ಜೈನಮುನಿಯ ಬರ್ಬರ ಹತ್ಯಾ ಪ್ರಕರಣ, ಇತಿಹಾಸದಲ್ಲೇ ಪ್ರಥಮ- ವೀರೇಂದ್ರ ಹೆಗ್ಗಡೆ ಆಕ್ರೋಶ

veerendra heggade reacts on jainamuni murder

ಡಾ.ಡಿ.ವೀರೇಂದ್ರ ಹೆಗ್ಗಡೆ (Veerendra Heggade) ಅವರು ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಜೈನಮುನಿ ಆಚಾರ್ಯ ಶ್ರೀ ನಂದಿ ಮಹಾರಾಜರ ಅವರ ಹತ್ಯೆಯನ್ನು ತೀವ್ರವಾಗಿ ಖಂಡಿಸಿದ್ದು ಈ ಬಗ್ಗೆ ಮಾಧ್ಯಮದವರೊಂದಿಗೆ ಹೇಳಿದ್ದಾರೆ. ದಿಗಂಬರ ಮುನಿಗಳ ಹತ್ಯೆ ಇತಿಹಾಸದಲ್ಲಿಯೇ ಪ್ರಥಮ ಎಂದು ಅವರು ಹೇಳಿದ್ದು, ಇದರಿಂದ ಮನಸ್ಸಿಗೆ ನೋವಾಗಿದೆ ಎಂದಿದ್ದಾರೆ. ಹತ್ಯೆ ಮಾಡಿದವರ ಬಂಧನ ಆಗಿದೆ. ಈ ವಿಷಯಕ್ಕೆ ಸರಕಾರ ಪೊಲೀಸರಿಗೆ ಅಭಿನಂದನೆ ಸಲ್ಲಿಸುತ್ತೇನೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು, ಹಾಗೆನೇ ಮುನಿಗಳಿಗೆ ಸರಕಾರ ರಕ್ಷಣೆ ಕೊಡಬೇಕಿದೆ ಎಂದು ಹೇಳಿದರು.

ಜುಲೈ 6 ರಂದು ಹೀರೆಕುಡಿ (Hirekudi) ನಂದಿ ಪರ್ವತ ಆಶ್ರಮದಿಂದ (Nandi Parvatha Ashram) ನಾಪತ್ತೆಯಾಗಿದ್ದ ಜೈನಮುನಿ (Jain Muni) ಅವರು ಬರ್ಬರವಾಗಿ ಹತ್ಯೆಯಾಗಿರುವ ಭೀಕರ ಸುದ್ದಿ ಇಂದು ತಿಳಿದು ಬಂದಿದೆ. ರಾಯಬಾಗ ತಾಲೂಕಿನ ಖಟಕಬಾವಿ ಗ್ರಾಮದ ಹೊರವಲಯದ ತೆರೆದ ಕೊಳವೆ ಬಾವಿಯಲ್ಲಿ ಜೈನಮುನಿ ಅವರ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ.

ಜೈನಮುನಿ ಕಾಮಕುಮಾರನಂದಿ ಮಹಾರಾಜ (Acharya Shri 108 Kamkumarnandi Maharaj) ಅವರ ಮೃತದೇಹ ಕೊಳವೆಬಾವಿಯಲ್ಲಿ ಪತ್ತೆಯಾಗಿದ್ದು, ಬೆಳಗ್ಗೆ ಆರು ಗಂಟೆಯಿಂದ ಶೋಧಕಾರ್ಯ ನಡೆಸಿದ ಸಿಬ್ಬಂದಿಗಳು ಸತತ ಒಂಭತ್ತು ಗಂಟೆಗಳ ಕಾರ್ಯಾಚರಣೆ ಮಾಡಿ ಜೈನ ಮುನಿ ಮೃತದೇಹ ಪತ್ತೆ ಮಾಡಿದರು. ಜೈನಮುನಿ ಅವರ ದೇಹವನ್ನು 400 ಅಡಿ ಆಳದ ಕೊಳವೆ ಬಾವಿಗೆ ಎಸೆಯಲಾಗಿದ್ದು, ಜೈನ ಮುನಿಯ ಹತ್ಯೆ ಎಷ್ಟೊಂದು ಬರ್ಬರವಾಗಿತ್ತೆಂದರೆ ಮುನಿಯ ತಲೆಯ ಎರಡು ಭಾಗ, ಕೈ, ಕಾಲು, ತೊಡೆ, ಹೊಟ್ಟೆ ಸೇರಿದಂತೆ ಪೀಸ್‌ ಪೀಸ್‌ ಮಾಡಲಾಗಿದ್ದು,  ಒಂಭತ್ತು ಭಾಗ ಪತ್ತೆಯಾಗಿದೆ.

Leave A Reply

Your email address will not be published.