Ranchi: ಗೂಗಲ್ ಮ್ಯಾಪ್ ನಂಬಿ ಯುವಕರ ಪ್ರಯಾಣ! ಇಬ್ಬರು ಸಾವು, ಓರ್ವ ಪಾರು!

latest news death news Two of the three who went with the help of Google Maps died

Ranchi: ರಾಂಚಿ: ಇಂದು ಮೊಬೈಲ್ ಎಂಬ ಮಾಯಾವಿ ಮೂಲಕ ಕ್ಷಣಮಾತ್ರದಲ್ಲಿಯೇ ಬೆರಳ ತುದಿಯಲ್ಲಿ ಎಲ್ಲ ಕೆಲಸ ಮಾಡಲು ಅನುವು ಮಾಡಿಕೊಟ್ಟಿದೆ. ಮೊಬೈಲ್ನಿಂದ ಎಷ್ಟು ಪ್ರಯೋಜನ ಪಡೆಯಬಹುದೋ ಅಷ್ಟೆ ತೊಂದರೆ ಕೂಡ ಇದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಇದಕ್ಕೆ ನಿದರ್ಶನ ಎಂಬಂತೆ ಜಾರ್ಖಂಡ್‌ನ ಗಿರಿಡಿಹ್‌ನಲ್ಲಿ ಮೂವರು ಯುವಕರು ಗೂಗಲ್ ಮ್ಯಾಪ್ ಬಳಸಿಕೊಂಡು ಮಾರ್ಗವನ್ನು ಹುಡುಕಿಕೊಂಡು ಹೋಗಿ ಸಮಸ್ಯೆಗೆ ಸಿಲುಕಿದ ಘಟನೆ ನಡೆದಿದ್ದು, ಗೂಗಲ್ ಮ್ಯಾಪ್ ಸಹಾಯದಿಂದ ಹೋದ ಮೂವರಲ್ಲಿ ಇಬ್ಬರು ಕೊಚ್ಚಿಹೋದ ದುರ್ಘಟನೆ ಬೆಳಕಿಗೆ ಬಂದಿದೆ.

ಈ ಮೂವರು ಯುವಕರು, ತಾವು ಅಂದುಕೊಂಡು ಸ್ಥಳಕ್ಕೆ ಹೋಗಲು ಗೂಗಲ್ ಮ್ಯಾಪ್ ಸಹಾಯ ಪಡೆದುಕೊಂಡಿದ್ದಾರೆ. ಆ ಮ್ಯಾಪ್ ನಿರ್ಮಾಣ ಹಂತದಲ್ಲಿರುವ ಸೇತುವೆಯ ಬಳಿಗೆ ತಲುಪಿದ್ದಾರೆ. ಎಂದು ಧುಮ್ಮಿಕ್ಕಿ ಹರಿಯುತ್ತಿದ್ದ ನದಿಯನ್ನು ದಾಟಲು ಯುವಕರು ಪ್ರಯತ್ನಿಸುತ್ತಿದ್ದಾಗ ಇಬ್ಬರು ಯುವಕರು ನದಿಯ ಪ್ರವಾಹಕ್ಕೆ ಕೊಚ್ಚಿಹೋಗಿದ್ದಾರೆ. ಒಬ್ಬ ಯುವಕ ಹೇಗೋ ತನ್ನ ಪ್ರಾಣ ಉಳಿಸಿಕೊಂಡಿದ್ದಾನೆ.

ಭಾನುವಾರ ರಾತ್ರಿ ಹಜಾರಿಬಾಗ್‌ನ ಮೂರು ಮಂದಿ ಸ್ನೇಹಿತರು ತಾವು ಅಂದುಕೊಂಡ ಸ್ಥಳಕ್ಕೆ ಹೋಗುವ ಸಲುವಾಗಿ ಗೂಗಲ್ ಮ್ಯಾಪ್ ನೆರವು ಪಡೆದಿದ್ದಾರೆ.ಆನಂದ್ ಚೌರಾಸಿಯಾ, ಮನೀಶ್ ಮೆಹ್ತಾ ಮತ್ತು ಶಂಕರ್ ಮೆಹ್ತಾ ಎಂಬ ಸ್ನೇಹಿತರು ಬೆಂಗಾಬಾದ್‌ನಿಂದ ಗಿರಿಡಿಹ್‌ನಲ್ಲಿರುವ ತಮ್ಮ ಮನೆಗೆ ಹಿಂತಿರುಗುತ್ತಿದ್ದರು ಎನ್ನಲಾಗಿದೆ.

ಮೂವರೂ ಯುವಕರು ತಮ್ಮ ಮನೆಗಳಿಗೆ ಬೈಕ್‌ನಲ್ಲಿ ಹೋಗುತ್ತಿದ್ದರಂತೆ. ಗೂಗಲ್ ಮ್ಯಾಪ್‌ನ ನೆರವಿನಿಂದ ಗಿರಿಡಿಹ್ ಕಾಲೇಜು ತಲುಪಿದ ಬಳಿಕ, ಗೂಗಲ್ ಮ್ಯಾಪ್ ಎರಡು ಮಾರ್ಗಗಳನ್ನು ತೋರಿಸಿದ್ದು, ಮ್ಯಾಪ್ ತೋರಿಸಿದ ಎರಡು ಮಾರ್ಗಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡ ಮೂವರು ಯುವಕರು ನಿರ್ಮಾಣ ಹಂತದಲ್ಲಿದ್ದ ಸೇತುವೆಗೆ ತಲುಪಿದ್ದಾರೆ. ಈ ಸಂದರ್ಭ ಯುವಕರಿಗೆ ತಾವು ಗೂಗಲ್ ಮ್ಯಾಪ್ ಮೂಲಕ ದಾರಿ ತಪ್ಪಿರುವ ವಿಚಾರ ಗೊತ್ತಾಗಿದೆ.

ಆ ಸೇತುವೆ ಕಾಮಗಾರಿ ನಡೆಯುತ್ತಿದೆ ಎಂಬ ವಿಚಾರ ತಿಳಿದಿದ್ದು , ಮರಳಿ ಹಿಂದಿರುಗಿ ಹೋಗುವ ಇಲ್ಲವೇ ಮತ್ತೊಂದು ದಾರಿಯ ಕಡೆಗೆ ಸಾಗಲು ಮೂವರಿಗೂ ದಾರಿ ಗೊತ್ತಾಗಿಲ್ಲ. ಹೀಗಾಗಿ, ಮೂವರಲ್ಲಿ ಶಂಕರ್ ಎಂಬ ಯುವಕ ಬೈಕ್‌ನಿಂದ ಕೆಳಗಿಳಿದು, ನೀರಿನಲ್ಲಿ ಆ ಕಡೆಯ ದಡವನ್ನು ಮುಟ್ಟಲು ಪ್ರಯತ್ನ ಪಟ್ಟು ನೀರಿಗೆ ಇಳಿದಿದ್ದು, ಈ ವೇಳೆ ಭಾರಿ ಮಳೆಗೆ ಪ್ರವಾಹ ಉಂಟಾಗಿದೆ. ಇದನ್ನು ತಿಳಿಯದೇ ಶಂಕರ್ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ.

ಶಂಕರ್ ನೀರಿನಲ್ಲಿ ಕೊಚ್ಚಿ ಹೋಗುತ್ತಿರುವುದನ್ನು ಗಮನಿಸಿ,ಇನ್ನಿಬ್ಬರು ಯುವಕರಾದ ಆನಂದ್ ಮತ್ತು ಮನೀಶ್, ಶಂಕರ್ ಕಾಪಾಡಲು ನದಿಗೆ ಇಳಿದಿದ್ದು, ಆದರೆ ನದಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರವಾಹ ಇದ್ದ ಹಿನ್ನೆಲೆ ಇಬ್ಬರು ಯುವಕರು ಕೊಚ್ಚಿಕೊಂಡು ಹೋಗಿ ಮೃತಪಟ್ಟಿದ್ದಾರೆ. ಆದರೆ, ಇವರಲ್ಲಿ ಶಂಕರ್ ಪವಾಡ ಸದೃಶ ರೀತಿಯಲ್ಲಿ ಪಾರಾಗಿ ಅಪಾಯದ ಸುಳಿಯಿಂದ ಪಾರಾಗಿದ್ದಾನೆ.

ಶಂಕರ್ ನೀಡಿದ ಮಾಹಿತಿಯ ಅನುಸಾರ, ಸೋಮವಾರ ಮುಳುಗುಗಾರರ ತಂಡವು ಆನಂದ್ ಮತ್ತು ಮನೀಶ್ ಮೆಹ್ತಾ ಅವರ ಮೃತದೇಹಗಳನ್ನು ಹೊರತೆಗೆದಿದ್ದಾರೆ ಎಂದು ತಿಳಿದುಬಂದಿದೆ. ಸದರ್ ಉಪವಿಭಾಗಾಧಿಕಾರಿ ವಿಶಾಲ್ದೀಪ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಕೆಲ ದಿನಗಳ ಹಿಂದೆ ಈ ಸೇತುವೆ ಮೇಲೆ ಅಪಘಾತವೊಂದು ಸಂಭವಿಸಿದ ಹಿನ್ನೆಲೆಯಲ್ಲಿ ಉಸ್ರಿ ನದಿಗೆ ಕಟ್ಟಲಾಗಿದ್ದ ಹಳೆ ಸೇತುವೆಯನ್ನು ಕೆಡವಿ ಹೊಸ ಸೇತುವೆ ನಿರ್ಮಾಣ ಮಾಡಲಾಗುತ್ತಿತ್ತು. ಈ ವಿಚಾರವನ್ನು ತಿಳಿಯದೇ ಯುವಕರು ನೀರು ಪಾಲಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

 

ಇದನ್ನು ಓದಿ: Bengalore: ನಾಯಿಯೊಂದಿಗೆ ಏಕಾಂಗಿ ಜೀವನ! ಕೊನೆಗೆ ನಾಯಿ ಬೆಲ್ಟ್ ನಿಂದಲೇ ಆತ್ಮಹತ್ಯೆ!

Leave A Reply

Your email address will not be published.