಮನಾರ್ಹ ಬೆಳವಣಿಕೆ. ಮಹಿಳೆಯರಿಗೆ ಹೇಗೂ ಉಚಿತ ಅಂತ ಸಾರಿಗೆ ಬಸ್‍ನಲ್ಲಿ ಹೋಗ್ತಿದ್ದಾರೆ. ರಶ್ ಆದ್ರೂ ಏನು ಮಾಡೋಕೆ ಆಗದೇ ಅಡ್ಜೆಸ್ಟ್ ಮಾಡಿಕೊಂಡು ಅದೇ ಬಸ್ ನಲ್ಲಿ ಓಡಾಟ ಮಾಡ್ತಿದ್ದಾರೆ. ಕುಟುಂಬದವರು ಕೂಡಾ ಒಟ್ಟಾಗಿ ಪ್ರಯಾಣ ಮಾಡಲು ಇಷ್ಟಪಡುವ ಕಾರಣ ಈ ಬದಲಾವಣೆ ಎನ್ನಲಾಗಿದೆ.

ಅತ್ತ ಪುರುಷ ಪ್ರಯಾಣಿಕರ ಓಡಾಟ ಸಂಖ್ಯೆ ಹೆಚ್ಚಾದ ಕಾರಣ ಸಹಜವಾಗಿ ಆದಾಯ ಕೂಡ ಹೆಚ್ಚಾಗಿದೆ. ಶಕ್ತಿ ಯೋಜನೆ ಶುರುವಾದ ನಂತರ ಸಾರಿಗೆ ಸಂಸ್ಥೆಗೆ 19 ದಿನದಲ್ಲಿ ಪುರುಷರ ಪ್ರಯಾಣದಿಂದ 302 ಕೋಟಿ ಆದಾಯ ಹರಿದು ಬಂದಿದೆ. ಶಕ್ತಿ ಯೋಜನೆ ಜಾರಿಗೂ ಮುನ್ನ ನಿತ್ಯ 24.48 ಕೋಟಿ ಆದಾಯ ಇದ್ದರೆ, ಅದರಲ್ಲಿ ಪುರುಷರ ಓಡಾಟದ ಪಾಲು 12 ಕೋಟಿ. ಈಗ ಅದು 16.87 ಕೋಟಿಗೆ ಏರಿಕೆ ಆಗಿದೆ. ಒಟ್ಟಾರೆ ಬಸ್ಸಿನಲ್ಲಿ ವಿಪರೀತ ರಶ್ ಮಹಿಳೆಯರ ನೂಕು ನುಗ್ಗಲು, ಜಡೆ ಜಗಳ ನಡುವೆಯೂ ಹೆಚ್ಚಿನ ಪುರುಷರು ಸೋಲು ಒಪ್ಪಿಕೊಂಡಿಲ್ಲ. ನಾವು ಯಾವುದಕ್ಕೂ ಜಗ್ಗಂಗಿಲ್ಲ ಅನ್ನುತ್ತಾ ಸಾರಿಗೆ ಬಸ್ ನಲ್ಲಿ ಓಡಾಡಿ ಸರ್ಕಾರಕ್ಕೆ ಇನ್ನಷ್ಟು ಲಾಭ ಹೆಚ್ಚಿಸಿ ಕೊಟ್ಟಿದ್ದಾರೆ. ಶಕ್ತಿ ಯೋಜನೆ ಸಾರ್ಥಕ ಪಡಿಸಿದ್ದಾರೆ.

Leave A Reply

Your email address will not be published.