Intresting news: ಅಂತ್ಯಕ್ರಿಯೆ ವೇಳೆ ಹಠಾತ್ತನೆ ಎದ್ದು ಕುಳಿತ ಮಹಿಳೆ: ಕುಟುಂಬಸ್ಥರಲ್ಲಿ ಅಚ್ಚರಿ

latest news woman sitting up suddenly during a funeral

Intresting news: ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ ಎಂಬ ಮಾತು ಹೆಚ್ಚು ಪ್ರಚಲಿತ. ಜೀವನವೆಂಬ ಪಯಣದಲ್ಲಿ ಸುಖ, ದುಃಖ, ಸೋಲು – ಗೆಲುವು ಹೀಗೆ ನಾನಾ ಬಗೆಯ ಪಾಠಗಳನ್ನು ಕಲಿಯುವುದಂತು ಸ್ಪಷ್ಟ. ಜಗತ್ತಿನಲ್ಲಿ ನಡೆಯುವ ಕೆಲವೊಂದು ಘಟನೆಗಳು ನಮ್ಮ ಊಹೆಗೂ ಮೀರಿದ ಜೊತೆಗೆ ಅಚ್ಚರಿಗೆ ನೂಕುವ ಪ್ರಮೇಯವನ್ನು ಅಲ್ಲಗಳೆಯುವಂತಿಲ್ಲ.ಇದೇ ರೀತಿಯ ಅಚ್ಚರಿ ಮೂಡಿಸುವ ಘಟನೆಯೊಂದು ವರದಿಯಾಗಿದೆ.

ಥಾಯ್ಲೆಂಡ್ನ ಉಡಾನ್ ಥಾನಿ ಪ್ರಾಂತ್ಯದಲ್ಲಿ ಮಹಿಳೆಯು ತನ್ನ ಅಂತ್ಯಕ್ರಿಯೆಯ ವೇಳೆ ಇದ್ದಕ್ಕಿದಂತೆ ಎದ್ದಾಗ ಕುಟುಂಬಸ್ಥರು ಗಲಿಬಿಲಿಯಾದ ಘಟನೆ ಜೂನ್ 29ರಂದು ನಡೆದಿದೆ ಎಂದು ತಿಳಿದುಬಂದಿದೆ.ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆಯಲ್ಲಿ ವೈದ್ಯರು ತಿಳಿಸಿದ್ದು, ವೈದ್ಯರು ಆಕೆ ಯಕೃತ್ತಿನ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಚಿಕಿತ್ಸೆಯ ವೇಳೆಗೆ ಆಕೆ ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ ಎಂದಿದ್ದರಂತೆ.

ಮೃತ ಮಹಿಳೆಯ ವೃದ್ಧ ತಾಯಿ ತನ್ನ ಸಂಬಂಧಿಕರಿಗೆ ಕರೆ ಮಾಡಿ ಆಕೆ ಇನ್ನೂ ಹೆಚ್ಚು ಸಮಯ ಬದುಕಲು ಸಾಧ್ಯವಿಲ್ಲ ಎಂಬ ವಿಚಾರವನ್ನು ತಿಳಿಸಿದ್ದಾರೆ. ಇದರ ಜೊತೆಗೆ ಮಹಿಳೆಗೆ ತನ್ನ ಸಾವಿನ ಮೊದಲಿನ ಕೊನೆಯ ಕ್ಷಣಗಳನ್ನು ತನ್ನ ಕುಟುಂಬಸ್ಥರೊಂದಿಗೆ ಕಳೆಯಬೇಕು ಎಂಬ ಬಯಕೆ ಇತ್ತಂತೆ. ಹೀಗಾಗಿ ಆಕೆಯನ್ನು ಮನೆಗೆ ಕರೆದುಕೊಂಡು ಹೋಗಲು ತಾಯಿ ವ್ಯವಸ್ಥೆ ಮಾಡಿದ್ದಾರೆ.

ಆದರೆ ಮಾರ್ಗಮಧ್ಯದಲ್ಲಿಯೇ ಆಕೆಯ ಉಸಿರಾಟ ಕ್ರಿಯೆ ಸ್ಥಗಿತಗೊಂಡಿದೆ ಎಂದು ವೃದ್ಧ ತಾಯಿ ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲದೆ, 49 ವರ್ಷದ ಮಹಿಳೆಯ ಉಸಿರಾಟ ಶಾಶ್ವತವಾಗಿ ಬಂದ್ ಆಗಿರುವುದನ್ನು ವೈದ್ಯರು ಖಚಿತಪಡಿಸಿದ್ದಾರೆ. ಹೀಗಾಗಿ, ಮೃತ ಮಹಿಳೆಯ ಶವವನ್ನು ಕುಟುಂಬಸ್ಥರು ಆಸ್ಪತ್ರೆಯಿಂದ ರವಾನೆ ಮಾಡಿದ್ದಾರೆ.

ಪೋನ್ಲಾ ದೇಹವನ್ನು ಮನೆಗೆ ಕೊಂಡೊಯ್ಯುವ ಬದಲು ಶವವನ್ನು ರಾತ್ರಿಯಿಡೀ ಫಡುಂಗ್ ಪಟ್ಟಣದ ದೇವಸ್ಥಾನದ ಬಳಿಯಲ್ಲಿ ಇಟ್ಟಿದ್ದರಂತೆ. ಮಹಿಳೆ ಮೃತಪಟ್ಟ ವಿಚಾರ ತಿಳಿದು ದುಃಖದ ಮಡುವಿನಲ್ಲಿದ್ದ ಕುಟುಂಬ ಬೌದ್ಧ ಸಂಪ್ರದಾಯದ ಅನುಸಾರ ಆಕೆಯ ಅಂತ್ಯಕ್ರಿಯೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ಮಹಿಳೆ ಏಕಾಏಕಿ ಎಚ್ಚರಗೊಂಡದ್ದು ಮನೆಯವರಿಗೆ ಅಚ್ಚರಿ,ಭಯ ಮೂಡಿಸಿದೆ.

Leave A Reply

Your email address will not be published.