India Post GDS Result: 12,828 ಹುದ್ದೆಗಳ ಗ್ರಾಮೀಣ ಡಾಕ್ ಸೇವಕ್ ನೇಮಕಾತಿಯ ಮೊದಲ ಮೆರಿಟ್ ಪಟ್ಟಿ ಬಿಡುಗಡೆ!

India Post GDS Result 2023: ಭಾರತೀಯ ಪೋಸ್ಟ್‌ನಲ್ಲಿ ಗ್ರಾಮೀಣ ಡಾಕ್ ಸೇವಕ್ ಹುದ್ದೆಯ ಹುದ್ದೆಗೆ ಮೊದಲ ಮೆರಿಟ್ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. 12000 ಕ್ಕೂ ಹೆಚ್ಚು ಹುದ್ದೆಗಳಿಗೆ ಈ ಹುದ್ದೆಗೆ ನೋಂದಾಯಿಸಿದ ಅಭ್ಯರ್ಥಿಗಳು ಇಂಡಿಯಾ ಪೋಸ್ಟ್‌ನ ವೆಬ್‌ಸೈಟ್ indiapostgdsonline.gov.in ಗೆ ಭೇಟಿ ನೀಡುವ ಮೂಲಕ ಮೆರಿಟ್ ಪಟ್ಟಿಯನ್ನು ಪರಿಶೀಲಿಸಬಹುದು. ಮಣಿಪುರ ರಾಜ್ಯವನ್ನು ಹೊರತುಪಡಿಸಿ ಎಲ್ಲಾ ರಾಜ್ಯಗಳ ಫಲಿತಾಂಶಗಳನ್ನು ಭಾರತೀಯ ಅಂಚೆ ಬಿಡುಗಡೆ ಮಾಡಿದೆ.

ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗೆ ಮಾಸಿಕ ವೇತನ 12,000 ರಿಂದ 29,380 ರೂ. ಇದೆ. ಪೋಸ್ಟ್‌ಮಾಸ್ಟರ್ ಸಹಾಯಕ ಹುದ್ದೆಗಳಿಗೆ ವೇತನವು 10,000 ರೂ.ನಿಂದ 24,470 ರೂ.

ಭಾರತೀಯ ಪೋಸ್ಟ್ ಹೊರಡಿಸಿದ ಖಾಲಿ ಹುದ್ದೆಗೆ ಅರ್ಜಿ ಪ್ರಕ್ರಿಯೆಯು 22 ಮೇ 2023 ರಂದು ಪ್ರಾರಂಭವಾಗಿತ್ತು, ಹಾಗೂ, ಇದರಲ್ಲಿ ಅರ್ಜಿ ಸಲ್ಲಿಸಲು ಜೂನ್ 11, 2023ರವರೆಗೆ ಕಾಲಾವಕಾಶ ನೀಡಿತ್ತು. ಈ ಖಾಲಿ ಹುದ್ದೆಗೆ ತಿದ್ದುಪಡಿ ವಿಂಡೋ ಜೂನ್ 12 ರಿಂದ ಜೂನ್ 14 ರವರೆಗೆ ತೆರೆದಿತ್ತು. ಇದೀಗ ಮೊದಲ ಮೆರಿಟ್ ಪಟ್ಟಿ ಬಿಡುಗಡೆಯಾಗಿದೆ.

GDS ಮೆರಿಟ್ ಪಟ್ಟಿಯನ್ನು ಪರಿಶೀಲನೆ ಈ ರೀತಿ ಮಾಡಿ;
ಅರ್ಹತಾ ಪಟ್ಟಿಯನ್ನು ಪರಿಶೀಲಿಸಲು, ಮೊದಲು ಅಧಿಕೃತ ವೆಬ್‌ಸೈಟ್ indiapostgdsonline.gov.in ಗೆ ಭೇಟಿ ನೀಡಿ
ನಂತರ ಇಂಡಿಯಾ ಪೋಸ್ಟ್ GDS ನೇಮಕಾತಿ 2023 ರ ಮೊದಲ ಫಲಿತಾಂಶ / 12828 ಪೋಸ್ಟ್‌ಗಾಗಿ ಮೆರಿಟ್ ಪಟ್ಟಿಯ ಲಿಂಕ್ ಅನ್ನು ಕ್ಲಿಕ್ ಮಾಡಿ.
ಮುಂದಿನ ಪುಟದಲ್ಲಿರುವ ಲಿಂಕ್‌ಗೆ ಹೋಗಬೇಕು.
ನಂತರ ಲಿಂಕ್‌ ಕ್ಲಿಕ್‌ ಮಾಡಿ, ಫಲಿತಾಂಶವನ್ನು ಪರಿಶೀಲಿಸಬಹುದು.
ಫಲಿತಾಂಶವನ್ನು ಪರಿಶೀಲಿಸಿದ ನಂತರ, ಪ್ರಿಂಟ್ ಔಟ್ ತೆಗೆದುಕೊಳ್ಳಿ.

ಈ ಹುದ್ದೆಗೆ 10ನೇ ತರಗತಿಯ ಅಭ್ಯರ್ಥಿಗಳ ಅಂಕದ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಹೆಚ್ಚು ಅಂಕ ಹೊಂದಿರುವವರಿಗೆ ಮಾನ್ಯತೆ ಹೆಚ್ಚು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

 

India Post GDS Post 1st Merit List ಈ ಲಿಂಕ್‌ ಕ್ಲಿಕ್‌ ಮಾಡಿ: https://indiapostgdsonline.gov.in/

Leave A Reply

Your email address will not be published.