PDO Recruitment 2023: ಪಿಡಿಒ ಹುದ್ದೆಗಳಿಗೆ ಸದ್ಯದಲ್ಲೇ ಅಧಿಸೂಚನೆ; ಒಟ್ಟು 150 ಹುದ್ದೆಗಳ ಭರ್ತಿ ಬಗ್ಗೆ ಬಂದಿದೆ ಬಿಗ್‌ ನ್ಯೂಸ್‌

PDO Recruitment 2023: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ (Rural Development and Panchayath Raj Department – RDPR) ಸಚಿವ ಅವರು ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. 385 ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹುದ್ದೆಗಳು ಖಾಲಿ ಇದ್ದು, ಇದರಲ್ಲಿ 150 ಹುದ್ದೆಗಳಿಗೆ ನೇರ ನೇಮಕಾತಿ (PDO Recruitment 2023) ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಹುದ್ದೆಗಳ ವಿವರ ಎಲ್ಲೆಲ್ಲಿ ಎಷ್ಟಿದೆ ಎಂಬುವುದನ್ನು ಕೂಡಾ ಅವರು ಮಾಹಿತಿ ನೀಡಿದ್ದಾರೆ.
ಬೆಂಗಳೂರು ಗ್ರಾಮಾಂತರ-10
ಬೆಂಗಳೂರು ನಗರ-03
ಚಿಕ್ಕಬಳ್ಳಾಪುರ- 04
ಚಿತ್ರದುರ್ಗ- ೦
ದಾವಣಗೆರೆ- 04
ಕೋಲಾರ-08
ರಾಮನಗರ- 04
ಶಿವಮೊಗ್ಗ- 28
ತುಮಕೂರು-28
ಬಾಗಲಕೋಟೆ-3
ಬೆಳಗಾವಿ-31
ಧಾರವಾಡ-0
ಗದಗ- 09
ಹಾವೇರಿ-07
ಉತ್ತರಕನ್ನಡ-09
ವಿಜಯಪುರ-01
ಚಿಕ್ಕಮಗಳೂರು-28
ಉಡುಪಿ-12
ದಕ್ಷಿಣ ಕನ್ನಡ-21
ಕೊಡಗು-09
ಮಂಡ್ಯ- 04
ಹಾಸನ-16
ಮೈಸೂರು-07
ಚಾಮರಾಜನಗರ-04
ರಾಯಚೂರು-24
ಬೀದರ್‌-21
ಬಳ್ಳಾರಿ-05
ಯಾದಗಿರಿ-10
ಕಲಬುರಗಿ-37
ಕೊಪ್ಪಳ-09
ವಿಜಯನಗರ-35

ಉಳಿದ ಹಾಗೆ, 604 ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್‌-1, ಇದರಲ್ಲಿ 530 ಹುದ್ದೆಗಳು ನೇರ ನೇಮಕಾತಿ ಹುದ್ದೆ ಇದೆ. ಇದರಲ್ಲಿ 530 ಹುದ್ದೆಗಳು ನೇರ ನೇಮಕಾತಿಯ ಹುದ್ದೆಗಳು, 719 ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್‌-11 ಹುದ್ದೆ ಖಾಲಿ ಇದೆ. ಇದರಲ್ಲಿ 412ಹುದ್ದೆಗಳು ನೇರ ನೇಮಕಾತಿಯ ಹುದ್ದೆಗಳು. 345 ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಗಳು ಖಾಲಿ ಇದ್ದು ಇವುಗಳಲ್ಲಿ 82ಹುದ್ದೆಗಳು ನೇರ ನೇಮಕಾತಿಯ ಹುದ್ದೆಗಳು ಇದೆ ಎಂದು ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ.

Leave A Reply

Your email address will not be published.