ದಕ್ಷಿಣ ಕನ್ನಡ: ಬಂಟ್ವಾಳದ ಲ್ಲಿ ಭಾರೀ ಮಳೆಗೆ ಮನೆ ಮೇಲೆ ಭೂಕುಸಿತ! ಮಹಿಳೆ ಸಾವು

Dakshina Kannada: ಕರಾವಳಿಯಾದ್ಯಂತ ಮಳೆ ಬಿರುಸುಗೊಂಡಿದ್ದು, ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬಂಟ್ವಾಳ ತಾಲೂಕಿನ ನಂದಾವರ ಎಂಬಲ್ಲಿ ಭೂಕುಸಿತ ಉಂಟಾಗಿದೆ. ಇಂದು(ಜುಲೈ7) ಬೆಳಗಿನ ಜಾವ ನಡೆದ ಭೂಕುಸಿತದಿಂದ ಮನೆಯೊಳಗೆ ಮಣ್ಣು ತುಂಬಿಕೊಂಡಿದ್ದು, ಮನೆ ಸಂಪೂರ್ಣ ಹಾನಿಯಾಗಿದ್ದು, ಮನೆಯೊಳಗೆ ಇದ್ದವರನ್ನು ರಕ್ಷಣೆ ಮಾಡಲಾಗಿದೆ. ಆದರೆ ಈ ಪೈಕಿ ಝರೀನ (49)ಎಂಬವರ ಸ್ಥಿತಿ ಗಂಭೀರವಾಗಿದ್ದ ಕಾರಣ ಅವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಅವರು ಮೃತ ಹೊಂದಿದರುವುದಾಗಿ ತಹಶೀಲ್ದಾರ್‌ ಎಸ್‌.ಬಿ ಕೂಡಲಗಿ ಹೇಳಿದ್ದಾರೆ.

ಸಜಿಪಮುನ್ನೂರು ಗ್ರಾಮದ ನಂದಾವರ ಗುಂಪುಮನೆ ಮಹಮ್ಮದ್‌ ಎಂಬವರ ಮನೆಗೆ ಗುಡ್ಡು ಜರಿದು ಬಿದ್ದು, ಈ ಅವಘಡ ಸಂಭವಿಸಿದೆ. ಈ ಮಣ್ಣಿನಡಿಯಲ್ಲಿ ಮಹಮ್ಮದ್‌ ಅವರ ಪತ್ನಿ ಝರೀನಾ, ಮತ್ತು ಮಗಳು ಸಫಾ ಸಿಲುಕಿಕೊಂಡಿದ್ದು, ಝರೀನಾ ಅವರು ಮೃತ ಹೊಂದಿದ್ದಾರೆ. ಇಂದು ಎಂಟು ಗಂಟೆಗೆ ರಕ್ಷಣಾ ಕಾರ್ಯ ನಡೆದಿದ್ದು, ಮನೆಮಂದಿಯನ್ನು ಹೊರಕ್ಕೆ ತೆಗೆದರೂ, ಝರೀನ ಅವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯದರೂ ಅಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ. ಮಣ್ಣಿನಡಿಯೇ ಪ್ರಾಣ ಹೋಗಿರಬಹುದೆಂದು ಅಂದಾಜಿಸಲಾಗಿದೆ.

ಸ್ಥಳಕ್ಕೆ ಬಂಟ್ವಾಳ ತಹಶೀಲ್ದಾರ್ ಎಸ್.ಬಿ.ಕೂಡಲಗಿ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಇದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಗೆ ಐದನೇ ಬಲಿಯಾಗಿದೆ.

Leave A Reply

Your email address will not be published.