Budget 2023: ಕುರಿ, ಹಸು ಸತ್ತರೆ ಪರಿಹಾರ ಹಣ! ಮೀನುಗಾರರಿಗೆ ಬಂಪರ್‌ ಕೊಡುಗೆ!!!

Latest news Political news Budget 2023 Compensation money if sheep or cow dies

ಈ ಹಿಂದೆ ಸಿದ್ದರಾಮಯ್ಯ ಅವರು ಅನುಗ್ರಹ ಯೋಜನೆಯನ್ನು ಪುನರ್‌ ಆರಂಭಿಸಿದ್ದಾರೆ. ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಗೆ ಆಯವ್ಯಯದಲ್ಲಿ 3024 ಕೋಟಿ. ರೂ. ಅನುದಾನ ನೀಡಿದ್ದು, ಈ ಮೂಲಕ ಕುರಿ, ಮೇಕೆಗೆ 5 ಸಾವಿರ ರೂ, ಹಸು, ಎಮ್ಮೆ ಮತ್ತು ಎತ್ತುಗಳು ಆಕಸ್ಮಿಕವಾಗಿ ಸಾವಿಗೀಡಾದರೆ 10 ಸಾವಿರ ರೂ. ಜಾನುವಾರು ಮಾಲೀಕರಿಗೆ ಪರಿಹಾರ ಸಿಗಲಿದೆ.

ಬಾರಿಯ ಬಜೆಟ್‌ನಲ್ಲಿ ಮೀನುಗಾರರಿಗೆ ಬಂಪರ್‌ ಕೊಡುಗೆ ಮೀನುಗಾರರಿಗೆ ಕಾಂಗ್ರೆಸ್‌ ಸರಕಾರ ನೀಡಿದೆ. ರಿಯಾಯಿತಿ ದರದ ಡೀಸೆಲ್‌ ಮಿತಿಯನ್ನು ಒಂದೂವರೆ ಲಕ್ಷ ಕಿಲೋ. ಲೀಟರ್‌ನಿಂದ ಎರಡು ಲಕ್ಷ ಕಿಲೋ ಲೀಟರ್‌ಗಳವರೆಗೆ ಹೆಚ್ಚಳ ಮಾಡಲಾಗಿದೆ. ಇಷ್ಟು ಮಾತ್ರವಲ್ಲದೇ ಮೀನುಗಾರರಿಗೆ 250 ಕೋಟಿ ರೂ. ಗಳಷ್ಟು ನೆರವು ಘೋಷಣೆ ಮಾಡಲಾಗಿದೆ. ಬಡ್ಡಿರ ರಹಿತ ಸಾಲವನ್ನು ಮೀನುಗಾರ ಮಹಿಳೆಯರಿಗೋಸ್ಕರ ರೂ.50 ಸಾವಿರದಿಂದ ರೂ.3 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ.

ಸಿಗಡಿ ಉತ್ಪನ್ನಗಳ ಮೌಲ್ಯವರ್ಧನೆ, ಉತ್ತಮ ಮಾರುಕಟ್ಟೆ, ಶೈತ್ಯಾಗಾರರ ಹೆಚ್ಚಳ, ಒಳನಾಡು ಮೀನುಗಾರಿಕೆಗೆ ಪ್ರೋತ್ಸಾಹ, ಕಾಟ್ಲಾ ಮತ್ತು ರೋಹು ಮೀನು ಮರಿಗಳ ಅಧಿಕ ಉತ್ಪಾದನೆಗೆ ಪ್ರೋತ್ಸಾಹ ನೀಡಲಾಗಿದೆ.

Leave A Reply

Your email address will not be published.