Drugs case: ಮೂರು ವರ್ಷದ ಹಿಂದೆ ಡ್ರಗ್ಸ್‌ ಕೇಸಿನಲ್ಲಿ ಬಂಧಿತರಾಗಿದ್ದ ಇಬ್ಬರು ಮೂಷಿಕ ಸೇನೆಯ ದೆಸೆಯಿಂದ ಖುಲಾಸೆ!!! ಇದೆಂತ ಸ್ಟೋರಿ? ಇಲ್ಲಿದೆ ಸಂಪೂರ್ಣ ವಿವರ

Drugs case: ಗಾಂಜಾ ಸಾಗಾಟ, ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಬಂಧಿತರಾಗಿದ್ದ ಇಬ್ಬರು ಆರೋಪಿಗಳಿಂದ 22 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿತ್ತು. ಆದರೆ ಗಾಂಜಾ ಸಾಗಾಟದ ಆರೋಪ ಹೊತ್ತಿದ್ದ ಇಬ್ಬರು ಆರೋಪಿಗಳು ಈಗ ಖುಲಾಸೆಗೊಂಡಿದ್ದಾರೆ. ಅದಕ್ಕೆ ಕಾರಣ ಮೂಷಿಕ. ಅರೆ, ಇದೇನು ಕೇವಲ ಒಂದು ಇಲಿಯಿಂದಾಗಿ ಇವರಿಬ್ಬರ ಬಿಡುಗಡೆಯಾಯ್ತು ಅಂದ್ರಾ? ಹೌದು. ಇಲಿರಾಯನ ಕೃಪೆಯಿಂದಾಗಿಯೇ ಇವರಿಬ್ಬರು ಬಿಡುಗಡೆಗೊಂಡಿರುವ ಘಟನೆ ತಮಿಳುನಾಡಿದ ಚೆನ್ನೈನಲ್ಲಿ ನಡೆದಿದೆ.

2020 ರಲ್ಲಿ ಬಂಧಿತರಾಗಿದ್ದ ನಾಗೇಶ್ವರ ರಾವ್‌ ಹಾಗೂ ರಾಜಗೋಪಾಲ್‌ರನ್ನು ಸಾಕ್ಷ್ಯಾಧಾರಗಳ ಕೊರತೆಯ ಕಾರಣದಿಂದ ಬಿಡುಗಡೆ ಮಾಡಲಾಗಿದೆ. ಏಕೆಂದರೆ ಇವರಿಂದ ವಶಪಡಿಸಿಕೊಳ್ಳಲಾದ 22ಕೆಜಿ ಡ್ರಗ್ಸ್‌ನಲ್ಲಿ (Drugs case) ಕೇವಲ ಈಗ ಉಳಿದಿರೋದು ಬರೀ 50ಗ್ರಾಂ ನಷ್ಟು ಡ್ರಗ್ಸ್‌ ಮಾತ್ರ. ಇದೆಲ್ಲ ಡ್ರಗ್ಸ್‌ ತಿಂದು ಮುಗಿಸಿ ತೇಗಿದ್ದು ಮೂಷಿಕಗಳು. ಇವುಗಳ ಕಾರಣದಿಂದ ಈಗ ಇವರಿಗೆ ಜೈಲಿನಿಂದ ಖುಲಾಸೆ ಆಗಿದೆ.

ಚೆನ್ನೈನ ಮರೀನಾ ಪೊಲೀಸ್‌ ಠಾಣೆಯ ಪೊಲೀಸರು ಈ ಅಪರೇಷನ್‌ ಡ್ರಗ್ಸ್‌ ಕಂಟ್ರೋಲ್‌ ವೇಳೆ ಇವರಿಬ್ಬರಿಂದ 22ಕೆಜಿ ಗಾಂಜಾ ವಶಪಡಿಸಿಕೊಂಡಿದ್ದು ಇದನ್ನು ಅವರು ಪೊಲೀಸ್‌ ಠಾಣೆಯ ಉಗ್ರಾಣದಲ್ಲಿ ಇಟ್ಟಿದ್ದರು. ತನಿಖೆ ನಡೆಸಿದ ಪೊಲೀಸರು ಇಬ್ಬರ ವಿರುದ್ದ ನ್ಯಾಯಾಲಯಕ್ಕೆ ದೋಷರೋಪ ಪಟ್ಟಿ ದಾಖಲಿಸಿದ್ದರು. ಅಲ್ಲದೇ ಚಾರ್ಜ್‌ಶೀಟ್‌ನಲ್ಲಿ 22ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾಗಿ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ ಮಾಡಿದ್ದಾರೆ. ಎನ್‌ಡಿಪಿಎಸ್‌ ಕೋರ್ಟ್‌ನಲ್ಲಿ ವಿಚಾರಣೆ ಸಂದರ್ಭದಲ್ಲಿ ಠಾಣೆಯಲ್ಲಿದ್ದ 22 ಕೆ.ಜಿ. ಗಾಂಜಾ ಸಂಪೂರ್ಣ ಖಾಲಿಯಾಗಿತ್ತು. ಇದರ ತನಿಖೆ ಮಾಡಲು ಹೋದಾಗ ಬೆಳಕಿಗೆ ಬಂದದ್ದೇ ಈ ಮೂಷಿಕಗಳು ಮಾಡಿದ ಮಹಿಮೆ.

Leave A Reply

Your email address will not be published.