Mrunal Thakur: ಪ್ರೀತಿ-ಕಾಮ; ಯಾವುದು ಮೊದಲು? ಲಸ್ಟ್‌ ಸೋರಿಸ್‌ ನಟಿ ಮೃಣಾಲ್‌ ಠಾಕೂರ್‌ ಜಾಣ ಉತ್ತರ ಹೀಗಿದೆ ನೋಡಿ!

ಮೃಣಾಲ್‌ ಠಾಕೂರ್‌ ( Mrunal Thakur) ನೆನಪಿದೆಯಾ ನಿಮಗೆ ಈ ನಟಿ? ಹೌದು ʼಸೀತಾ ರಾಮಂʼ ಸಿನಿಮಾದಲ್ಲಿ ನಟಿಸಿ ಎಲ್ಲರಿಂದಲೂ ತಮ್ಮ ಸ್ನಿಗ್ಧ ಸೌಂದರ್ಯದಿಂದ ಸೆಳೆದ ನಟಿ. ಇತ್ತೀಚೆಗೆ ಲಸ್ಟ್‌ ಸ್ಟೋರಿಸ್‌(Lust Stories 2 Movie)ಸಿನಿಮಾದಲ್ಲಿ ಸಖತ್‌ ಬೋಲ್ಡ್‌ ಆಗಿ ಮಿಂಚಿದ್ದು, ಇದರಲ್ಲಿ ಅವರ ಪಾತ್ರ ನಿಜಕ್ಕೂ ಸಾಕಷ್ಟು ಗಮನ ಸೆಳೆದಿದೆ. ಈ ಸಿನಿಮಾಗೆ ಸಂಬಂಧ ಪಟ್ಟಂತೆ ಅವರು ನೀಡಿದ ಒಂದು ಸಂದರ್ಶನ ಈಗ ವೈರಲ್‌ ಆಗಿದೆ. ಇದರಲ್ಲಿ ಸಂದರ್ಶಕ ಕೇಳಿದ ಪ್ರಶ್ನೆಗೆ ಜಾಣ ಉತ್ತರ ನೀಡಿ ಜಾರಿಕೊಂಡಿದ್ದಾರೆ.

ಅದೇನೆಂದರೆ ʼಪ್ರೀತಿಯೋ, ಕಾಮವೋʼ ಎಂಬ ಪ್ರಶ್ನೆಗೆ ಏನು ಉತ್ತರ ಹೇಳಿದ್ದಾರೆ ಮೃಣಾಲ್‌ ಠಾಕೂರ್?

ಸೀತಾರಾಮಂ ಸಿನಿಮಾದಲ್ಲಿ ಮಾಡಿದ ಪಾತ್ರಕ್ಕಿಂತ ಲಸ್ಟ್‌ ಸ್ಟೋರಿಸ್‌ 2 ಚಿತ್ರದಲ್ಲಿ ನೀಡಿದ ಬೋಲ್ಡ್‌ ನಟನೆ ನೋಡಿ ಸಿನಿಪ್ರಿಯರು ನಿಜಕ್ಕೂ ಶಾಕ್‌ಗೊಳಗಾಗುವಂತೆ ಮಾಡಿದ್ದಾರೆ ಮೃಣಾಲ್‌ ಠಾಕೂರ್‌. ಈಗ ಅವರ ಸಂದರ್ಶನದ ವೀಡಿಯೋವೊಂದು ವೈರಲ್‌ ಆಗಿದೆ.

ಪ್ರೀತಿಯೋ, ಕಾಮವೋ ಎನ್ನುವ ಪ್ರಶ್ನೆಗೆ ಮೃಣಾಲ್‌ ಅವರು ʼಪ್ರೀತಿಯ ಜೊತೆ ಕಾಮʼ ಎನ್ನುವ ಉತ್ತರ ನೀಡಿದ್ದಾರೆ. ಇಷ್ಟು ಮಾತ್ರವಲ್ಲದೇ, ʼಲವ್‌ ಮ್ಯಾರೇಜ್‌ ಅಥವಾ ಅರೇಂಜ್‌ ಮ್ಯಾರೆಜ್‌ʼ ಎಂಬ ಪ್ರಶ್ನೆಗೆ ಕೂಡಾ ಅವರು ʼನಾನು ಮದುವೆ ಆಗುವುದು ಲವ್‌ ಮ್ಯಾರೇಜ್.‌ ಆದರೆ ಅರೇಂಜ್‌ ಮ್ಯಾರೇಜ್‌ ರೀತಿಯಲ್ಲಿ ನಾನು ಆಗುತ್ತೇನೆʼ ಎಂದು ಕೂಡಾ ಹೇಳಿದ್ದಾರೆ. ಮೃಣಾಲ್‌ ಠಾಕೂರ್‌ ಅವರ ಉತ್ತರ ಅವರ ಅಭಿಮಾನಿಗಳಿಗೆ ಖುಷಿ ನೀಡಿರಬಹುದೆಂದು ನಮ್ಮ ಅನಿಸಿಕೆ.

Leave A Reply

Your email address will not be published.