Samsung Galaxy M34 5G: ಸ್ಯಾಮ್‌ಸಂಗ್‌ನ ಪ್ರಬಲ, ಬಲಿಷ್ಠ ಫೋನ್‌ ಮಾರುಕಟ್ಟೆಗೆ! 50MP ಕ್ಯಾಮೆರಾ-6000mAh ಬ್ಯಾಟರಿ ಸಪೋರ್ಟ್‌, ಬೆಲೆ ಎಷ್ಟು?

samsung-galaxy-m34-5g-price-in-india-and-specifications

Samsung ಸಂಸ್ಥೆ ತನ್ನ ಹೊಸ ಫೋನ್‌ವೊಂದನ್ನು ಬಿಡುಗಡೆ ಮಾಡಿದೆ. ಗ್ಯಾಲಕ್ಸಿ M ಸರಣಿಯಲ್ಲಿ ಬಿಡುಗಡೆಯಾದ ಈ ಫೋನ್‌ನ ಹೆಸರೇ Samsung Galaxy M34 5G ಸ್ಮಾರ್ಟ್‌ಫೋನ್. ಇದನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದ್ದು, ಇದು Exynos ಪ್ರೊಸೆಸರ್‌ ಹೊಂದಿದೆ. ಇದರ ಕುರಿತು ಹೆಚ್ಚಿನ ಮಾಹಿತಿ ಈ ಕೆಳಗೆ ನೀಡಲಾಗಿದೆ.

ಈ ಫೋನ್ 6.6-ಇಂಚಿನ ಪೂರ್ಣ-HD+ (1,080×2,408 ಪಿಕ್ಸೆಲ್‌ಗಳು) ಸೂಪರ್ AMOLED ಡಿಸ್ಪ್ಲೇಯನ್ನು ಹೊಂದಿದೆ. ರಕ್ಷಣೆಗಾಗಿ, ಕಂಪನಿಯು ಗೊರಿಲ್ಲಾ ಗ್ಲಾಸ್ 5 ರಕ್ಷಣೆಯನ್ನು ಬಳಸಿದೆ. ಈ ಡ್ಯುಯಲ್-ಸಿಮ್ (ನ್ಯಾನೋ) ಸ್ಯಾಮ್‌ಸಂಗ್ ಫೋನ್‌ಗೆ ಐದು ವರ್ಷಗಳವರೆಗೆ ಭದ್ರತಾ ನವೀಕರಣಗಳು ಮತ್ತು ನಾಲ್ಕು ವರ್ಷಗಳವರೆಗೆ ಓಎಸ್ ನವೀಕರಣಗಳನ್ನು ಭರವಸೆ ನೀಡಲಾಗಿದೆ. Samsung Galaxy M34 5G ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ, ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಜೊತೆಗೆ 50 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಸೆನ್ಸಾರ್ ಜೊತೆಗೆ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ 13-ಮೆಗಾಪಿಕ್ಸೆಲ್ ಕ್ಯಾಮೆರಾ ಲಭ್ಯವಿರುತ್ತದೆ.

ಕೆನೆಕ್ಟಿವಿಟಿಕಾಗಿ ಈ ಫೋನ್‌ನಲ್ಲಿ 5G, Wi-Fi, ಬ್ಲೂಟೂತ್, GPS, 3.5mm ಹೆಡ್‌ಫೋನ್ ಜ್ಯಾಕ್ ಮತ್ತು USB ಟೈಪ್-ಸಿ ಪೋರ್ಟ್ ಅನ್ನು ನೀಡಲಾಗಿದೆ. ಡಾಲ್ಬಿ ಅಟ್ಮಾಸ್‌ನೊಂದಿಗೆ ಉತ್ತಮ ಧ್ವನಿ ನೀಡುವ ಸ್ಪೀಕರ್‌ ಕೂಡಾ ಇದೆ. ಬ್ಯಾಟರಿ ಬಗ್ಗೆ ಹೇಳುವುದಾದರೆ 6000 mAh ಬ್ಯಾಟರಿಯನ್ನು ಫೋನ್‌ನಲ್ಲಿ ನೀಡಲಾಗಿದೆ. ಇದರಿಂದಾಗಿ ಫುಲ್‌ ಚಾರ್ಜ್‌ ಮಾಡಿದರೆ ಫೋನ್ 2 ದಿನಗಳವರೆಗೆ ಬಳಸುವಂತೆ ಅನುಕೂಲ ಮಾಡಿದೆ. ಫೋನ್ 25W ವೇಗದ ಚಾರ್ಜ್ ನ ಸಪೋರ್ಟ್‌ ನೊಂದಿಗೆ ದೊರಕುತ್ತದೆ.

ಭಾರತದಲ್ಲಿ Samsung Galaxy M34 5G ಸ್ಮಾರ್ಟ್‌ಫೋನ್ ಎರಡು ವೆರೈಟಿಯಲ್ಲಿ ಬಿಡುಗಡೆ ಹೊಂದಿದೆ. ಮೊದಲನೆಯದು 6GB RAM + 128GB ಸ್ಟೋರೇಜ್ ಹೊಂದಿದ್ದು, ಇದರ ಬೆಲೆ 16,999 ನಿಗದಿಪಡಿಸಲಾಗಿದೆ. ಇನ್ನೊಂದು 8GB RAM + 128GB ಸ್ಟೋರೇಜ್‌ ಹೊಂದಿದ್ದು, ಇದರ ಬೆಲೆ 18,999 ರೂ. ನಿಗದಿಪಡಿಸಲಾಗಿದೆ. ಬ್ಯಾಂಕ್‌ ಕೊಡುಗೆಗಳೊಂದಿಗೆ ಫೋನ್‌ನ್ನು ನೀವು ಪ್ರಿಸ್ಮ್ ಸಿಲ್ವರ್‌, ಮಿಡ್‌ನೈಟ್‌ ಬ್ಲೂ ಮತ್ತು ವಾಟರ್‌ ಬ್ಲೂ ಬಣ್ಣಗಳಲ್ಲಿ ಖರೀದಿಸಬಹುದು. ಅಂದ ಹಾಗೆ ಗ್ರಾಹಕರು ಅಮೆಜಾನ್‌ ಪ್ರೈಮ್‌ ಡೇ ಯಲ್ಲಿ ಕೂಡಾ ಖರೀದಿ ಮಾಡಬಹುದಾಗಿದ್ದು, ಇದು ಜುಲೈ 15ರಂದು ಪ್ರಾರಂಭವಾಗುತ್ತದೆ.

 

 

Leave A Reply

Your email address will not be published.