Instant Jelebi: ಮಳೆಗೆ ಸಿಹಿ ತಿನ್ನಲು ಮನಸ್ಸಾದರೆ, ಇಲ್ಲಿದೆ ಗರಿಗರಿಯಾದ ರುಚಿಕರವಾದ ಜಿಲೇಬಿ ರೆಸಿಪಿ!

instant-jelebi-recipe-at-home-for-rainy-season

ಭಾರತೀಯರು ಸ್ವೀಟ್‌ ಪ್ರಿಯರು. ಹಳ್ಳಿಯಾಗಿರಲಿ, ನಗರವಿರಲಿ, ದೊಡ್ಡವರಿರಲಿ, ಮಕ್ಕಳಿರಲಿ ಎಲ್ಲರಿಗೂ ಇಷ್ಟವಾದ ತಿಂಡಿ ಎಂದರೆ ಅದು ʼಜಿಲೇಬಿʼ. ಭಾರತದ ಪ್ರತಿ ಬೀದಿ ಬೀದಿಯಲ್ಲಿ ಬಿಸಿ ಬಿಸಿ ಜಿಲೇಬಿಯನ್ನು ತಯಾರಿಸುವುದನ್ನು ನೀವು ನೋಡಿರಬಹುದು. ರಸಭರಿತವಾದ, ಕುರುಕುಲಾದ ಸಿಹಿಯ ರುಚಿಯ ಹಿಂದೆ, ಮಿಠಾಯಿ ಮಾಡುವವರ ಶ್ರಮ, ಸಮಯ ಇರುತ್ತದೆ. ರುಚಿಕರವಾದ ಜಿಲೇಬಿ ನಿಮ್ಮ ಬಾಯಿಯಲ್ಲಿ ಇಟ್ಟ ಹಾಗೆ ಕರಗಲು ಪ್ರಾರಂಭವಾದರೆ ಇನ್ನೊಂದು ಮಗದೊಂದು ತಿನ್ನುತ್ತಲೇ ಇರುತ್ತೀರಿ. ಅದರಲ್ಲೂ ಈ ಮಳೆಗಾಲದಲ್ಲಿ ಬಿಸಿಬಿಸಿ ಜಿಲೇಬಿ ತಿಂದಾಗ ಸಿಗುವ ಖುಷಿನೇ ಬೇರೆ.

ಎಷ್ಟೋ ಸಲ ಮನೆಯಲ್ಲಿ ಕೂತಿದ್ದಾಗ, ಹೊರಗೆ ಮಳೆ ಸುರಿಯುತ್ತಿದ್ದಾಗ ಸಿಹಿ ತಿನ್ನುವ ಎನ್ನುವ ಹಂಬಲ ಪ್ರಾರಂಭವಾಗುವುದು ಸಹಜ. ಆದರೆ ಮನೆಯಲ್ಲಿ ಕ್ವಿಕ್‌ ಆಗಿ ಜಿಲೇಬಿ ಮಾಡುವುದು ಕಷ್ಟ. ಆದರೆ ನೀವು ಚಿಂತೆ ಮಾಡಬೇಕಿಲ್ಲ. ನಾವಿಲ್ಲಿ ನೀಡುವ ಕ್ರಮವನ್ನು ಅನುಸರಿಸಿದೆ ಬಿಸಿಬಿಸಿ ಜಿಲೇಬಿ ನಿಮ್ಮ ಹೊಟ್ಟೆಯೊಳಗೆ ಬೇಗನೆ ಮಾಡಬಹುದು.

ಬೇಕಾಗುವ ಸಾಮಾಗ್ರಿಗಳು:
ಸುಮಾರು ಒಂದು ಕಪ್ ಮೈದಾ ಹಿಟ್ಟು, ಎರಡು ಕಪ್ ಸಕ್ಕರೆ (ಸಕ್ಕರೆ ಪಾಕ ತಯಾರಿಸಲು), ಒಂದು ಕಪ್ ನೀರು, ಹಳದಿ ಬಣ್ಣ ಅಥವಾ ಕೇಸರಿ, ಒಂದು ಪ್ಯಾಕೆಟ್ ಇನೋ (ಜಿಲೇಬಿಯ ಹಿಟ್ಟನ್ನು ತ್ವರಿತವಾಗಿ ತಯಾರಿಸಲು).

ಮೊದಲನೆಯದಾಗಿ ಬಾಣಲೆಯಲ್ಲಿ ಸಕ್ಕರೆಯನ್ನು ನೀರಿನಲ್ಲಿ ಹಾಕಿ, ಸಕ್ಕರೆ ಪಾಕ ರೆಡಿ ಮಾಡಿಡಿ (ಮಧ್ಯಮ ಉರಿಯಲ್ಲಿ). ಸಕ್ಕರೆ ಪಾಕ ತಯಾರು ಆಗುತ್ತಿರುವಾಗಲೇ ನೀವು ಜಿಲೇಬಿ ಹಿಟ್ಟನ್ನು ತಯಾರಿಸಬೇಕು. ಇದರ ನಡುವೆ ಸಿರಪ್‌ ಮೇಲೆ ಕೈಯಾಡಿಸುತ್ತಿರಿ. ಸಕ್ಕರೆ ಪಾಕ ಆಗುತ್ತಿರುವಾಗ ಸ್ವಲ್ಪ ಕೇಸರಿ ಅಥವಾ ಹಳದಿ ಬಣ್ಣ ಹಾಕಿ.

ಜಿಲೇಬಿಗೆ ಹಿಟ್ಟನ್ನು ತಯಾರಿಸಲು, ಆಳವಾದ ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಮೈದಾ ಹಿಟ್ಟಿನ ಜೊತೆಗೆ ತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮಿಶ್ರಣ ಮಾಡುವಾಗ ಯಾವುದೇ ಉಂಡೆಗಳು ಆಗಬಾರದು. ಈಗ ಬೆರೆಸುವಾಗ ಇನೋ ಸೇರಿಸಿ, ಜೊತೆಗೆ ಸ್ವಲ್ಪ ನೀರು ಹಾಕಿ ಚೆನ್ನಾಗಿ ಹದವಾದ ಹಿಟ್ಟನ್ನು ತಯಾರಿಸಿ. ಈಗ ಜಿಲೇಬಿ ಎಣ್ಣೆಯಲ್ಲಿ ಬಿಡಲು, ಸಾಸ್ ಬಾಟಲಿ, ಅಥವಾ ನೀವು ಬ್ಯಾಗ್ ಕೋನ್ ಅಥವಾ ಬಟ್ಟೆಯನ್ನು ಸಹ ಬಳಸಬಹುದು. ಜಿಲೇಬಿಯನ್ನು ಬಿಸಿ ಎಣ್ಣೆಯಲ್ಲಿ ಫ್ರೈ ಮಾಡಿ ಮತ್ತು ಸಕ್ಕರೆ ಪಾಕದಲ್ಲಿ ಸ್ವಲ್ಪ ಸಮಯದವರೆಗೆ ಅದ್ದಿ. ನಿಮ್ಮ ಬಿಸಿ ಬಿಸಿ ಜಿಲೇಬಿಗಳು ಸಿದ್ಧವಾಗಿವೆ. ಅದನ್ನು ಪಿಸ್ತಾದಿಂದ ಅಲಂಕರಿಸಿ ಬಡಿಸಿ.

 

Leave A Reply

Your email address will not be published.