PUBG ಆಡುತ್ತಾ ಪ್ರೀತಿಯ ಬಲೆಯಲ್ಲಿ ಬಿದ್ದ ಪಾಕಿಸ್ತಾನದ ನಾಲ್ಕು ಮಕ್ಕಳ ತಾಯಿ ಸೀದಾ ಭಾರತಕ್ಕೆ ಬಂದಳು! ಮುಂದೇನಾಯ್ತು?

ಪ್ರೀತಿಯ ಬಲೆಯಲ್ಲಿ ಬಿದ್ದರೆ ಅದರ ಅಮಲಿನಿಂದ ಹೊರಗೆ ಬರುವುದಕ್ಕೆ ಆಗುವುದಿಲ್ಲ. ಹಾಗೆನೇ ಇನ್ನೊಂದು ಮಾತಿದೆ. ಪ್ರೀತಿಗೆ ಯಾವುದೇ ವಯಸ್ಸು, ಗಡಿ, ಭಾಷೆ ಅನ್ವಯಿಸುವುದಿಲ್ಲ. ಇದಕ್ಕೆ ಈ ಘಟನೆಯೇ ಉದಾಹರಣೆ. ಸೀಮಾ ಹೈದರ್‌ ಎಂಬಾಕೆ ಭಾರತದ ಸಚಿನ್‌ ಎಂಬಾತನನ್ನು ಪ್ರೀತಿಸಿ ತನ್ನ ನಾಲ್ಕು ಮಕ್ಕಳ ಜೊತೆ ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ದಾಳೆ. ಆದರೆ ಪ್ರೇಮದ ಕದ ತಟ್ಟುವುದಕ್ಕಿಂತ ಮೇಲೆ ಕಾನೂನು ಅಡ್ಡಿ ಬಂದಿದೆ.

ಈ ಪ್ರೀತಿಯ ಕಥೆಯ ಸೂತ್ರಧಾರರು ಪಾಕಿಸ್ತಾನದ ಸೀಮಾ, ಮತ್ತು ಭಾರತದ ಸಚಿನ್.‌ ಈ ಘಟನೆ ನಡೆದಿರುವು ಗ್ರೇಟರ್‌ ನೋಯ್ಡಾ, ಯುಪಿ ದೆಹಲಿಯಲ್ಲಿ. ಪಾಕಿಸ್ತಾನದ ಸೀಮಾ ಭಾರತದ ಸಚಿನ್‌ ಮೋಸದ ಪ್ರೀತಿಗೆ ಬಿದ್ರಾ ಎಂದು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಆಕೆ ತನ್ನ ನಾಲ್ಕು ಮಕ್ಕಳೊಂದಿಗೆ ಪಾಕಿಸ್ತಾನದಿಂದ ಭಾರತಕ್ಕೆ ಬಂದ ರೀತಿಗೆ ನಿಜಕ್ಕೂ ಪೊಲೀಸರು ಶಾಕ್‌ಗೊಳಗಾಗಿದ್ದಾರೆ. ಭಾರತೀಯ ಏಜೆನ್ಸಿಗಳು ಈ ಕೃತ್ಯವನ್ನು ಅಸಹ್ಯಕರ ಎಂದು ಹೇಳಿದೆ.

ಪೊಲೀಸರ ಪ್ರಕಾರ, ಸೀಮಾ ಗುಲಾಮ್ ಹೈದರ್ ಈಕೆ ಪಾಕಿಸ್ತಾನದವಳು. ಗ್ರೇಟರ್ ನೋಯ್ಡಾ ಪ್ರದೇಶದ ರಬುಪುರ ಗ್ರಾಮದ ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸಚಿನ್ ನೊಂದಿಗೆ ಸೀಮಾ ಹೈದರ್ ನ ಪ್ರೇಮ ಪಾಶಕ್ಕೆ ಬಿದ್ದಿದ್ದಳು. ಇವರಿಬ್ಬರು ಸಂಪರ್ಕಕ್ಕೆ ಬರಲು PUBG ಗೇಮ್‌ ಕಾರಣ ಎಂದು ಹೇಳಲಾಗಿದೆ.

ಪಬ್‌ಜಿ ಆಡುತ್ತಾ ಆಡುತ್ತಾ ಇಬ್ಬರು ಯಾವಾಗ ಪ್ರೀತಿಯ ಬಲೆಯಲ್ಲಿ ಬಿದ್ದರೋ ಗೊತ್ತಿಲ್ಲ. ತನಗಿಂತ ಪ್ರಾಯದಲ್ಲಿ ಸಣ್ಣವನಾಗಿದ್ದ ಸಚಿನ್‌ನ ತೆಕ್ಕೆಗೆ ಸೀಮ ಬಿದ್ದು, ಪಾಕಿಸ್ತಾನವನ್ನು ಬಿಟ್ಟು ನೇರವಾಗಿ ಭಾರತಕ್ಕೆ ಬಂದಿದ್ದಾಳೆ.

ಭಾರತಕ್ಕೆ ಬಂದ ಈಕೆ ತನ್ನ ಗುರುತು ಮರೆಮಾಚಿದ್ದಾಳೆ ಈಕೆ. ನಂತರ ಸಚಿನ್‌ ಬಾಡಿಗೆ ಮನೆಯಲ್ಲಿ ಪತ್ನಿ ಎಂದು ಹೇಳಿ ಇಟ್ಟುಕೊಂಡಿದ್ದ. ಆದರೆ ಯಾವಾಗ ನಾಪತ್ತೆ ಪ್ರಕರಣ ದಾಖಲಾಯಿತೋ ಪೊಲೀಸರು ಹುಡುಕಾಟದಲ್ಲಿ ಮನೆ ಮಾಲೀಕನನ್ನು ಮೊದಲಿಗೆ ವಿಚಾರಣೆ ಮಾಡಿದ್ದಾರೆ. ಆದರೆ ಆತನಿಗೆ ಈ ವಿಷಯ ಗೊತ್ತಿರಲಿಲ್ಲ. ಏಕೆಂದರೆ ಇದೊಂದು ರೀತಿಯಲ್ಲಿ ಪಾಕಿಸ್ತಾನಿ ಮಹಿಳೆಯನ್ನು ಅಕ್ರಮವಾಗಿ ಮನೆಯಲ್ಲಿಟ್ಟ ಪ್ರಕರಣವಾಗಿತ್ತು.

ಮೇ ತಿಂಗಳಲ್ಲಿ ಸಚಿನ್‌ ಸೀಮಾಳನ್ನು ಆಕೆಯ ನಾಲ್ಕು ಮಕ್ಕಳೊಂದಿಗೆ ಕರೆದುಕೊಂಡು ಬಂದಿದ್ದು, ನಾನು ಕೋರ್ಟ್‌ ಮ್ಯಾರೇಜ್‌ ಆಗಿದ್ದೇನೆ ಎಂದು ಹೇಳಿದ್ದಾನೆ. ಇವನ ಮಾತನ್ನು ನಂಬಿದ ಮನೆ ಮಾಲೀಕ ಮನೆ ಬಾಡಿಗೆಗೆ ನೀಡಿದ್ದಾನೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Leave A Reply

Your email address will not be published.