Yogi Adityanath: ತಂಗಿ ಬೀದಿ ಬದಿಯಲ್ಲಿ ಕಡಕ್ ಚಹಾ ಬಸಿಯುವ ಚಾಯ್ ವಾಲಿ – ಅಣ್ಣ ಭಾರತದ ದೊಡ್ಡ ರಾಜ್ಯದ ಖಡಕ್ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ !

latest news intresting news sister street side tea seller and brother Yogi Adityanath Chief Minister of State

Yogi Adityanath: ಅಣ್ಣ ಭಾರತದಂತಹ ಬಹು ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಬಹು ದೊಡ್ಡ ರಾಜ್ಯದ ಮುಖ್ಯಮಂತ್ರಿ. ಅಷ್ಟೇ ಅಲ್ಲ, ಕ್ರಿಮಿನಲ್ ಗಳಲ್ಲಿ ಟೆರರ್ ಸೃಷ್ಟಿಸಿ ಇಂಪಾಸಿಬಲ್ ಅನ್ನುವ ಕಠಿಣತನ ಹೊಂದಿರುವ ಕಡಕ್ ಮುಖ್ಯಮಂತ್ರಿ. ಅದೇ ಮತ್ತೊಂದೆಡೆ ಆಕೆಯ ಸಹೋದರಿ, ಅಲ್ಲೊಂದು ದೂರದ ಪ್ರದೇಶದಲ್ಲಿ ಸಣ್ಣ ಟೀ ಅಂಗಡಿಯಲ್ಲಿ ಕಡಕ್ ಚಹಾ ಬಡಿಯುತ್ತ ಕುಳಿತಿದ್ದಾಳೆ. ಬರುವ ಪ್ರವಾಸಿಗರು ಕೊಡುವ 5 ರೂಪಾಯಿ ಚಿಲ್ಲರೆಯಿಂದ ಆಕೆಯ ಬದುಕು ಹೇಗೋ ನಡೆದಿದೆ. ಹೌದು, ಆ ಕಿರಿಯ ಸಹೋದರ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ !

ನಿಜ, ಇದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಇವತ್ತಿನ ತನ್ನ ಅಧಿಕಾರಕ್ಕೂ ಇಬ್ಬರ ಕುಟುಂಬಕ್ಕೂ ಯಾವುದೇ ಸಂಬಂಧ ಇಲ್ಲದಂತೆ ದೂರವಿಟ್ಟು ಪಾರದರ್ಶಕ ಆಡಳಿತ ನಡೆಸುತ್ತಿರುವ ಕ್ರಮ. ಸಹೋದರ ಒಂದು ರಾಜ್ಯದ ಮುಖ್ಯಮಂತ್ರಿ ಆಗಿದ್ದರೂ ಆತನಿಂದ ಏನೂ ಬಯಸದೆ ಆತನ ಸಹೋದರಿ ದೂರದ ಪ್ರದೇಶದಲ್ಲಿ ಸಣ್ಣ ಟೀ ಅಂಗಡಿ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದಾರೆ.

ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಹೋದರಿ ಶಶಿ ಪಾಯಲ್ ಉತ್ತರಾಖಂಡದ ಪೌರಿ ಜಿಲ್ಲೆಯಲ್ಲಿ ಸಣ್ಣ ಟೀ ಅಂಗಡಿ ಇಟ್ಟುಕೊಂಡು ಅತ್ಯಂತ ಸರಳ ಜೀವನ ನಡೆಸುತ್ತಿದ್ದಾರೆ. ಸ್ವಲ್ಪ ಮಳೆ ಬಂದರೂ ಫೌರಿ ಎಂಬ ದುರ್ಗಮ ಪ್ರದೇಶಕ್ಕೆ ಹೋಗುವುದೇ ಕಷ್ಟ. ಅಷ್ಟು ದೂರದಲ್ಲಿ ಎರಡು ಕಿ.ಮೀ.ನಲ್ಲಿ ವಾಹನಗಳನ್ನು ನಿಲ್ಲಿಸಿ ಕಾಲ್ನಡಿಗೆಯಲ್ಲಿ ಸಾಗಬೇಕು ಎನ್ನುವ ಪರಿಸ್ಥಿತಿ ಇರುವ ಪ್ರದೇಶ. ಅಲ್ಲಿಯೇ ಶಶಿ ಪಾಯಲ್ ಅವರ ಸಣ್ಣ ಟೀ ಅಂಗಡಿ. ಈಕೆ ಯುಪಿಯ ಬಲಿಷ್ಠ ಸಿಎಂ ಸಹೋದರಿ ಎಂದು ತಿಳಿದು ಪ್ರವಾಸಿಗರು ಬೆರಗಾಗಿ ಹೋಗುತ್ತಿದ್ದಾರೆ. ಅಂತಹಾ ವ್ಯಕ್ತಿಯ ತಮ್ಮ ಈ ರೀತಿ ಬದುಕುತ್ತಿರುವುದೇಕೆ ? ಎಂದು ಕೇಳಿದರೆ ಅವರ ಮುಖದಲ್ಲಿ ಬರೋದು ಕೇವಲ ಮಂದಹಾಸ.

ಇತ್ತೀಚಿನ ತನಕ ಯಾರಿಗೂ ಈ ವಿಷಯ ಗೊತ್ತಿರಲಿಲ್ಲ. ಕೆಲ ದಿನಗಳ ಹಿಂದೆ ಯುಪಿ ಮಾಜಿ ಶಾಸಕ ದಿನೇಶ್ ಚೌಧರಿ ಅವರು ಪ್ರದೇಶಕ್ಕೆ ಭೇಟಿ ನೀಡಿದಾಗ ಆಕೆಯ ಬಗ್ಗೆ ತಿಳಿದುಕೊಂಡರು. ಈಕೆ, ಆದಿತ್ಯನಾಥ್ ಸಹೋದರಿ ಎಂದು ತಿಳಿದು ತನ್ನ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋ ಹಾಕಿದ್ದು, ಅದೀಗ ವೈರಲ್ ಆಗಿದೆ. ಆಕೆ ಇದೀಗ ಯೋಗಿ ಆದಿತ್ಯನಾಥ್ ಮತ್ತು ಅವರ ಕುಟುಂಬದ ಬಾಲ್ಯದ ಪರಿಸ್ಥಿತಿಯನ್ನು ಹೇಳಿಕೊಂಡಿದ್ದಾರೆ.

ಉತ್ತರಾಖಂಡದ ಫೌರಿಯ ಪಂಚೂರ್ ಗ್ರಾಮದಲ್ಲಿ ಜನಿಸಿದ ಯೋಗಿಗೆ ಏಳು ಮಂದಿ ಒಡಹುಟ್ಟಿದವರು. ಇವರಲ್ಲಿ ಇದೇ ಈಗ ಟೀ ಮಾರುವ ಶಶಿ ಪಾಯಲ್ ಹಿರಿಯರು. ಆಡಿತ್ಯನಾಥ್ 1994 ರಲ್ಲಿ ಸನ್ಯಾಸ ಸ್ವೀಕರಿಸಿದರು. ತಂಗಿ ಶಶಿ ಕೊತ್ತರ್ ಗ್ರಾಮದ ಪುರಂಸಿಂಗ್ ಅವರನ್ನು ಮದುವೆಯಾಗಿ ಅಲ್ಲಿಯೇ ನೆಲೆಸಿದರು. ತಾನು ಪ್ರತಿ ವರ್ಷ ರಕ್ಷಾಬಂಧನದಂದು ತನ್ನ ಸಹೋದರನಿಗೆ ರಾಖಿ ಕಳುಹಿಸುತ್ತೇನೆ ಎಂದು ತಂಗಿ ಶಶಿ ಹೇಳಿದ್ದಾರೆ.

ಸಿಎಂ ಯೋಗಿ ಯುಪಿ ಸಿಎಂ ಆದ ನಂತರ ಒಂದೇ ಒಂದು ಬಾರಿ ತಾಯಿಯ ಬಳಿ ಹೋಗಿದ್ದರು. ಆಗ, ಯೋಗಿ ಫೌರಿ ಜಿಲ್ಲೆಯ ತನ್ನ ತಾಯಿಯ ತವರು ಗ್ರಾಮಕ್ಕೆ ಪಂಚೂರಿಗೆ ಬಂದರು. ಸಿಎಂ ಆದಾಗ ಐದು ವರ್ಷ ಅಮ್ಮನ ಬಳಿ ಬಂದು ಆಶೀರ್ವಾದ ಪಡೆದಿದ್ದರು. ಬಹಳ ದಿನಗಳ ನಂತರ ಮಗನನ್ನು ನೋಡಿದ ತಾಯಿಯ ಮನದಲ್ಲಿ ಸಂತಸ ಮೂಡಿಸಿದ್ದು, ಆಗ ತನ್ನ ತಾಯಿಯೊಂದಿಗೆ ಯೋಗಿ ಆಶೀರ್ವಾದ ಪಡೆದು ಕೊಳ್ಳುತ್ತಿರುವ ಫೋಟೋಗಳು ವೈರಲ್ ಆಗಿದ್ದವು.

Leave A Reply

Your email address will not be published.