Ballia News: ಟ್ಯೂಷನ್‌ ಓದುತ್ತಿರುವ ಬಾಲಕಿಯ ತಾಯಿಯೊಂದಿಗೆ ಶಿಕ್ಷಕನ ದೈಹಿಕ ಸಂಬಂಧ! ನಂತರ ಬ್ಲಾಕ್‌ಮೇಲ್‌, ಟೀಚರ್‌ ಅರೆಸ್ಟ್!!!

Ballia News: ಶಿಕ್ಷಕರೆಂದರೆ ನಮಗೆಲ್ಲ ಗೌರವದ ಭಾವನೆ. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದುದು. ಆದರೆ ಉತ್ತರಪ್ರದೇಶದ ಬಲ್ಲಿಯಾದಲ್ಲಿ ನಡೆದ ಘಟನೆಯೊಂದರಲ್ಲಿ ಶಿಕ್ಷಕನೋರ್ವನ ಕರಾಳ ಮುಖವಾಡ ಬಯಲಿಗೆ ಬಂದಿದೆ. ಅಲ್ಲೊಂದು ಇಲ್ಲೊಂದು ಶಿಕ್ಷಕರಿಂದ ನಡೆಯುವ ಈ ಘಟನೆಗೆ ನಿಜಕ್ಕೂ ಆಘಾತಕರ. ಟ್ಯೂಷ್‌ನ್‌ ಓದುತ್ತಿರುವ 9ನೇ ತರಗತಿ ವಿದ್ಯಾರ್ಥಿನಿಯ ತಾಯಿಯೊಂದಿಗೆ ಈ ಬೋಧಕ ಬಲವಂತವಾಗಿ ದೈಹಿಕ ಸಂಬಂಧ ಬೆಳೆಸಿದ್ದು, ಅದನ್ನು ವೀಡಿಯೋ ಮಾಡಿ ಮಹಿಳೆಗೆ ಎರಡು ವರ್ಷಗಳಿಂದ ಬ್ಲಾಕ್‌ಮೆಲ್‌ ಮಾಡುತ್ತಿದ್ದ ಎನ್ನಲಾಗಿದೆ. ಈಗ ಸಂತ್ರಸ್ತೆಯು ನೀಡಿದ ದೂರಿನ ಮೇರೆಗೆ ಸದರ್‌ ಕೊತ್ವಾಲಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿ ಮನೀಶ್‌ ಪಾಂಡೆಯನ್ನು ಬಂಧಿಸಿದ್ದು, ತನಿಖೆ ನಡೆಯುತ್ತಿದೆ.

ಈ ವೇಳೆ ಪೊಲೀಸ್ ವರಿಷ್ಠ ಎಸ್.ಆನಂದ್ ಅವರು ಹೇಳಿರುವ ಪ್ರಕಾರ, ಮಹಿಳೆ ತನ್ನ ದೂರಿನಲ್ಲಿ ನೀಡಿದ ಹೇಳಿಕೆಯನ್ನು ಆಧರಿಸಿ ಹೀಗೆ ಹೇಳಿದ್ದಾರೆ. ‘ಮನೀಶ್ ಎಂಬ ಶಿಕ್ಷಕ ತನ್ನ ಮನೆಗೆ ಬಂದು ಹೋಗುತ್ತಿದ್ದ, ಆಗ ಅವರ ನಡುವೆ ಸಂಬಂಧ ಬೆಳೆದಿತ್ತು. ಆದರೆ ಆತ ಅದರ ವೀಡಿಯೋ ಮಾಡಿ, ಬ್ಲಾಕ್ ಮೇಲ್ ಮಾಡುತ್ತಿದ್ದ’ ಎಂದು ಪೊಲೀಸರಿಗೆ ತಿಳಿಸಿದ್ದಾಳೆ ಎಂದು ಹೇಳಿದ್ದಾರೆ. ಈ ದೂರಿನನ್ವಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಈ ಶಿಕ್ಷಕನ ವಿರುದ್ಧ ಕಲಂ 358/2023, ಕಲಂ 376/506 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಮನೀಶ್ ಪಾಂಡೆಯನ್ನು ಪೊಲೀಸರು ಬಂಧಿಸಿದ್ದಾರೆ.

Leave A Reply

Your email address will not be published.