Bengalore: ನಾಯಿಯೊಂದಿಗೆ ಏಕಾಂಗಿ ಜೀವನ! ಕೊನೆಗೆ ನಾಯಿ ಬೆಲ್ಟ್ ನಿಂದಲೇ ಆತ್ಮಹತ್ಯೆ!

latest news Man commits suicide by using dog belt in bengalore

bengalore: ಇತ್ತೀಚಿನ ಕೆಲ ವರ್ಷಗಳಲ್ಲಿ ಸಣ್ಣ ಹರೆಯದಲ್ಲೇ ಆತ್ಮಹತ್ಯೆಗೆ ಶರಣಾಗುತ್ತಿರುವ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ಅದರಲ್ಲೂ ಮಾನಸಿಕವಾಗಿ ಕುಗ್ಗಿ ಪರಿಸ್ಥಿತಿಯನ್ನು ಎದುರಿಸಲಾಗದೆ ಸಾವಿನ ದವಡೆಗೆ ಸಿಲುಕುವ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಇದೀಗ, ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಕೊರಲೊಡ್ಡಿದ ಘಟನೆ ನಡೆದಿದೆ.

ರಾಜಧಾನಿ ಬೆಂಗಳೂರಿನಲ್ಲಿ (bengalore) ನಾಯಿಯೊಂದಿಗೆ ಒಬ್ಬಂಟಿಯಾಗಿ ವಾಸಿಸುತ್ತಿದ್ದ ವ್ಯಕ್ತಿ ನಾಯಿಯ ಬೆಲ್ಟ್ ಮುಖಾಂತರ ನೇಣಿಗೆ ಶರಣಾಗಿದ್ದಾನೆ. ಮೃತಪಟ್ಟ ಯುವಕನನ್ನು ಆರ್ಯಮಾನ್ ಘೋಷ್ (22) ಎಂದು ಗುರುತಿಸಲಾಗಿದೆ. ಆತ್ಮಹತ್ಯೆ ಮಾಡಿಕೊಂಡ ಯುವಕ ಮೈಕೋ ಬಡಾವಣೆಯ ಸಾರ್ವಭೌಮನಗರದ ಬಾಡಿಗೆ ಮನೆಯಲ್ಲಿ ನೆಲೆಸಿದ್ದ.ಒಬ್ಬಂಟಿಯಾಗಿ ನೆಲೆಸಿದ್ದ ಈತ ಇತ್ತೀಚೆಗೆ ಮಾನಸಿಕ ಖಿನ್ನತೆಗೆ ಜಾರಿದ್ದ ಎನ್ನಲಾಗಿದೆ. ನಿನ್ನೆ ಆತ್ಮಹತ್ಯೆ ಶರಣಾಗಿರುವ ಯುವಕ ಸಾವಿಗೆ ತಾನೇ ಕಾರಣ ಎಂದು ಬರೆದಿರುವ ಡೆತ್ನೋಟ್ ಲಭ್ಯವಾಗಿದೆ ಎಂದು ತಿಳಿದುಬಂದಿದೆ. ಸದ್ಯ, ಈ ಕುರಿತು ಮೈಕೋ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.

Leave A Reply

Your email address will not be published.