Heavy Rain: ಭಾರೀ ಮಳೆ; ನಾಳೆ ಈ ಶಾಲೆಗಳಿಗೆ ರಜೆ ಘೋಷಣೆ

heavy-rain-school-will-remain-closed-tomorrow

Heavy Rain: ಮುಂಗಾರು ಮಳೆ ಆರಂಭವಾಗಿದ್ದು, ಮಳೆ ನಿಲ್ಲೋ ಮಾತು ಕಾಣಿಸುತ್ತಿಲ್ಲ. ನಿರಂತರವಾಗಿ ಮಳೆ ಸುರಿಯುತ್ತಲೇ ಇರುತ್ತದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಒಂದು ದಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಹವಾಮಾನ ಇಲಾಖೆಯ ಮುನ್ನೆಚ್ಚರಿಕೆಯನ್ನು ಗಮನದಲ್ಲಿಟ್ಟುಕೊಂಡು ದೆಹಲಿಯ ಎಲ್ಲಾ ಶಾಲೆಗಳಿಗೆ ಸೋಮವಾರ ಒಂದು ದಿನ ರಜೆ ಘೋಷಿಸಲಾಗಿದೆ ಎಂದು ದೆಹಲಿ ಸಿಎಂ ಅರವಿಂದ್‌ ಕೇಜ್ರೀವಾಲ್‌ ಘೋಷಣೆ ಮಾಡಿದ್ದಾರೆ.

ಈ ವಾರ ದೆಹಲಿ ಸೇರಿದಂತೆ ವಾಯುವ್ಯ ಭಾರತದಲ್ಲಿ ಮಳೆಯಾಗಲಿದೆ ಎಂದು ದೆಹಲಿ ಐಎಂಡಿ ಮುಖ್ಯಸ್ಥ ಚರಣ್ ಸಿಂಗ್ ಹೇಳಿದ್ದಾರೆ. ಇನ್ನು ಮೂರು ದಿನಗಳ ಕಾಲ ಮಳೆಯ ಆರ್ಭಟ ಹೆಚ್ಚಲಿದ್ದು, ಆನಂತರ ಮಳೆಯ ತೀವ್ರತೆ ಕಡಿಮೆಯಾಗಲಿದೆ. ಈ ಸಮಯದಲ್ಲಿ, ಶಾಖದಿಂದ ಸ್ವಲ್ಪ ಪರಿಹಾರ ಇರುತ್ತದೆ. ಭಾನುವಾರ ಬೆಳಿಗ್ಗೆ 8.30 ರವರೆಗೆ ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ 153 ಮಿಮೀ ಮಳೆ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇದು 1982ರ ನಂತರ ಇಷ್ಟು ಜೋರು ಮಳೆ ಜುಲೈನಲ್ಲಿ ಒಂದೇ ದಿನದಲ್ಲಿ ದಾಖಲಾಗಿದೆ ಎಂದು ಹೇಳಲಾಗಿದೆ.

 

Leave A Reply

Your email address will not be published.