7th Pay Commission: ಸರಕಾರಿ ನೌಕರರೇ ನಿಮಗಿದೋ ಭರ್ಜರಿ ಗುಡ್‌ನ್ಯೂಸ್‌, ಕೇಂದ್ರ ಸರಕಾರದಿಂದ ಶೇ.5 ರಷ್ಟು ಡಿಎ ಹೆಚ್ಚಳ!

7th pay commission increased da 5 percent

7th Pay Commission: ಕೇಂದ್ರ ಸರಕಾರ ಭರ್ಜರಿ ಗಿಫ್ಟೊಂದನ್ನು ಛತ್ತೀಸ್‌ಗಢ ರಾಜ್ಯ ಸರಕಾರದ ನೌಕರರಿಗೆ ನೀಡಿದೆ. ಏನೆಂದರೆ ಸರಕಾರವು ಅಲ್ಲಿನ ರಾಜ್ಯ ನೌಕರರಿಗೆ ತುಟ್ಟಿಭತ್ಯೆ (ಡಿಎ) 5ರಷ್ಟು ಹೆಚ್ಚಿಸಿದ್ದು, ಈ ಹೆಚ್ಚಳದೊಂದಿಗೆ ಛತ್ತೀಸ್‌ಗಢ ಸರಕಾರಿ ನೌಕರರ ಡಿಎ ಈಗ 33 ರಿಂದ 38 ಕ್ಕೆ ಏರಿಸಿದೆ. ಛತ್ತೀಸ್‌ಗಢದಲ್ಲಿ ಈ ನಿರ್ಧಾರದಿಂದ ಸುಮಾರು 4 ಲಕ್ಷ ಉದ್ಯೋಗಿಗಳು ಪ್ರಯೋಜನ ಪಡೆಯುವ ನಿರೀಕ್ಷೆಯಿದೆ. ಈ ಡಿಎ ಹೆಚ್ಚಳದಿಂದ ರಾಜ್ಯ ಸರ್ಕಾರದ ಹಣಕಾಸಿನ ಮೇಲೆ 1000 ಕೋಟಿ ರೂ.ಗಳ ಹೆಚ್ಚುವರಿ ಹೊರೆ ಹೆಚ್ಚಲಿದೆ ಎಂದು ಅಂದಾಜಿಸಲಾಗಿದೆ.

ಛತ್ತೀಸ್‌ಗಢದಲ್ಲಿ ಡಿಎ ಹೆಚ್ಚಳದ ನಿರ್ಧಾರವನ್ನು ಈ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗುತ್ತದೆ. ಇದೇ ರೀತಿಯ ಡಿಎ ಹೆಚ್ಚಳವು ನೆರೆಯ ಮಧ್ಯಪ್ರದೇಶದಂತಹ ರಾಜ್ಯಗಳಲ್ಲಿಯೂ ನಡೆಯಲಿದೆ. ಅಲ್ಲಿ ಕೂಡಾ ಚುನಾವಣೆಗಳು ನಡೆಯಲಿವೆ. ಮಧ್ಯಪ್ರದೇಶದಲ್ಲಿ, ಕೇಂದ್ರ ಸರ್ಕಾರಿ ನೌಕರರಿಗೆ ಸರಿಸಮಾನವಾಗಿ ಡಿಎ ಈಗ 42 ಪ್ರತಿಶತವನ್ನು ತಲುಪಿದೆ.

ಇದಕ್ಕೂ ಮೊದಲು ಮಾರ್ಚ್‌ನಲ್ಲಿ ಕೇಂದ್ರ ಸರ್ಕಾರವು ಡಿಎಯನ್ನು ಶೇಕಡಾ 4 ರಷ್ಟು ಹೆಚ್ಚಿಸಿತ್ತು. ಇದು ಜನವರಿ 2023 ರಿಂದ 42 ರಷ್ಟು ಆಗಲಿದೆ. 7 ನೇ ವೇತನ ಆಯೋಗದ ಅಡಿಯಲ್ಲಿ ವರ್ಷಕ್ಕೆ ಎರಡು ಬಾರಿ DA ಅನ್ನು ಪರಿಷ್ಕರಿಸಲಾಗುತ್ತದೆ ಮತ್ತು ಪ್ರಸ್ತುತ ಹಣದುಬ್ಬರ ದರವನ್ನು ಪರಿಗಣಿಸಿ, ಕೇಂದ್ರ ನೌಕರರಿಗೆ ಮತ್ತೊಂದು ಹೆಚ್ಚಳವನ್ನು ಮಾಡಲಾಗುತ್ತದೆ.

Leave A Reply

Your email address will not be published.