Intresting news: ‘ಮಹಾಮೃತ್ಯುಂಜಯ ಮಂತ್ರ’ ಪಠಿಸಿ ನೆಟ್ಟಿಗರ ಮನಸ್ಸು ಗೆದ್ದ ಅಂಧ ವಿದೇಶಿ ಯುವತಿ !

latest news intresting news blind foreigner who chanted 'Mahamrityunjaya Mantra

Intresting news: ನಂಬಿ ಅಥವಾ ಬಿಡಿ, ನಂಬಿಕೆಗಳು ಮನುಷ್ಯ ಕುಲ ಇರುವ ತನಕ ಜಾರಿಯಲ್ಲಿ ಇರಲಿದೆ. ಮನುಷ್ಯ ನೋವಿಗೆ ಈಡಾದಾಗ,ಕಷ್ಟ ಪರಂಪರೆಯಲ್ಲಿ ಬಂಧಿಯಾದಾಗ, ಸೋತು ಸುಣ್ಣವಾಗಿ ಇನ್ನು ನನ್ನ ಕೈಯಿಂದ ಆಗುವುದಿಲ್ಲ ಎಂದು ಕೈ ಚೆಲ್ಲಿ ಕುಳಿತಾಗ, ಇದ್ದ ಆರೋಗ್ಯವೂ ಕೈ ಬಿಟ್ಟು ಇನ್ನು ಅವನೊಬ್ಬನೇ ನನಗೆ ಸಹಾಯ ಮಾಡಬಲ್ಲ ಅನ್ನುವ ಶರಣಾಗತಿಯ ಭಾವ ಬರುತ್ತದೆ. ಅದುವೇ ನಂಬಿಕೆ.

ಅದರಲ್ಲೂ ಆರೋಗ್ಯ ಸಮಸ್ಯೆಗಳು ಬಂದಾಗ ಆರೋಗ್ಯಕ್ಕೆ ಸಂಬಂಧಿಸಿದ ದೇವರ ಮೊರೆ ಹೋಗೋದು ಸಹಜ. ಆರೋಗ್ಯ ಕೇಂದ್ರಗಳಲ್ಲಿ ಭಾರತದಲ್ಲಿ ಮಹಾ ಮೃತ್ಯುಂಜಯ ಮಂತ್ರ ಜಪಿಸುವುದು ಸಾಮಾನ್ಯ. ಆದ್ರೆ ಈಗ ವಿದೇಶದಲ್ಲಿ ಇದು. ಅಲ್ಲಿ ಅಂಧ ಯುವತಿಯೊಬ್ಬಳು ‘ಮಹಾಮೃತ್ಯುಂಜಯ ಮಂತ್ರ’ ಪಠಿಸುತ್ತಾ ಹಾಡಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಅಪಾರ ಪ್ರಶಂಸೆ ಮತ್ತು ಮೆಚ್ಚುಗೆ ಗಳಿಸಿ ವೈರಲ್ ಆಗಿದೆ. ಈ ಯುವತಿಯ ಹೆಸರು ಕ್ಯಾಸ್‌ಮೇ. ಸದ್ಯ ಈ ಯುವತಿಯ ಅಸಾಧಾರಣ ಪ್ರತಿಭೆ ನೋಡುಗರನ್ನು ಬೆರಗುಗೊಳಿಸಿದೆ. ಕ್ಯಾಸ್‌ಮೇ ಅವರ ಅಧಿಕೃತ ಇನ್ಸ್ಟಾಗ್ರಾಂನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ತಪ್ಪಿಲ್ಲದೆ ಮಂತ್ರವನ್ನು ಹೇಳಿರುವ ಪರಿ ಎಲ್ಲರನ್ನೂ ಆಕರ್ಷಿಸಿದೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಅಪಾರ ಜನಪ್ರಿಯತೆ ಗಳಿಸಿದೆ. ಈವರೆಗೆ 5.6 ಮಿಲಿಯನ್ ವೀಕ್ಷಣೆ ಪಡೆದಿರುವ ಈ ವಿಡಿಯೋದಲ್ಲಿ ಯುವತಿಯ ಶೈಲಿ ನೋಡಿ ಸಾಮಾಜಿಕ ಮಾಧ್ಯಮ ಬಳಕೆದಾರರು ಬೆರಗಾಗಿದ್ದಾರೆ.

 

Leave A Reply

Your email address will not be published.