Viral Video: ತನ್ನ ಸೆಕ್ಯೂರಿಟಿ ಗಾರ್ಡ್ ಗೆ ಬೈಕ್ ನಲ್ಲಿ ಡ್ರಾಪ್ ನೀಡಿದ ಕ್ರಿಕೆಟರ್ ಮಹೇಂದ್ರ ಸಿಂಗ್ ಧೋನಿ |

Viral Video: ಭಾರತದ ಕ್ರಿಕೆಟ್ ಜಗತ್ತಿನ ದಂತಕತೆ, ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಬಗ್ಗೆ ಮತ್ತೆ ಒಳ್ಳೆಯ ನ್ಯೂಸ್ ಕೊಡುವ ಸಮಯ ಬಂದಿದೆ. ಧೋನಿ ತನ್ನ ಅಭಿಮಾನಿಗಳ ಜತೆ ಮತ್ತು ಜನಸಾಮಾನ್ಯರ ಜತೆ ಯಾವುದೇ ಬಿಗುಮಾನ ಇಲ್ಲದೇ ಸರಳ ರೀತಿಯಲ್ಲಿ ಬೆರೆಯುವ ವ್ಯಕ್ತಿ. ಅದನ್ನು ಆತ ಈ ಮೂಲಕ ಮತ್ತೊಂದು ಬಾರಿ ತೋರ್ಪಡಿಸಿಕೊಂಡಿದ್ದಾರೆ. ನಮ್ಮ ನಿಮ್ಮಂತೆ ಸಾಮಾನ್ಯ ರೀತಿ ಬದುಕುವ ಧೋನಿಯ ಸಿಂಪಲ್‌ ಜೀವನದ ವಿಡಿಯೋ ಒಂದು ಈಗ ವೈರಲ್ (Viral Video) ಆಗಿದೆ.

ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಕ್ರಿಕೆಟರ್ ಎಂ ಎಸ್ ಧೋನಿ, ತಮ್ಮ ನಿವಾಸದಿಂದ ಸೆಕ್ಯೂರಿಟಿ ಗಾರ್ಡ್‌ ಒಬ್ಬರನ್ನು ಆತನ ಮನೆಗೆ ಧೋನಿ ತಮ್ಮ ಬೈಕ್‌ನಲ್ಲಿ ಡ್ರಾಪ್ ಮಾಡಿರುವ ಹಳೆಯ ವಿಡಿಯೋ ಈಗ ಸಾಕಷ್ಟು ವೈರಲ್ ಸ್ವರೂಪ ಪಡೆದುಕೊಂಡಿದೆ.

ಮಹೇಂದ್ರ ಸಿಂಗ್ ಧೋನಿಯವರ ಫಾರ್ಮ್‌ ಹೌಸ್ ಎಷ್ಟು ದೊಡ್ಡದಿದೆ ಎಂದರೆ, ಸೆಕ್ಯೂರಿಟಿ ಗಾರ್ಡ್‌ ಅವರನ್ನು ಪ್ರವೇಶದ್ವಾರಕ್ಕೆ ತಂದು ಬಿಡಲು ಬೈಕ್‌ನಲ್ಲಿ ಪ್ರಯಾಣಿಸಿ ಡ್ರಾಪು ಮಾಡುವಷ್ಟು ವಿಶಾಲವಾಗಿದೆಯಂತೆ. ತೀರಾ ಕೆಲ ದಿನಗಳ ಹಿಂದಷ್ಟೇ ಧೋನಿ ಅವರು ಇಂಡಿಗೋ ವಿಮಾನದಲ್ಲಿ ಪ್ರಯಾಣ ಮಾಡುವ ವೇಳೆ ಕ್ಯಾಂಡಿ ಕ್ರಷ್ ಗೇಮ್‌ ಆಡುತ್ತಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಅಲ್ಲದೆ ವಿಡಿಯೋದಲ್ಲಿ ಇಂಡಿಗೋ ಏರ್‌ಲೈನ್ಸ್‌ನ ಗಗನಸಖಿಯೊಬ್ಬರು ಧೋನಿಗೆ ಚಾಕಲೇಟ್‌ಗಳನ್ನು ನೀಡುತ್ತಿರುವುದು ಕೂಡಾ ಕಂಡುಬಂದಿತ್ತು.

 

Leave A Reply

Your email address will not be published.