Mexico Bus Accident: 40 ಅಡಿ ಆಳಕ್ಕೆ ಬಿದ್ದ ಬಸ್‌; ಭೀಕರ ದುರಂತದಲ್ಲಿ 27 ಮಂದಿ ದಾರುಣ ಸಾವು

Mexico Bus Accident: 40 ಅಡಿ ಆಳಕ್ಕೆ ಬಿದ್ದ ಬಸ್‌; ಭೀಕರ ದುರಂತದಲ್ಲಿ 27 ಮಂದಿ ದಾರುಣ ಸಾವು

ಭೀಕರ ರಸ್ತೆ ಅಪಘಾತವೊಂದರಲ್ಲಿ ಬಸ್‌ ಕಂದಕಕ್ಕೆ ಬಿದ್ದು ನವಜಾತ ಶಿಶು ಸೇರಿದಂತೆ 27ಮಂದಿ ಮೃತರಾದ ಘಟನೆಯೊಂದು ಮೆಕ್ಸಿಕೋದಲ್ಲಿ ನಡೆದಿದೆ. ಈ ಭೀಕರ ರಸ್ತೆ ಅಪಘಾತದಲ್ಲಿ 17ಮಂದಿ ಗಂಭೀರವಾಗಿ ಗಾಯಗೊಂಡಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಬಸ್‌ ಮೆಕ್ಸಿಕೋದ ದಕ್ಷಿಣ ರಾಜ್ಯವಾದ ಓಕ್ಸಾಕಾದಲ್ಲಿ ನಡೆದಿದ್ದು, ಬಸ್‌ ಪರ್ವತದ ರಸ್ತೆಯಿದ ಜಾರಿ ಸೀದಾ ಕಂದಕಕ್ಕೆ ಬಿದ್ದು, ಕನಿಷ್ಠ 27ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಈ ಅಪಘಾತದ ತೀವ್ರತೆ ಎಷ್ಟಿತ್ತೆಂದರೆ ಬಸ್‌ ಸಂಪೂರ್ಣ ನಜ್ಜುಗುಜ್ಜಾಗಿದೆ. ರಕ್ಷಣಾ ತಂಡ ಸ್ಥಳಕ್ಕೆ ಕೂಡಲೇ ಆಗಮಿಸಿ ಸಹಾಯ ಮಾಡಿದ್ದಾರೆ. ಗಂಭೀರ ಗಾಯಗೊಂಡವರನ್ನು ವಿವಿಧ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತಕ್ಕೆ ತಾಂತ್ರಿಕ ದೋಷ ಕಾರಣವೆಂದು ಹೇಳಲಾಗಿದೆ.

ಈ 17ಮಂದಿ ಗಂಭೀರ ಗಾಯಗೊಂಡವರಲ್ಲಿ ಆರು ಮಂದಿ ಪ್ರಜ್ಞಾಹೀನಗೊಂಡಿದ್ದರು ಎಂದು ಹೇಳಲಾಗಿದೆ. ಬಸ್‌ ಮಂಗಳವಾರ ರಾತ್ರಿ ಮೆಕ್ಸಿಕೋ ನಗರದಿಂದ ಸ್ಯಾಂಟಿಯಾಗೊ ಡಿ ಯೊಸುಂಡುವಾ ನಗರಕ್ಕೆ ತೆರಳುತ್ತಿತ್ತು ಎಂದು ವರದಿಯೊದು ತಿಳಿಸಿದೆ.

Leave A Reply

Your email address will not be published.