DCM DK Shivakumar: ರಾಜ್ಯದ ಮಹಿಳೆಯರಿಗೆ ಡಿಸಿಎಂ ನೀಡಿದ್ರು ವೆರಿ ಬಿಗ್ ಅಪ್ಡೇಟ್! ಈ ಸುದ್ದಿ ನಿಮ್ಮ ಮುಖದ ಮಂದಹಾಸ ಹೆಚ್ಚಿಸುತ್ತೆ!

DCM DK Shivakumar: ರಾಜ್ಯದ ಮಹಿಳೆಯರಿಗೆ ಡಿಸಿಎಂ ನೀಡಿದ್ರು ವೆರಿ ಬಿಗ್ ಅಪ್ಡೇಟ್! ಈ ಸುದ್ದಿ ನಿಮ್ಮ ಮುಖದ ಮಂದಹಾಸ ಹೆಚ್ಚಿಸುತ್ತೆ!

 

DCM DK Shivakumar: ಲೋಕಸಭಾ ಚುನಾವಣೆಗೆ ಇನ್ನೇನು ಒಂದು ವರ್ಷ ಬಾಕಿ ಇದೆ. ಈ ಸಂದರ್ಭದಲ್ಲಿ ಕಾಂಗ್ರೆಸ್‌ ಹೇಗಾದರೂ ಮಾಡಿ ಹೆಚ್ಚಿನ ಕ್ಷೇತ್ರಗಳನ್ನು ಗೆಲ್ಲುವ ಉತ್ಸಾಹದಲ್ಲಿದೆ. ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವಿಗೆ ಒಂದು ಕಾರಣವಾಗಿದ್ದ, ಐದು ಗ್ಯಾರಂಟಿಗಳನ್ನು ಲೋಕಸಭಾ ಚುನಾವಣೆಯಲ್ಲೂ ಕೂಡ ಪ್ರಯೋಗ ಮಾಡಲು ನಿರ್ಧಾರ ಮಾಡಿದೆ.

ರಾಮನಗರದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar ) ಅವರು ಮಹಿಳೆಯರಿಗೆ ಮತ್ತು ಪಡಿತರ ಚೀಟಿದಾರರಿಗೆ ಶುಭ ಸುದ್ದಿಯನ್ನು ನೀಡಿದ್ದಾರೆ. ಗೃಹಲಕ್ಷ್ಮಿ ಯೋಜನೆಯಡಿ ಹೆಣ್ಣು ಮಕ್ಕಳಿಗೆ 2000 ರೂ.ಬ್ಯಾಂಕ್ ಖಾತೆಗೆ ಜಮೆ ಮಾಡುವ ಕುರಿತು ಮಾಹಿತಿ ನೀಡಿದ್ದಾರೆ. ಆಗಸ್ಟ್ 14 ರಂದು ಹಣ ಪಡೆಯಲು ನೋಂದಣಿ ಮಾಡಿಕೊಂಡಿರಬೇಕು. ಇದರ ಜೊತೆಗೆ ಮಹಿಳೆಯರಿಗೆ ಕೆಲವು ಸಲಹೆಗಳನ್ನು ನೀಡಿರುವ ಡಿಕೆಶಿ ಪುರುಷರಿಗೆ ಖಾತೆ ಸಂಖ್ಯೆಯನ್ನು ನೀಡದಂತೆ ತಿಳಿಸಿದ್ದಾರೆ.

ರಾಮನಗರದಲ್ಲಿ ಡಿಕೆ ಶಿವಕುಮಾರ್ ಕುಮಾರಸ್ವಾಮಿಯವರಿಗೆ ಟಾಂಗ್ ನೀಡಿದ್ದು 5 ಗ್ಯಾರಂಟಿಗಳನ್ನ ಕೊಡುವ ಮೂಲಕ ನಿಮ್ಮ ಬದುಕಿನಲ್ಲಿ ಬದಲಾವಣೆ ತಂದಿದ್ದೇವೆ .ಈ ತಿಂಗಳಿನಿಂದ ಯಾರೂ ಕರೆಂಟ್ ಬಿಲ್ ಕಟ್ಟಬೇಕಾಗಿಲ್ಲ. ಮುಂದಕ್ಕೆ ನಿಮಗೆ ಸೊನ್ನೆ ಬಿಲ್ಲು ಬರಲಿದೆ. 10 ಕೆ.ಜಿ ನೀಡುವ ಮಾತು ನೀಡಿದ್ದೆವು. ಈ‌ ತಿಂಗಳಿನಿಂದ 5 ಕೆಜಿ ನೀಡಲಿದ್ದು, ಇನ್ನು 5 ಕೆ.ಜಿಗೆ ಹಣ ನೀಡಲಿದ್ದೇವೆ. ಮೂರು ತಿಂಗಳಲ್ಲಿ ಬೇರೆ ಕಡೆಯಿಂದ ಅಕ್ಕಿ ತಂದು ತಲುಪಿಸುವ ಕೆಲಸ ಮಾಡುತ್ತೇವೆ ಎಂಬ ಭರವಸೆಯನ್ನು ಇದೆ ವೇಳೆ ನೀಡಿದ್ದಾರೆ.ಇನ್ನು 14 ನೇ ತಾರಿಖಿನಿಂದ ಭಾಗ್ಯದ ಲಕ್ಷ್ಮಿ ಬಾರಮ್ಮ ಆ ದೇವಿ ನಿಮಗೆ ಪ್ರತಿ ಹೆಣ್ಮಗಳಿಗೆ 2‌ ಸಾವಿರ ರೂ ಅಕೌಂಟಿಗೆ ಕೊಡುತ್ತಿದ್ದಾಳೆ. ಈ ಮೂಲಕ ನಿಮ್ಮ ಬದುಕಿನಲ್ಲಿ ಬದಲಾವಣೆ ಬರಲಿದೆ. ಇದನ್ನು ಕುಮಾರಸ್ವಾಮಿ ಕೊಡ್ತೀದ್ದಾರಾ ಎನ್ನುವ ಮೂಲಕ ಕುಮಾರಣ್ಣನಿಗೆ ಟಾಂಟ್ ನೀಡಿದ್ದಾರೆ.

Leave A Reply

Your email address will not be published.