Rishab Shetty: ರಿಷಬ್ ಶೆಟ್ಟೀನ ಖುದ್ದಾಗಿ ಭೇಟಿಯಾಗೋ ಅಪಾಯಿಂಟ್ ಮೆಂಟ್ ಬೇಕಾ ? ಹಾಗಾದ್ರೆ ಈ ಪೋಸ್ಟ್ ನಿಮಗೆ !

latest news Do you need an appointment to meet Rishab Shetty personally

Rishab Shetty: ಕಾಂತಾರ ಸಿನಿಮಾದ ಮೂಲಕ ಜಗತ್ತಿನಾದ್ಯಂತ ಸಂಚಲನ ಸೃಷ್ಟಿ ಮಾಡಿದ ನಟ ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಅವರಿಗೆ ಡಿವೈನ್ ಸ್ಟಾರ್ ಅನ್ನೋ ಪಟ್ಟ ಸಿಕ್ಕಿ ರಾತ್ರೋ ರಾತ್ರಿ ಫ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರ ಹೊಮ್ಮಿದ್ದಾರೆ. ಇದೀಗ, ರಿಷಬ್ ಶೆಟ್ಟಿಯವರು, ‘ಕಾಂತಾರʼ ಸಿನಿಮಾದ ಯಶಸ್ಸಿನ ಗುಂಗಿನಿಂದ ಹೊರ ಬಂದು ಮೈಕೊಡವಿ ಹೊಸ ಚಿತ್ರ ನಿರ್ಮಾಣದ ತಯಾರಿಯಲ್ಲಿ ಮುಳುಗಿದ್ದಾರೆ. ಈ ನಡುವೆ, ಕಾಂತಾರ ಸಿನಿಮಾದ ತಮ್ಮೆಲ್ಲಾ ಈ ಯಶಸ್ಸಿಗೆ ಅಭಿಮಾನಿಗಳು ಕೊಡುತ್ತಿರುವ ಪ್ರೀತಿ, ಹಾರೈಕೆ, ಪ್ರೋತ್ಸಾಹವೇ ಮೂಲ ಕಾರಣ ಎನ್ನುವ ಮೂಲಕ ಡಿವೈನ್ ಸ್ಟಾರ್ ಮತ್ತೊಮ್ಮೆ ಜನರ ಮನ ಗೆದ್ದಿದ್ದಾರೆ.

ಈ ನಡುವೆ ಕರಾವಳಿಯ ಕಲೆಯನ್ನು ಬಿಂಬಿಸಿ ತುಳುನಾಡಿನ ಸಂಸ್ಕೃತಿಯ ವೈಭವವನ್ನು ಜಗತ್ತಿಗೆ ಸಾರಿದ ಖ್ಯಾತಿ ಕಾಂತಾರ ಸಿನಿಮಾಗೆ ದಕ್ಕಲೆಬೇಕು. ನಿರ್ದೇಶಕ-ನಟ ರಿಷಬ್ ಶೆಟ್ಟಿ ಅವರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಎಂಬಂತೆ ಇಡೀ ಭಾರತೀಯ ಚಿತ್ರರಂಗವೇ ಕನ್ನಡದ ಸಿನಿಮಾವನ್ನು ನೋಡಿ ಸಿನಿ ರಂಗದ ಗಣ್ಯಾತಿ ಗಣ್ಯರು ಕೂಡ ಹೊಗಳಿ ಕೊಂಡಾಡಿದ್ದರು. ಇದೀಗ, ರಿಷಬ್ ಶೆಟ್ಟಿ ತಮ್ಮ ಅಭಿಮಾನಿಗಳಿಗೆ ಸೂಪರ್ ಡೂಪರ್ ಗುಡ್ ನ್ಯೂಸ್ ನೀಡಿದ್ದಾರೆ. ಕಾಂತಾರ ಸಿನಿಮಾ ರಿಲೀಸ್ ಆದ ಬಳಿಕ ಒಮ್ಮೆ ರಿಷಬ್ ಅವರನ್ನ ನೋಡಿದರೆ ಸಾಕಪ್ಪಾ! ಎಂದು ಎಷ್ಟು ಮಂದಿ ಅಂದುಜಿಂಡಿದ್ದರೋ ಏನೋ? ಅವರ ಪಕ್ಕ ನಿಂತು ಒಂದು ಸೆಲ್ಫಿ ತೆಗೆದುಕೊಳ್ಳಬೇಕು, ಅವರನ್ನ ಭೇಟಿಯಾಗಲೇಬೇಕು ಎಂದು ಹಪಹಪಿಸುವ ಅಭಿಮಾನಿ ದೇವರುಗಳಿಗೆ ಶೆಟ್ರು, ತಮ್ಮನ್ನು ಭೇಟಿ ಆಗಲು ಸುವರ್ಣ ಅವಕಾಶ ಕಲ್ಪಿಸಿದ್ದಾರೆ.

ತಮ್ಮ ನೆಚ್ಚಿನ ಸ್ಟಾರ್ ಗಳ ಜೊತೆಗೆ ಮಾತಾಡಬೇಕು, ಆಟೋಗ್ರಾಫ್ ತೆಗೆದುಕೊಳ್ಳಬೇಕೆಂದು ಸಾಮಾನ್ಯವಾಗಿ ಎಲ್ಲರೂ ಬಯಸುವುದು ಸಹಜ. ಹಾಗೆ ಅಂದುಕೊಂಡ ಕೂಡಲೇ ಸ್ಟಾರ್ ಗಳನ್ನೂ ಮೀಟ್ ಮಾಡೋದೂ ಸುಲಭವು ಅಲ್ಲ. ಹೀಗಿರುವಾಗ, ಜುಲೈ 7ರಂದು ರಿಷಬ್ ಅವರ ಹುಟ್ಟುಹಬ್ಬದ ಸಂಭ್ರಮಕ್ಕೆ ಜನ್ಮದಿನದ ಸಂಭ್ರಮವನ್ನು ಇಮ್ಮಡಿ ಮಾಡುವ ದೆಸೆಯಲ್ಲಿ ಅಭಿಮಾನಿಗಳ ಜತೆ ಅದ್ಧೂರಿಯಾಗಿ ಜನ್ಮದಿನ ಆಚರಿಸಿಕೊಳ್ಳಲು ಯೋಜನೆ ಹಾಕಿಕೊಂಡಿದ್ದಾರೆ.

ಈ ಕುರಿತು ಖುದ್ದು ರಿಷಬ್ ಶೆಟ್ಟಿಯವರೇ ವಿಡಿಯೋ ಸಂದೇಶ ಮೂಲಕ ಅಭಿಮಾನಿಗಳಿಗೆ ಆಹ್ವಾನ ಕೊಟ್ಟಿದ್ದಾರೆ. ಕೆರಾಡಿ ಎಂಬ ಸಣ್ಣ ಹಳ್ಳಿಯಿಂದ ಸಿನಿಮಾ ಕನಸು ಕಟ್ಟಿಕೊಂಡು ಬಂದ ನನಗೆ ಇಷ್ಟೊಂದು ಪ್ರೀತಿ ತೋರಿಸಿದ್ದೀರಿ ಅಷ್ಟೇ ಅಲ್ಲದೇ, ಇಲ್ಲಿಯವರೆಗೆ ಕರೆತಂದಿದ್ದೀರಿ.
ನೀವು ಇಷ್ಟೆಲ್ಲ ಪ್ರೀತಿ ತೋರಿದಾಗ ಅದನ್ನು ನಿಭಾಯಿಸುವುದು ಹೇಗೆ ಎಂಬುದು ತಿಳಿಯುತ್ತಿಲ್ಲ. ವಿಶೇಷವಾಗಿ, ‘ಕಾಂತಾರ’ ಸಿನಿಮಾ ರಿಲೀಸ್ ಆದ ಬಳಿಕ ಎಷ್ಟೋ ಮಂದಿ ಮನೆಯ ಬಳಿ, ನಾನು ಓಡಾಡುವಾಗ, ಹೀಗೆ ಅನೇಕ ಬಾರಿ ನನ್ನನ್ನೂ ಭೇಟಿಯಾಗಲು ಪ್ರಯತ್ನಿಸಿದ್ದೀರಾ! ಆದರೆ, ಕೆಲವರನ್ನು ಭೇಟಿ ಆಗಲೂ ಸಾಧ್ಯವಾಗಿಲ್ಲ. ಹೀಗಾಗಿ, ನನ್ನ ಜನ್ಮ ದಿನದಂದು ಅಂದರೆ ಇದೇ ಜುಲೈ 7ರ ಮಧ್ಯಾಹ್ನ 3ಕ್ಕೆ ಬೆಂಗಳೂರಿನ ನಂದಿ ಲಿಂಕ್ ಗ್ರೌಂಡ್ನಲ್ಲಿ ನಿಮ್ಮನ್ನು ಭೇಟಿಯಾಗಲು ನಾನು ಕಾಯುತ್ತಿರುತ್ತೇನೆ. ಅಲ್ಲಿಗೆ ನೀವೆಲ್ಲಾ ಬನ್ನಿ ಭೇಟಿಯಾಗೋಣ ಮಾತನಾಡೋಣ ಎನ್ನುವ ಮೂಲಕ ರಿಷಬ್ ಶೆಟ್ಟಿ ತಮ್ಮ ಜನ್ಮದಿನಾಚರಣೆಗೆ ಅಭಿಮಾನಿಗಳೆಲ್ಲರಿಗೆ ಮುಕ್ತ ಆಹ್ವಾನ ನೀಡಿ ಸಿಹಿ ಸುದ್ದಿಯನ್ನು ನೀಡಿದ್ದಾರೆ.

 

Leave A Reply

Your email address will not be published.