Intresting news: ಇನ್ನು ಭಾರತದಲ್ಲಿ ಹೊಸ ಕಾರು ಅತ್ಯಂತ ಸೇಫ್: ಕೇಂದ್ರದಿಂದ ಹೊಸ ರೂಲ್ಸ್ ಜಾರಿ !

Intresting news: ಇನ್ನು ಭಾರತದಲ್ಲಿ ಹೊಸ ಕಾರು ಅತ್ಯಂತ ಸೇಫ್: ಕೇಂದ್ರದಿಂದ ಹೊಸ ರೂಲ್ಸ್ ಜಾರಿ !

 

 

Intresting news: ಪ್ರಯಾಣಿಕರ ಸುರಕ್ಷತೆಯನ್ನು ಉತ್ತೇಜಿಸಲು, ಅಕ್ಟೋಬರ್‌ನಿಂದ ಕ್ರ್ಯಾಶ್ ಟೆಸ್ಟ್ ಕಾರ್ಯಕ್ಷಮತೆಯ ಆಧಾರದ ಮೇಲೆ ಕಾರುಗಳಿಗೆ ಸ್ಟಾರ್ ರೇಟಿಂಗ್ ನೀಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. ಕ್ರ್ಯಾಶ್ ಟೆಸ್ಟ್ ಅಂದ ಕೂಡಲೇ ಕಾರು ಮಾರುಕಟ್ಟೆ ಗಾಬರಿಯಾಗುವ ಅವಶ್ಯಕತೆ ಇಲ್ಲ. ಕೇಂದ್ರ ಸರ್ಕಾರ ಉದ್ದೇಶಿಸಲಾಗಿರುವ ದೇಶೀಯ ಕ್ಲಾಸ್ ಟೆಸ್ಟ್ ಉಂಟಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಒತ್ತಿ ಹೇಳಿದೆ. ಈ ರೇಟಿಂಗ್‌ಗಳು ವಾಹನದ ಬೆಲೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೆಚ್ಚಿನ ರೇಟಿಂಗ್ ಹೊಂದಿರುವ ಆಟೋಮೊಬೈಲ್‌ಗಳು, ರಸ್ತೆ ಅಪಘಾತಗಳಲ್ಲಿ ಸಾವಿನ ಸಂಖ್ಯೆ ಗಣನೀಯವಾಗಿ ಕಡಿಮೆ ಮಾಡುತ್ತವೆ ಎಂದು ಆ ಅಧಿಕಾರಿ ಹೇಳಿದ್ದಾರೆ

ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಕೇಂದ್ರ ಸಚಿವ ನಿತಿನ್ ಅವರು ಸುರಕ್ಷತಾ ವಿಷಯದಲ್ಲಿ ಅಮೂಲಾಗ್ರಾ ಬದಲಾವಣೆಯನ್ನು ತರುತ್ತಿದ್ದಾರೆ. ಮೊದಲು ಕಾರುಗಳಿಗೆ ಎರಡು ಆಯುರ್ವೇದ ಕಡ್ಡಾಯ ಮಾಡಿದರು. ಇದೀಗ ಹೆಚ್ಚಿನ ಸುರಕ್ಷಾ ಮಟ್ಟವನ್ನು ಹಲವು ರೀತಿಯಲ್ಲಿ ಹೊಸ ವಾಹನಗಳಲ್ಲಿ ಅಳವಡಿಸಲು ಕಾನೂನನ್ನೇ ತರಲಾಗಿದೆ. ಇತ್ತೀಚಿಗೆ ಸರಕು ಸಾಗಣೆ ವಾಹನಗಳಲ್ಲಿ ಕೂಡ ವಾಹನ ಚಾಲಕರು ದೂರ ದೂರದ ಪ್ರಯಾಣ ಮಾಡುವ ಸಂದರ್ಭದಲ್ಲಿ ಆಗುವ ಸಂದರ್ಭದಲ್ಲಿ ಚಾಲಕರಿಗೆ ಸುಸ್ತಾಗಿ, ಆ ಕಾರಣದಿಂದ ವಾಹನ ಅಪಘಾತ ಆಗುತ್ತಿದೆ. ಅದಕ್ಕಾಗಿ ಸರಕು ಸಕನೆಯ ವಾಸನೆಗಳಾದ ಟೆಂಪೋ, ಲಾರಿ ,ಕ್ಯಾಂಟರ್, ಟ್ರಕ್, ಕಂಟೈನರ್ ಮುಂತಾದವುಗಳ ಕ್ಯಾಬಿನ್ ಗಳಲ್ಲಿ ಎಸಿ ಅಳವಡಿಸಲು ಕೇಂದ್ರ ಸರಕಾರ ಕ್ರಮ ಕೈಗೊಂಡಿತ್ತು. ಇದೀಗ ಎಲ್ಲಾ 8 ಸೀಟಿಗಿಂತ ಕೆಳಗಿನ ಕಾರುಗಳನ್ನು ಅಂತರಾಷ್ಟ್ರೀಯ NCAP ಮಾದರಿಯ ಕ್ರ್ಯಾಶ್ ಟೆಸ್ಟ್ ರೀತಿಯಲ್ಲಿಯೇ ದೇಶಿಯ ಸುರಕ್ಷತಾ ಕ್ರಾಶ್ ಟೆಸ್ಟ್ ಅನ್ನು ಸರ್ಕಾರ ನಿರ್ಧರಿಸಿದೆ.

ಯಾಕೆಂದರೆ ಭಾರತದಲ್ಲಿ ರಸ್ತೆ ಸುರಕ್ಷತೆ ಅತ್ಯಂತ ಕೆಳಮಟ್ಟದಲ್ಲಿದೆ. ಭಾರತದಲ್ಲಿ 2021ರಲ್ಲಿ ರಸ್ತೆ ಅಪಘಾತಗಳಿಂದ ಕನಿಷ್ಠ 1.53 ಲಕ್ಷ ಜನರು ಸಾವನ್ನಪ್ಪಿದ್ದಾರೆ. ಇದು 2011 ರಿಂದ ಅತಿ ಹೆಚ್ಚು ಎಂದು ವರದಿಯೊಂದು ತಿಳಿಸಿದೆ. ಹಾಗಾಗಿ ಅಕ್ಟೋಬರ್ 1 ರಿಂದ, ಭಾರತದಲ್ಲಿ ತಯಾರಾದ ಕಾರುಗಳು ಮತ್ತು ಆಮದು ಮಾಡಿಕೊಳ್ಳುವ ಕಾರುಗಳಿಗೆ ಕ್ರ್ಯಾಶ್ ಟೆಸ್ಟ್‌ಗಳಲ್ಲಿನ ಕಾರ್ಯಕ್ಷಮತೆಯ ಆಧಾರದ ಮೇಲೆ ಸ್ಟಾರ್ ರೇಟಿಂಗ್ ನೀಡಲಾಗುವುದು ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಅಧಿಸೂಚನೆಯಲ್ಲಿ ತಿಳಿಸಿದೆ.

ಭಾರತ್ ನ್ಯೂ ಕಾರ್ ಅಸೆಸ್‌ಮೆಂಟ್ ( BNCAP): ಪ್ರೋಗ್ರಾಂ’ (ಭಾರತ್-ಎನ್‌ಸಿಎಪಿ) 3.5 ಟನ್‌ಗಿಂತ ಕಡಿಮೆ ಒಟ್ಟು ತೂಕದ ವರ್ಗದ M1 ವಾಹನಗಳಿಗೆ ಅನ್ವಯಿಸುತ್ತದೆ ಎಂದು ಕಳೆದ ವಾರ ಸರ್ಕಾರ ಅಧಿಸೂಚನೆ ಹೊರಡಿಸಿದೆ. M1 ವರ್ಗವು ಪ್ರಯಾಣಿಕರ ಸಾಗಣೆಗೆ ಬಳಸುವ ಮೋಟಾರು ವಾಹನಗಳನ್ನು ಒಳಗೊಂಡಿದ್ದು, ಇಲ್ಲಿ ಚಾಲಕನ ಸೀಟಿನ ಜೊತೆಗೆ 8 ಆಸನಗಳಿಗಿಂತ ಹೆಚ್ಚಿಲ್ಲದ ವಾಹನಗಳಿಗೆ.ಇದು ಅನ್ವಯ ಆಗಲಿದೆ. ಪ್ರಮಾಣಿತ ಪ್ರಯೋಗಾಲಯ ಪರೀಕ್ಷೆಗಳ ಆಧಾರದ ಮೇಲೆ ಕಾರುಗಳ ಕ್ರ್ಯಾಶ್ ಸುರಕ್ಷತೆ ಟೆಸ್ಟ್ ನಡೆಸಲಾಗುವುದು. ಒಟ್ಟಾರೆ ಮೌಲ್ಯಮಾಪನವು ವಾಹನದ ಮಾದರಿಯ ಕಾರ್ಯಕ್ಷಮತೆಯನ್ನು ಆಧರಿಸಿದೆ – ಅದು, ವಯಸ್ಕ ನಿವಾಸಿಗಳ ರಕ್ಷಣೆ; ಮಕ್ಕಳ ನಿವಾಸಿಗಳ ರಕ್ಷಣೆ; ಮತ್ತು ಸೇಫ್ಟಿ ಅಸಿಸ್ಟ್ ಟೆಕ್ನಾಲಜೀಸ್. ಪ್ರತಿಯೊಂದು ಮೌಲ್ಯಮಾಪನ ಕ್ಷೇತ್ರಗಳಿಗೆ ಪ್ರತ್ಯೇಕ ಪರೀಕ್ಷೆಗಳು ಮತ್ತು ಮೌಲ್ಯಮಾಪನಗಳಿವೆ.

ಅಂತಿಮ ಕರಡು ನೀತಿಯ ಪ್ರಕಾರ, ಭಾರತ್-ಎನ್‌ಸಿಎಪಿ ಹೊಸ ವಾಹನಕ್ಕೆ ವಯಸ್ಕ ನಿವಾಸಿಗಳ ರಕ್ಷಣೆ ಮತ್ತು ಮಕ್ಕಳ ಚಾಲಕರ ರಕ್ಷಣೆಗಾಗಿ ಸಂಪೂರ್ಣ ವಾಹನ ಅಪಘಾತ ಪರೀಕ್ಷೆಗಳಲ್ಲಿನ ಕಾರ್ಯಕ್ಷಮತೆ ಮತ್ತು ಪಡೆದ ಸ್ಕೋರ್ ಮತ್ತು ಸುರಕ್ಷತಾ ಸಹಾಯ ತಂತ್ರಜ್ಞಾನಗಳ ಫಿಟ್‌ಮೆಂಟ್‌ಗಳ ಆಧಾರದ ಮೇಲೆ ಕಾರುಗಳಿಗೆ ಪ್ರತ್ಯೇಕ ಪ್ರತ್ಯೇಕ ರೇಟಿಂಗ್‌ಗಳನ್ನು ನೀಡುತ್ತದೆ. BNCP ಸ್ಟಾರ್ ರೇಟಿಂಗ್‌ನ ಮೌಲ್ಯಮಾಪನಕ್ಕಾಗಿ ಹೊಸ ಕಾರಿನಲ್ಲಿ ಮಾಡಬೇಕಾದ ಮೂರು ಕ್ರ್ಯಾಶ್ ಪರೀಕ್ಷೆಗಳು ಯಾವುಗಳೆಂದರೆ ಆಫ್‌ ಸೆಟ್ ಡಿ ಫಾರ್ಮಬಲ್ ಬ್ಯಾರಿಯರ್ ಫ್ರಂಟಲ್ ಇಂಪ್ಯಾಕ್ಟ್ ಟೆಸ್ಟ್, ಸೈಡ್ ಇಂಪ್ಯಾಕ್ಟ್ ಟೆಸ್ಟ್ ಮತ್ತು ಪೋಲ್ ಸೈಡ್ ಇಂಪ್ಯಾಕ್ಟ್ ಟೆಸ್ಟ್.

Leave A Reply

Your email address will not be published.