Leptospirosis in kerala: ಕೇರಳದಲ್ಲಿ ಹುಟ್ಟಿಕೊಂಡಿದೆ ಹೊಸ ಜ್ವರ! ಪಕ್ಕದ ರಾಜ್ಯಗಳಿಗೂ ಹರಡುವ ಭೀತಿ!

leptospirosis cases in kerala and details

Leptospirosis in kerala: ಕೇರಳದಲ್ಲಿ ಲೆಪ್ಟೊಸ್ಪೈರೋಸಿಸ್‌(Leptospirosis in kerala) ಜ್ವರ ಪ್ರಕರಣಗಳು ಹೆಚ್ಚಿದ್ದು, ಆರೋಗ್ಯ ಇಲಾಖೆಯ ಪ್ರಕಾರ, ಇಲ್ಲಿಯವರೆಗೆ 500 ಕ್ಕೂ ಹೆಚ್ಚು ಜನರು ಈ ಜ್ವರದ ಸೋಂಕಿಗೆ ಒಳಗಾಗಿದ್ದಾರೆ ಎಂದು ವರದಿ ಮಾಡಿದೆ. ಇಲ್ಲಿಯವರೆಗೆ ಇಪ್ಪತ್ತಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಮಳೆಯಿಂದ ಕೇರಳದಲ್ಲಿ ಈ ಜ್ವರ ಹೆಚ್ಚಾಗಿದೆ. ವೈದ್ಯರ ಪ್ರಕಾರ, ಲೆಪ್ಟೊಸ್ಪೈರೋಸಿಸ್‌ ಪ್ರಾಣಿಗಳಿಂದ, ವಿಶೇಷವಾಗಿ ಇಲಿಗಳಿಂದ ಮನುಷ್ಯರಿಗೆ ಹರಡುತ್ತದೆ. ಈ ಜ್ವರ ಸೋಂಕಿತ ರೋಗಿಗೆ ಮೆದುಳು ಜ್ವರ, ಆಯಾಸ ಮತ್ತು ಉಸಿರಾಟದ ತೊಂದರೆ ಕಾಣಸಿಗುತ್ತದೆ. ರೋಗನಿರೋಧಕ ಶಕ್ತಿ ಹೊಂದಿರುವ ಜನರು ಮತ್ತು ವಯಸ್ಸಾದವರು ಸುಲಭವಾಗಿ ಇದಕ್ಕೆ ಒಳಗಾಗುತ್ತಾರೆ ಎಂದು ಹೇಳಲಾಗಿದೆ.

ಕೇರಳದಲ್ಲಿ ಲೆಪ್ಟೊಸ್ಪೈರೋಸಿಸ್ ಜ್ವರವಲ್ಲದೆ, ಡೆಂಗ್ಯೂ ಮತ್ತು ವೈರಲ್ ಜ್ವರದ ರೋಗಿಗಳ ಸಂಖ್ಯೆಯೂ ವೇಗವಾಗಿ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯೂ ಅಲರ್ಟ್‌ ಮೋಡ್‌ನಲ್ಲಿದೆ. ಜ್ವರದಿಂದ ಬಳಲುತ್ತಿರುವ ರೋಗಿಗಳ ತಪಾಸಣೆ ನಡೆಸಲಾಗುತ್ತಿದೆ. ಲೆಪ್ಟೊಸ್ಪೈರೋಸಿಸ್ ಮತ್ತು ಡೆಂಗ್ಯೂ ಜ್ವರದ ಬಗ್ಗೆಯೂ ದೊಡ್ಡ ಪ್ರಮಾಣದಲ್ಲಿ ತನಿಖೆ ನಡೆಸಲಾಗುತ್ತಿದೆ. ಕೇರಳದಲ್ಲಿ ಹೆಚ್ಚುತ್ತಿರುವ ಲೆಪ್ಟೊಸ್ಪೈರೋಸಿಸ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು, ಅದರ ಪ್ರಕರಣಗಳು ಇತರ ರಾಜ್ಯಗಳಿಗೂ ಹರಡುವ ಆತಂಕವಿದೆ.

ಈ ರೋಗಲಕ್ಷಣಗಳನ್ನು ನಿರ್ಲಕ್ಷಿಸಬೇಡಿ;
ಎರಡು ದಿನಗಳಿಗಿಂತ ಹೆಚ್ಚು ಕಾಲ ಇರುವ ಅಧಿಕ ಜ್ವರ, ತಲೆನೋವು ಮತ್ತು ಬೆನ್ನು ನೋವು, ವಾಂತಿ ಮತ್ತು ವಾಕರಿಕೆ, ಕಾಲಲ್ಲಿ ತೀಕ್ಷ್ಣವಾದ ನೋವು, ಕಣ್ಣುಗಳಲ್ಲಿ ನೀರು ಮತ್ತು ಉರಿಯುವಿಕೆ

Leave A Reply

Your email address will not be published.