Cheating Woman: ಈಕೆ ವೆರೈಟಿ ವಧು, ಸಂಸಾರ ಮಾಡಿದ್ರೆ ಅದು ಕೇವಲ ಒಂದೇ ವಾರ, 13 ಪ್ರೀತಿ, 4 ಮದುವೆ, 17 ವಂಚನೆ ಗಿರಾಕಿ ಇವ್ಳೆ ನೋಡಿ !

latest news shocking news Cheating woman in the name of love

Cheating Woman: ಪ್ರೀತಿ ಪ್ರೇಮದ ಹೆಸರಿನಲ್ಲಿ ಪ್ರೀತಿಯ ನಾಟಕವಾಡಿ ವಂಚನೆ ಮಾಡಿ ದುಡ್ಡು ಲೂಟಿ ಮಾಡುವ ಪ್ರಮೇಯಗಳು ಇತ್ತೀಚಿಗೆ ಮಾಮೂಲಿಯಾಗಿ ಬಿಟ್ಟಿದೆ. ಸಾಮಾಜಿಕ ಜಾಲತಾಣ (Social Media), ಮ್ಯಾಟ್ರಿಮೋನಿ (Matrimony) ಹೀಗೆ ಆನ್ಲೈನ್ ಪ್ಲಾಟ್ ಫಾರ್ಮ್ ಅನ್ನು ಬಳಸಿಕೊಂಡು ಮೋಸ ಮಾಡುವ ಯುವತಿಯರ ಸಂಖ್ಯೆ ಹೆಚ್ಚಾಗಿದೆ.

ಮಳ್ಳಿ ಮಳ್ಳಿ ಮಿಂಚುಳ್ಳಿ ಎಂಬಂತೆ ತನ್ನ ನಯವಾದ ಮಾತಿನಿಂದ ಜನರನ್ನು ಮೋಡಿ ಮಾಡಿ ಲಕ್ಷಗಟ್ಟಲೆ ನಿಮ್ಮ ಹಣವನ್ನು ಲೂಟಿ ಮಾಡುವುದು ಗ್ಯಾರಂಟಿ. ಇದೇ ರೀತಿ ಖತರ್ನಾಕ್ ಲೇಡಿಯೊಬ್ಬಳು 17 ಮಂದಿಯಎನ್ನು ವಂಚಿಸಿರುವ (Cheating) ಪ್ರಕರಣ ಮುನ್ನಲೆಗೆ ಬಂದಿದೆ.

ಇದರಲ್ಲಿ 13 ಮಂದಿಗೆ ಪ್ರೀತಿಯ (Love) ಹೆಸರಲ್ಲಿ ಮೋಸ ಮಾಡಿರುವ (Cheating Woman) ಯುವತಿ, ಬರೋಬ್ಬರಿ ನಾಲ್ಕು ಮಂದಿಯನ್ನು ಮದುವೆಯಾಗಿ(Marriage) ಮೋಸ ಮಾಡಿದ ಘಟನೆ ನಡೆದಿದೆ. ತನ್ನ ಸೌಂದರ್ಯವನ್ನೇ ಹುಡುಗರನ್ನು ಬಲೆಗೆ ಬೀಳಿಸುವ ಅಸ್ತ್ರವನ್ನಾಗಿ ಬಳಕೆ ಮಾಡಿಕೊಂಡಿರುವ ಚಾಲಾಕಿ ಲೇಡಿ ಲಕ್ಷಾಂತರ ಹಣ ಲೂಟಿ ಮಾಡಿ ಯುವಕರ ಜೇಬಿಗೆ ಕತ್ತರಿ ಹಾಕಿದ್ದಾಳೆ.
ಶ್ರೀಮಂತ ಯುವಕರೇ ಆಕೆಯ ಮೈನ್ ಟಾರ್ಗೆಟ್ ಆಗಿದ್ದು, ಮ್ಯಾಟ್ರಿಮೋನಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಅಪ್ಲೋಡ್ ಮಾಡಿ ಶ್ರೀಮಂತ ಮನೆತನದ ಯುವಕರನ್ನು ತನ್ನ ಬಲೆಗೆ ಬೀಳಿಸಿ ಪರಿಚಯ ಮಾಡಿಕೊಂಡು ಮದುವೆಯಾಗುವ ನಾಟಕವಾಡಿ ಮದುವೆಯಾದ ನಾಲ್ಕೈದು ದಿನಗಳವರೆಗೆ ಯುವಕನ ಜೊತೆಗಿದ್ದು, ಆ ಬಳಿಕ ತವರು ಮನೆಯಲ್ಲಿ ಕೆಲಸವಿದೆ ಎಂದು ಹೇಳಿ ಮದುವೆ ವೇಳೆ ನೀಡಿದ್ದ ಧನ, ಕನಕದ ಜೊತೆಗೆ ಯುವಕನಿಗೆ ಮೂರು ನಾಮ ಹಾಕಿ ಅಲ್ಲಿಂದ ಎಸ್ಕೇಪ್ ಆಗುವುದೇ ಯುವತಿಯ ಬ್ಯುಸಿನೆಸ್.

ತೆಲಂಗಾಣದ ತಾಜಾಪೆದ್ದಪಲ್ಲಿ ಜಿಲ್ಲಾ ಎನ್‌ಟಿಪಿಸಿ ಅನ್ನಪೂರ್ಣ ಕಾಲೋನಿಯ ಸುದ್ದಲ ರೇವಂತ್ ಎಂಬ ಯುವಕ ಆರ್ಯ ವೈಶ್ಯ ಪಂಗಡದ ಯುವತಿಗಾಗಿ ಹುಡುಕಾಟ ನಡೆಸಿದ್ದು, ಆದರೆ , ಈ ಸಮುದಾಯದಲ್ಲಿ ಯುವತಿ ಸಿಗುವುದು ಕಷ್ಟವೆಂದು ಮ್ಯಾರೇಜ್ ಬ್ಯೂರೋದಲ್ಲಿ ನೋಡಿದಾಗ ಅನುಷಾಳ ಫೋಟೋವನ್ನು ನೋಡಿದ್ದಾನೆ. ಈಕೆ ಎಲ್ಲ ಯುವಕರನ್ನು ಬಲೆಗೆ ಬೀಳಿಸಿ ಹಣ ಒಡೆಯುವ ಕಿಲಾಡಿ ಎಂಬ ಅರಿವಿರದೆ ಯುವಕ ಮದುವೆಗೂ ಮೊದಲೇ ಯುವತಿಗೆ 2 ಲಕ್ಷದ 90 ಸಾವಿರ ರೂಪಾಯಿಗಳನ್ನು ನೀಡಿದ್ದು, ಡಿಸೆಂಬರ್ 14 ರಂದು ಅನುಶಾಳನ್ನು ಮದುವೆಯಾಗಿದ್ದಾನೆ .

ತನ್ನ ನಿತ್ಯ ಪ್ರವೃತ್ತಿಯಂತೆ ಮದುವೆಯ ಬಳಿಕ ಒಂದು ವಾರ ಜೊತೆಗಿದ್ದ ಕಿಲಾಡಿ ಅನುಷಾ, ತವರಿನಲ್ಲಿ ಕೆಲಸವಿದೆ ಎಂಬ ಸುಳ್ಳು ನೆಪ ಹೇಳಿ 4 ತೊಲ ಚಿನ್ನ ಮತ್ತು 70 ಸಾವಿರ ನಗದಿನ ಜೊತೆಗೆ ಅಲ್ಲಿಂದ ಕಾಲ್ಕಿತ್ತಿದ್ದಾಳೆ. ಪತಿ ರೇವಂತ್ ಆಕೆಗಾಗಿ ಕಾದು ಅನೇಕ ದಿನಗಳು ಕಳೆದರೂ ಆಕೆ ಬರುವುದಾಗಲಿ, ಕರೆ ಕೂಡ ತೆಗೆಯದ ಹಿನ್ನೆಲೆಯಲ್ಲಿ ಆಕೆಯ ಪತ್ತೆಗೆ ಮುಂದಾದಾಗ ಕಿಲಾಡಿ ಮಹಿಳೆಯ ಅಸಲಿ ಬಂಡವಾಳ ಬಯಲಾಗಿದೆ. ಈಗಾಗಲೇ ಮೂರು ಜನರನ್ನು ಮದುವೆಯಾಗಿ, ಇತರ 13 ಜನರಿಗೆ ಪ್ರೀತಿಯ ಹೆಸರಲ್ಲಿ ವಂಚಿಸಿರುವ ವಿಚಾರ ಬಯಲಾಗಿದೆ. ಆಕೆಯ ಮೋಸದ ಬಗ್ಗೆ. ಗೊತ್ತಾಗಿದೆ ಎಂಬ ವಿಚಾರ ತಿಳಿಯುತ್ತಿದ್ದಂತೆ ಆಕೆ, ರೇವಂತ್ನನ್ನು ಹೈದರಾಬಾದ್ಗೆ ಕರೆಸಿಕೊಂಡಿದ್ದಾಳೆ.

ರೌಡಿಗಳ ಮೂಲಕ ಹೊಡೆಸಿ, ಅದನ್ನು ವೀಡಿಯೋ ಮಾಡಿಕೊಂಡು 20 ಲಕ್ಷ ರೂಪಾಯಿ ನೀಡುವಂತೆ ಬೆದರಿಕೆ ಹಾಕಿ, ಇಲ್ಲದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಲೀಕ್ ಮಾಡುವುದಾಗಿ ರೇವಂತ್ ನನ್ನು ಬ್ಲಾಕ್ ಮೇಲ್ ಮಾಡಿದ್ದಾಳೆ. ಹೀಗಿದ್ದರೂ ಯುವಕ ಹಣ ನೀಡಲು ನಿರಾಕರಿಸಿದ ಹಿನ್ನೆಲೆ ಖತರ್ನಾಕ್ ಲೇಡಿ ಯುವಕನ ಪೋಷಕರಿಗೆ ಕರೆ ಮಾಡಿ ಕೊಲೆ ಮಾಡುವ ಬೆದರಿಕೆ ಹಾಕಿದ್ದಾಳೆ. ಈ ಹಿನ್ನೆಲೆಯಲ್ಲಿ ರೇವಂತ್ ತಮಗೆ ರಕ್ಷಣೆ ನೀಡಬೇಕೆಂದು ರಾಮಗುಂಡಂ ಪೊಲೀಸರಲ್ಲಿ ಮನವಿ ಮಾಡಿದ್ದಾನೆ ಎಂದು ತಿಳಿದುಬಂದಿದೆ.

Leave A Reply

Your email address will not be published.