HSSC Ranger Recruitment: ರೇಂಜರ್‌ ಹುದ್ದೆಗೆ ಅರ್ಜಿ ಸಲ್ಲಿಸಿದ ಮಹಿಳಾ ಅಭ್ಯರ್ಥಿಗಳ ʼಎದೆ ಸುತ್ತಳತೆʼ ಅಳೆಯಲು ಸರಕಾರದ ಆದೇಶ! ಕಾಂಗ್ರೆಸ್‌ ಕಿಡಿ

Order to measure 'chest girth' of female candidates for ranger post

HSSC Ranger Recruitment: ಹರಿಯಾಣದಲ್ಲಿ ಅರಣ್ಯ ರಕ್ಷಕ ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗೆ ಹೆಣ್ಣುಮಕ್ಕಳ/ಮಹಿಳೆಯರ ಎದೆಯನ್ನು ಅಳೆಯಲು ಆದೇಶ ಹೊರಡಿಸಿದೆ. ಈ ಆದೇಶ ಈಗ ವಿವಾದಕ್ಕೆ ಕಾರಣವಾಗಿದೆ. ಹರಿಯಾಣ ಸರಕಾರದ ಈ ಆದೇಶವನ್ನು ಕಾಂಗ್ರೆಸ್‌ ಸರಕಾರ ತುಘಲಕ್‌ ಆದೇಶ ಎಂದು ಬಣ್ಣಿಸಿದೆ.

HSSC (ಹರಿಯಾಣ ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌) ಫಾರೆಸ್ಟ್‌ ರೇಂಜರ್‌ ಡೆಪ್ಯುಟಿ ಫಾರೆಸ್ಟ್‌ ರೇಂಜರ್‌ ಮತ್ತು ಫಾರೆಸ್ಟರ್‌ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದ್ದು, ಅದರಲ್ಲಿ ಮಹಿಳಾ ಅಭ್ಯರ್ಥಿಯ ದೈಹಿಕ ಪ್ರಮುಖ ಪರೀಕ್ಷೆಗೆ (ಪಿಎಂಟಿ) ನೀಡಲಾದ ಮಾನದಂಡದಲ್ಲಿ ಎದೆ ಸುತ್ತಳತೆ ಮಾಪನವನ್ನು ಸೇರಿಸಿದೆ.

ರೇಂಜರ್ ಹುದ್ದೆಗೆ ನೇಮಕಗೊಳ್ಳುವ ಮಹಿಳೆಯರ ಎದೆಯನ್ನು ವಿಸ್ತರಿಸಿದಾಗ 74 ಸೆಂ.ಮೀ ಮತ್ತು ವಿಸ್ತರಿಸಿದಾಗ 79 ಸೆಂ.ಮೀ ಆಗಿರಬೇಕು ಎಂದು ನೇಮಕಾತಿ ಅಧಿಸೂಚನೆಯಲ್ಲಿ ಹೇಳಲಾಗಿದೆ. ನೋಟಿಫಿಕೇಶನ್ ಬಿಡುಗಡೆಯಾದ ನಂತರ ಪ್ರತಿಪಕ್ಷ ಕಾಂಗ್ರೆಸ್ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಮಹಿಳೆಯರ ಎದೆಯನ್ನು ಅಳೆಯುವ ಸರ್ಕಾರದ ಆದೇಶವನ್ನು ಕಾಂಗ್ರೆಸ್ ತುಘಲಕ್‌ ಆದೇಶದೊಂದಿಗೆ ಹೋಲಿಸಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಟ್ವೀಟ್ ಮಾಡುವ ಮೂಲಕ ಸರ್ಕಾರದ ವಿರುದ್ಧ ವಾಗ್ಧಾಳಿ ಮಾಡಿದ್ದಾರೆ.

ಈ ಮಾನದಂಡಗಳನ್ನು ಇಟ್ಟುಕೊಂಡು ಹೆಣ್ಣುಮಕ್ಕಳನ್ನು ಅವಮಾನಿಸಲಾಗುತ್ತಿದೆ ಎಂದು ಸುರ್ಜೇವಾಲಾ ಹೇಳಿದ್ದಾರೆ. ಅನಾಗರಿಕ, ಕ್ರೂರ ಮತ್ತು ಮೂರ್ಖತನ ಎಂದು ಹೇಳಿದ್ದಾರೆ. ಸರಕಾರ ಈ ಕೂಡಲೇ ಹೆಣ್ಣುಮಕ್ಕಳ ಕ್ಷಮೆ ಯಾಚಿಸಬೇಕು ಎಂದು ಕಾಂಗ್ರೆಸ್‌ ಮುಖಂಡರ ಪರವಾಗಿ ಆಗ್ರಹ ಮಾಡಲಾಯಿತು.

Leave A Reply

Your email address will not be published.