ಅಕ್ಕನನ್ನು ಶಾಲೆಯ ಬಸ್‌ ಹತ್ತಿಸಲು ಬಂದ ಮೂರು ವರ್ಷದ ಪುಟ್ಟ ಕಂದಮ್ಮನ ಮೇಲೆ ಹರಿದ ಶಾಲಾ ಬಸ್‌! ಮಗು ಸಾವು

three year old baby death by school bus at koppala

ಮೂರು ವರ್ಷದ ಪುಟ್ಟ ಮಗುವೊಂದರ ಮೇಲೆ ಶಾಲಾ ವಾಹನ ಹರಿದು ಮೃತಪಟ್ಟ ಘಟನೆಯೊಂದು ನಡೆದಿದೆ. ಈ ಘಟನೆ ಕುಷ್ಟಗಿ ಪೊಲೀಸ್‌ ಠಾಣಾ ವ್ಯಾಪ್ತಿಯ ಗೋತಗಿ ಗ್ರಾಮದಲ್ಲಿ ನಡೆದಿದೆ. ಶಾಲೆಗೆ ಹೊರಟ ತನ್ನ ಅಕ್ಕನನ್ನು ಕಳಿಸಲು ಅಜ್ಜಿಯ ಜೊತೆ ಬಂದಿದ್ದ ಮೂರು ವರ್ಷದ ಮಗು ಚೈತ್ರಾ, ಅಕ್ಕ ಬಸ್‌ ಹತ್ತಿ ಹೋಗಿದ್ದು, ವಾಪಾಸು ಬರುವಾಗ ವಾಹನ ಹರಿದು ಮೃತಪಟ್ಟಿದ್ದಾಳೆ. ಪುಟ್ಟ ಮಗು ಚೈತ್ರಾಳ ತಲೆಯ ಮೇಲೆಯೇ ವಾಹನದ ಬಲಗಡೆಯ ಚಕ್ರ ಹರಿದು ಹೋಗಿದ್ದು, ಮಗು ಸಾಕಷ್ಟು ರಕ್ತಸ್ರಾವವುಂಟಾಗಿ ಮೃತಪಟ್ಟಿದೆ.

ಬಸವರಾಜ ಬಾವಿಕಟ್ಟಿ ಅವರ ಮೂವರು ಪುತ್ರಿಯರಲ್ಲಿ ಈ ಮಗು ಕೊನೆಯವಳು. ಇಬ್ಬರು ಪುತ್ರಿಯರು ಐದು ಕಿ.ಮೀ.ದೂರದಲ್ಲಿರುವ ಶಾಲೆಗೆ ಹೋಗುತ್ತಿದ್ದು, ಎಂದಿನಂತೆ ಇಂದು ಕೂಡಾ ಶಾಲೆಗೆ ಹೋಗಲೆಂದು ಶಾಲಾ ವಾಹನ ಬಂದಿದ್ದು, ಅಕ್ಕ ಹೋದ ನಂತರ ಈ ಘಟನೆ ನಡೆದಿದೆ. ವಾಹನ ಚಾಲಕ ಪ್ರವೀಣ ಕುಮಾರ ಕಂದಕೂರು ವಾಹನ ಚಲಾಯಿಸಿದ್ದು ಮಗು ಚಕ್ರದಡಿಗೆ ಬಿದ್ದು ಮೃತಪಟ್ಟಿದ್ದು, ಮಗುವಿನ ಶವವನ್ನು ಕುಷ್ಟಗಿ ಆಸ್ಪತ್ರೆಗೆ ತರಲಾಗಿತ್ತು.

ಬಸವರಾಜ ಬಾವಿಕಟ್ಟಿ(ತಂದೆ)ಅವರು ನೀಡಿದ ದೂರಿನನ್ವಯ ಕುಷ್ಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.