Karnataka Rains: ಕರಾವಳಿಯಾದ್ಯಂತ ಜುಲೈ 10ರವರೆಗೆ ಅಬ್ಬರಿಸಲಿದ್ದಾನೆ ಮಳೆರಾಯ! ಜನರೇ ಎಚ್ಚರ!

Karnataka Rains: ಕರಾವಳಿಯಾದ್ಯಂತ ಜುಲೈ 10ರವರೆಗೆ ಅಬ್ಬರಿಸಲಿದ್ದಾನೆ ಮಳೆರಾಯ! ಜನರೇ ಎಚ್ಚರ!

ಮುಂಗಾರು ಮಳೆ ಕರಾವಳಿಯಾದ್ಯಂತ ಹೆಚ್ಚಾಗುತ್ತಲೇ ಇದೆ. ಒಂದ ಕಡೆ ಮಂಗಳೂರಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಜನ ಮಳೆಯ ಆಗಮನದಿಂದ ಖುಷಿಗೊಂಡರೂ, ಮಳೆ ನಿರಂತರ ಸುರಿಯುತ್ತಿರುವುದರಿಂದ ಆತಂಕಗೊಂಡಿದ್ದಾರೆ. ಈಗಾಗಲೇ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ರಾಯಚೂರು, ಚಿಕ್ಕಮಗಳೂರು, ದಾವಣಗೆರೆ, ಕೊಡಗು, ಶಿವಮೊಗ್ಗ, ವಿಜಯನಗರ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎನ್ನುವ ಮಾಹಿತಿಯನ್ನು ಹವಾಮಾನ ಇಲಾಖೆ ನೀಡಿದೆ. ಬೆಳ್ತಂಗಡಿ, ಕಾರ್ಕಳ, ಕೊಲ್ಲೂರು, ಗೇರುಸೊಪ್ಪ, ಕುಮಟಾ, ಮಂಗಳೂರು, ಮಾಣಿ, ಮಂಗಳೂರು ವಿಮಾನ ನಿಲ್ದಾಣ, ಕಾರವಾರ, ಹೊನ್ನಾವರ, ಶಿರಾಲಿಯಲ್ಲಿ ಹೆಚ್ಚಿನ ಮಳೆಯಾಗಿದ್ದಾಗಿ ವರದಿಯಾಗಿದೆ.

ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಭಾರಿಯಿಂದ ಅತಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಉತ್ತರ ಕನ್ನಡದಲ್ಲಿ ಅತ್ಯಂತ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದ ಕರಾವಳಿಯಲ್ಲಿ ಬಿರುಗಾಳಿಯು ಗಂಟೆಗೆ 45-55 ಕಿ.ಮೀ ಇಂದ 65 ಕಿ.ಮೀ ವರೆಗೂ ಬೀಸುವ ಸಾಧ್ಯತೆ ಇದೆ.

 

Leave A Reply

Your email address will not be published.