South Western Railway Apprentice 2023: SSLC ಪಾಸಾದವರಿಗೆ ರೈಲ್ವೆಯಲ್ಲಿ ಉದ್ಯೋಗಾವಕಾಶ! ಕರ್ನಾಟಕದಲ್ಲಿ 904 ಹುದ್ದೆ, ಈ ಕೂಡಲೇ ಅರ್ಜಿ ಸಲ್ಲಿಸಿ

 

South Western Railway Apprentice 2023: ಕರ್ನಾಟಕ ಪ್ರದೇಶದ ದಕ್ಷಿಣ ಪಶ್ಚಿಮ ರೈಲ್ವೆಯ ವಿವಿಧ ಡಿವಿಷನ್‌ಗಳಲ್ಲಿ ಕೆಲಸ ಖಾಲಿಯಿದ್ದು, ಆಸಕ್ತರು ಅರ್ಜಿ ಸಲ್ಲಿಸಲು ನೇಮಕ ಅಧಿಸೂಚನೆ ಪ್ರಕಟಿಸಲಾಗಿದೆ. ಹುದ್ದೆಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಈ ಕೆಳಗೆ ನೀಡಲಾಗಿದ್ದು, ಆಸಕ್ತರು ಓದಿ ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು;
ಆನ್‌ಲೈನ್‌ ಅಪ್ಲಿಕೇಶನ್‌ ನೀಡಲು ಪ್ರಾರಂಭ ದಿನಾಂಕ : 03-07-2023
ಆನ್‌ಲೈನ್‌ ಅಪ್ಲಿಕೇಶನ್‌ ಸಲ್ಲಿಸಲು ಕೊನೆ ದಿನಾಂಕ : 02-08-2023 ರ ರಾತ್ರಿ 12-00 ಗಂಟೆವರೆಗೆ.

ಹುದ್ದೆಗಳ ವಿವರ
ಮೈಸೂರು ಸೆಂಟ್ರಲ್‌ ವರ್ಕ್‌ಶಾಪ್‌: 43
ಮೈಸೂರು ಡಿವಿಷನ್ : 177
ಬೆಂಗಳೂರು ಡಿವಿಷನ್ : 230
ಕ್ಯಾರಿಯೇಜ್ ರಿಪೇರ್ ವರ್ಕ್‌ಶಾಪ್‌, ಹುಬ್ಬಳ್ಳಿ: 217
ಹುಬ್ಬಳ್ಳಿ ಡಿವಿಷನ್ : 237
ಒಟ್ಟು ಹುದ್ದೆಗಳ ಸಂಖ್ಯೆ : 904

ವಿದ್ಯಾರ್ಹತೆ : ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ಜತೆಗೆ, ಐಟಿಐ ಮಾಡಿರಬೇಕು.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಎಸ್‌ಎಸ್‌ಎಲ್‌ಸಿಯ ಶೇಕಡ 50 ಅಂಕಗಳನ್ನು ಹಾಗೂ ಐಟಿಐ ವಿದ್ಯಾರ್ಹತೆಯ ಶೇಕಡ.50 ಅಂಕಗಳನ್ನು ಗಮನಿಸಿ, ಮೆರಿಟ್‌ ಸಿದ್ಧ ಮಾಡಿ, ಆಯ್ಕೆ ಪ್ರಕ್ರಿಯೆ ಮಾಡಲಾಗುವುದು.

ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ 15 ವರ್ಷ ಆಗಿರಬೇಕು, ಗರಿಷ್ಠ 24 ವರ್ಷ ವಯಸ್ಸು ಮೀರಿರಬಾರದು.

ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ವೆಬ್‌ಸೈಟ್‌ https://jobs.rrchubli.in/act-2223/ ಗೆ ಭೇಟಿ ನೀಡಿ ಮಾಹಿತಿ ಓದಿ ಅರ್ಜಿ ಸಲ್ಲಿಸಬಹುದು.

 

SWR – Act Apprentice Notification-2022 (1)

Leave A Reply

Your email address will not be published.