World First Front Camera Phone: ನಿಮಗಿದು ಗೊತ್ತೇ? ವಿಶ್ವದ ಮೊದಲ ಫ್ರಂಟ್‌ ಕ್ಯಾಮೆರಾ ಯಾವುದೆಂದು? ಬೆಲೆ ಎಷ್ಟು? ಇನ್ನಿತರ ಸಂಪೂರ್ಣ ಮಾಹಿತಿ ಇಲ್ಲಿದೆ

World First Front camera phone and details

World First Front Camera Phone: ಸ್ಮಾರ್ಟ್‌ಫೋನ್‌ ಯುಗ ಇದು. ಮಾರುಕಟ್ಟೆಯಲ್ಲಿ ನಮಗೆ ನಮ್ಮ ಇಷ್ಟಕ್ಕೆ ತಕ್ಕ ಹಾಗೆ ವೆರೈಟಿ ವೆರೈಟಿ ತರಹದ ಫೋನ್‌ಗಳು ಇಂದು ಲಭ್ಯ. ಅದರಲ್ಲೂ ಯಾವಾಗ ಈ ಸೆಲ್ಫಿ ತಂತ್ರಜ್ಞಾನ ಪ್ರಾರಂಭವಾಯಿತೋ ಅಲ್ಲಿಂದ ಇಲ್ಲಿಯವರೆಗೆ ಇದರ ಕ್ರೇಜ್‌ ನಿಂತಿಲ್ಲ. ಈಗಿನ ಕಾಲದಲ್ಲಿ ಇದರ ಟ್ರೆಂಡ್‌ ತುಂಬಾನೇ ಇದೆ. ಆದರೆ ನಿಮಗಿದು ಗೊತ್ತೇ? ಜಗತ್ತಿನ ಮೊದಲ ಫ್ರಂಟ್‌ ಕ್ಯಾಮೆರಾ ಫೋನ್‌ ಯಾವುದೆಂದು? ಈ ಫೋನಿನ ಹೆಸರೇನೆಂದು? ಅಷ್ಟು ಮಾತ್ರವಲ್ಲ ಈ ಫೋನ್‌ನಿಂದ ಮೊದಲ ಸೆಲ್ಫಿ ತೆಗೆದದ್ದು ಯಾರು? ಬನ್ನಿ ಈ ಎಲ್ಲಾ ಪ್ರಶ್ನೆಗಳಿಗೆ ಕುತೂಹಲದ ಉತ್ತರ ಇಲ್ಲಿದೆ.

ಸೋನಿ (SONY) ಕಂಪನಿ ಪ್ರಪಂಚದಲ್ಲಿ ಮೊದಲ ಮುಂಭಾಗದ ಕ್ಯಾಮೆರಾ ಫೋನ್‌ನನ್ನು ಪರಿಚಯ ಮಾಡಿತು. ಜುಲೈ 2004ರಲ್ಲಿ ಮಾರುಕಟ್ಟೆಗೆ Sony Ericsion Z1010 ಮೊಬೈಲ್‌ ಬಿಡುಗಡೆ ಮಾಡಿ, ಮೊದಲ ಸೆಲ್ಫಿ ಕ್ಯಾಮೆರಾವನ್ನು ವಿಶ್ವಕ್ಕೇ ಪರಿಚಯಿಸಿತು. ಈ ಫೋನ್‌ ನಲ್ಲಿ 0.3-ಮೆಗಾಪಿಕ್ಸೆಲ್‌ ಮುಂಭಾಗದ ಕ್ಯಾಮೆರಾ ನೀಡಲಾಗಿತ್ತು. 32MB ಸಂಗ್ರಹಣೆ ಮತ್ತು 1000mAh ಬ್ಯಾಟರಿ ಹೊಂದಿದ್ದ ಈ ಫೋನ್, ಬೆಲೆಯ ಬಗ್ಗೆ ಹೇಳುವುದಾದರೆ, ಈ ಫೋನ್ ಬೆಲೆ 30 ಸಾವಿರ ರೂ. ಆಗಿತ್ತು.

ಈಗ ಒಂದು ದಿನದಲ್ಲಿ ಎಷ್ಟು ಸೆಲ್ಫಿ ಕ್ಲಿಕ್ಕಿಸುತ್ತಾರೋ ಲೆಕ್ಕವಿಲ್ಲ. ಆದರೆ ಮೊದಲ ಸೆಲ್ಫಿಯನ್ನು ಉದ್ದೇಶಪೂರ್ವಕವಾಗಿ ಕ್ಲಿಕ್ಕಿಸಲಾಗಿದೆ ಎಂದು ತಿಳಿದರೆ ನೀವು ನಂಬುವುದು ಕಷ್ಟ. ಆದರೆ ಇದು ಸತ್ಯ. ನಿಜ ಹೇಳಬೇಕೆಂದರೆ ಆಸ್ಟ್ರೇಲಿಯಾದಲ್ಲಿ ಓದುತ್ತಿದ್ದ ಓರ್ವ ವಿದ್ಯಾರ್ಥಿ ತನ್ನ ಜನ್ಮದಿನದಂದು ತನ್ನ ತುಟಿಗಳಿಗೆ ಹಾಕಿದ ಹೊಲಿಗೆಯನ್ನು ಹಾಕಿದ ಸೆಲ್ಫಿ ಕ್ಲಿಕ್ಕಿಸಿದು, ನಂತರ ಅದಕ್ಕೆ ಹೊಲಿಗೆಗಳ ಮೇಲೆ ನಾಲಿಗೆ ಹಾಕಿದರೆ ಅವು ಬೇಗನೇ ಗುಣವಾಗುತ್ತದೆ ಎಂದು ಬರೆದಿದ್ದ ಎನ್ನಲಾಗಿದೆ. ಅನಂತರ ಸೆಲ್ಫಿ ಟ್ರೆಂಡ್‌ ಪ್ರಾರಂಭವಾಗಿದ್ದು, ಮುಂದುವರಿಯುತ್ತಲೇ ಇದೆ.

ಈ ಮುಂಭಾಗದ ಕ್ಯಾಮೆರಾ ಆ ಸಮಯದಲ್ಲಿ ಅನಿವಾರ್ಯವಾಗಿತ್ತು ಎಂದೇ ಹೇಳಬಹುದು. ಜನರು ಯಾವುದೇ ಸಭೆಗೆ ಕಂಪ್ಯೂಟರ್‌ ಮತ್ತು ಸ್ಕೈಪ್‌ ಗೆ ಅವಲಂಬಿಸಬೇಕಾಗಿಲ್ಲ ಎಂದು ಇದನ್ನು ತಯಾರಿ ಮಾಡಲಾಯಿತು. ಈ ಮುಂಭಾಗದ ಕ್ಯಾಮೆರಾ ಪರಿಚಯ ಆದ ಸಮಯದಲ್ಲಿ ಜನರು ಸೆಲ್ಫಿ ಪದದ ಬಗ್ಗೆ ಯೋಚನೆ ಮಾಡಿರಲಿಲ್ಲ. ಫ್ರಂಟ್‌ ಕ್ಯಾಮೆರಾ ಸೆಲ್ಫಿ ಟ್ರೆಂಡ್‌ ಗೆ ಬದಲಾವಣೆ ಆಗುತ್ತದೆ ಎಂದು ಅವತ್ತು ಯಾರಿಗೂ ಗೊತ್ತಿರಲಿಲ್ಲ.

Leave A Reply

Your email address will not be published.