Oyo Rooms: OYO ಸಂಸ್ಥೆಯಿಂದ ವಿಶ್ವಕಪ್‌ಗಾಗಿ ಮಾಸ್ಟರ್‌ ಪ್ಲ್ಯಾನ್‌! 10 ನಗರಗಳು ಮತ್ತು 90 ದಿನಗಳು! ಏನಿದು ಹೊಸ ಸುದ್ದಿ?

Oyo Rooms: OYO ಟೆಕ್‌ ಕಂಪನಿ ಕ್ರಿಕೆಟ್‌ ಅಭಿಮಾನಿಗಳಿಗೆ ಒಂದು ಗುಡ್‌ನ್ಯೂಸ್‌ ನೀಡಿದೆ. ಅದೇನೆಂದರೆ ICC ಕ್ರಿಕೆಟ್‌ ವಿಶ್ವಕಪ್‌ 2023 ಗಾಗಿ ಹೋಟೆಲ್‌ ಕೊಠಡಿಗಳನ್ನು ಬುಕ್‌ ಮಾಡಲು ಈ ಸಂಸ್ಥೆ ಮಾಸ್ಟರ್‌ ಪ್ಲ್ಯಾನ್‌ವೊಂದನ್ನು ಸಿದ್ಧಪಡಿಸಿದೆ. ಈ ಕಂಪನಿಯು 10 ಹೋಸ್ಟಿಂಗ್‌ ನಗರಗಳಲ್ಲಿ 500 ಹೋಟೆಲ್‌ಗಳನ್ನು ಸೇರಿಸುತ್ತದೆ ಎಂದು ಘೋಷಣೆ ಮಾಡಿದೆ. ಇದರಿಂದಾಗಿ ದೇಶ ಮತ್ತು ವಿಶ್ವದ ಕ್ರಿಕೆಟ್‌ ಅಭಿಮಾನಿಗಳು ಉಳಿದುಕೊಳ್ಳಲು ಯಾವುದೇ ತೊಂದರೆ ಇಲ್ಲ.

ಓಯೋ ಈ ಗುರಿಯನ್ನು 90 ದಿನಗಳಲ್ಲಿ ಅಂದರೆ 3 ತಿಂಗಳಲ್ಲಿ ಪೂರ್ಣಗೊಳಿಸಲು ಯೋಜನೆ ಮಾಡುತ್ತಿದೆ. ಅಷ್ಟು ಮಾತ್ರವಲ್ಲದೇ ಇದರ ಪ್ರಕಾರ ಈ ಎಲ್ಲಾ ಹೋಟೆಲ್‌ಗಳು ಹೋಸ್ಟಿಂಗ್‌ ಸ್ಟೇಡಿಯಂಗ್‌ಗೆ ತುಂಬಾ ಹತ್ತಿರದಲ್ಲಿರುತ್ತದೆ. ಇದರಿಂದ ಜನರು ಕ್ರೀಡಾಂಗಣಕ್ಕೆ ಬರಲು ಹೆಚ್ಚಿನ ತೊಂದರೆ ಅನುಭವಿಸಬೇಕಾಗಿಲ್ಲ ಎಂದು ಓಯೋ ಕಂಪನಿ ಹೇಳುತ್ತದೆ. ಅಹಮದಾಬಾದ್ ಮತ್ತು ಇತರ ಹೋಸ್ಟಿಂಗ್ ನಗರಗಳಲ್ಲಿ ಹೋಟೆಲ್ ಬುಕಿಂಗ್ ಬಹುತೇಕ ಪೂರ್ಣಗೊಂಡಿರುವ ಮತ್ತು ಬಾಡಿಗೆಗಳು ಶೇಕಡಾ 100 ರಿಂದ 200 ರಷ್ಟು ಹೆಚ್ಚಾಗಿರುವ ಸಮಯದಲ್ಲಿ ಓಯೋ ರೂಮ್‌ಗಳ ಈ ಯೋಜನೆ ಬಂದಿದೆ. ಓಯೋ ಪ್ರಕಾರ, ಈ ಬೇಡಿಕೆಯನ್ನು ಪೂರೈಸಲು ಅವರು 500 ಹೋಟೆಲ್‌ಗಳನ್ನು ಸೇರಿಸಲು ಯೋಜಿಸುತ್ತಿದ್ದಾರೆ.

ಐಸಿಸಿ ವಿಶ್ವಕಪ್‌ ಅಕ್ಟೋಬರ್‌ 5ರಂದು ಆರಂಭವಾಗಿ ನವೆಂಬರ್‌ 19ರಂದು ಕೊನೆಗೊಳ್ಳಲಿದೆ. ಮೂರು ತಿಂಗಳ ಹಿಂದೆ, ಅತಿಥೇಯ ನಗರಗಳಲ್ಲಿ ಹೆಚ್ಚಿದ ಬೇಡಿಕೆಯಿಂದಾಗಿ ರೂಮ್‌ ಶುಲ್ಕ ಹೆಚ್ಚಾಗಿದೆ ಎಂದು ಓಯೋ ಸಂಸ್ಥೆ ಹೇಳಿದ್ದು, ಈ ಅವಧಿಯಲ್ಲಿ ಬೇಡಿಕೆ ಹೆಚ್ಚಳವಾಗಲಿದೆ. ಅಹಮದಾಬಾದ್, ಹೈದರಾಬಾದ್, ದೆಹಲಿ, ಧರ್ಮಶಾಲಾ, ಚೆನ್ನೈ, ಲಕ್ನೋ, ಬೆಂಗಳೂರು, ಮುಂಬೈ, ಕೋಲ್ಕತ್ತಾ ಮತ್ತು ಪುಣೆಯಲ್ಲಿ ಐಸಿಸಿ ವಿಶ್ವಕಪ್‌ ಪಂದ್ಯಗಳು ನಡೆಯಲಿದ್ದು, ಫೈನಲ್ ಪಂದ್ಯ ಅಹಮದಾಬಾದ್‌ನಲ್ಲಿ ನಡೆಯಲಿದೆ.

Leave A Reply

Your email address will not be published.