Kanpur: ಮತ್ತೊಂದು ವಿಶ್ವಾಸದ್ರೋಹ! ಹೆಂಡತಿ ಆಸೆ ಈಡೇರಿಸಿದ ಗಂಡ; ಕೆಲಸ ಸಿಕ್ಕ ಹೆಂಡತಿ, ಗಂಡ ನೀ ಕಪ್ಪು, ಬೇಡ ಎಂದಳು!!!

Kanpur Dehat latest news Husband toils hard to make wife an nurse but she cheats on him

Kanpur: ಉತ್ತರಪ್ರದೇಶದ ಅಜಂಗಢದ ಅಲೋಕ್‌ ಮತ್ತು ಪಿಸಿಎಸ್‌ ಜ್ಯೋತಿ ಮೌರ್ಯ ಅವರ ಕಥೆ ಎಲ್ಲರಿಗೂ ಗೊತ್ತೇ ಇದೆ. ಇದಿನ್ನೂ ಟ್ರೆಂಡಿಂಗ್‌ನಲ್ಲಿರುವಾಗಲೇ ಕಾನ್ಪುರದಲ್ಲಿ(Kanpur) ಇಂತಹುದೇ ಹೊಸ ಪ್ರಕರಣವೊಂದು ಮುನ್ನೆಲೆಗೆ ಬಂದಿದೆ. ಇಲ್ಲೂ ಕೂಡಾ ಗಂಡನೊಬ್ಬ ತನ್ನ ಪತ್ನಿಯನ್ನು ಕಷ್ಟಪಟ್ಟು ನರ್ಸಿಂಗ್‌ ಓದಿಸಿದ್ದಾನೆ. ಇದಕ್ಕಾಗಿ ಅಪಾರ ಸಾಲ ಕೂಡಾ ಮಾಡಿದ್ದಾನೆ. ಆದರೆ ಖುಷಿಯ ವಿಷಯ ಏನೆಂದರೆ ಅಷ್ಟು ಕಷ್ಟಪಟ್ಟು ಓದಿಸಿದ್ದಕ್ಕೆ ಪತ್ನಿಗೆ ಒಳ್ಳೆಯ ಕೆಲಸ ಕೂಡಾ ದೊರಕಿದೆ. ಗಂಡ ನಿಟ್ಟುಸಿರು ಬಿಟ್ಟ. ಕಷ್ಟಗಳೆಲ್ಲ ದೂರವಾಗುತ್ತೆ ಎಂದು ಆದರೆ, ಅದೊಂದು ಭ್ರಮೆಯಾಗಿತ್ತು. ಹೆಂಡತಿಯಾದವಳು ಆತನಿಗೆ ದೊಡ್ಡ ಪೆಟ್ಟೊಂದನ್ನೇ ನೀಡಿದಳು. ಕೈ ತುಂಬಾ ಸಂಬಳ ಬರುವ ಕೆಲಸ ದೊರಕಿದ ನಂತರ ಆಕೆ ನೀನು ಕಪ್ಪಗಿದ್ದೀಯ ನೀನು ನನಗೆ ಇಷ್ಟವಿಲ್ಲ ಎಂದು ಹೆಂಡತಿ ಹೇಳಿದ್ದು, ಗಂಡನಿಗೆ ಆಘಾತವಾಗಿದೆ.

ಈ ಪ್ರಕರಣವು ಕಾನ್ಪುರ ದೇಹತ್‌ನ ಮೈಥಾ ಪೊಲೀಸ್ ಠಾಣೆ ವ್ಯಾಪ್ತಿಯ ರವೀಂದ್ರ ಪುರಂ ಗ್ರಾಮದಲ್ಲಿ ನಡೆದಿದೆ. ಇಲ್ಲಿ ನೆಲೆಸಿರುವ ಅರ್ಜುನ್ 2017ರಲ್ಲಿ ಬಸ್ತಿ ಜಿಲ್ಲೆಯ ನಿವಾಸಿ ಸವಿತಾ ಮೌರ್ಯ ಎಂಬಾಕೆಯನ್ನು ವಿವಾಹವಾಗಿದ್ದ. ಸವಿತಾ ಮೊದಲಿನಿಂದಲೂ ಮಹತ್ವಾಕಾಂಕ್ಷೆ ಹೊಂದಿದ್ದು, ಪತಿಯ ಮುಂದೆ ಓದಿ ಏನಾದರೂ ಆಗಬೇಕು ಎಂಬ ಆಸೆಯನ್ನು ವ್ಯಕ್ತಪಡಿಸಿದಳು. ಅರ್ಜುನ್ ಕೂಡ ಆಕೆಯ ಆಸೆಯನ್ನು ಗೌರವಿಸಿ, ಮತ್ತು ಬಡತನದ ನಡುವೆಯೂ ಕಷ್ಟಪಟ್ಟು ಕೆಲಸ ಮಾಡುವ ಮೂಲಕ ಕಾನ್ಪುರದ ಮಂಧಾನದ ರಾಮಾ ಕಾಲೇಜ್ ಆಫ್ ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ಸೈನ್ಸ್ ಇನ್ಸ್ಟಿಟ್ಯೂಟ್‌ಗೆ ಸೇರಿಸಿದ.

ಪ್ರತಿತಿಂಗಳು ಗಂಡ ತನ್ನ ಹೆಂಡತಿಯ ಓದಿಗಾಗಿ ಶ್ರಮಿಸಿದ. ಓದಿನಲ್ಲಿ ಯಶಸ್ಸು ಗಂಡ ಹೆಂಡತಿ ನಂತರ ಹಲವಾರು ಪ್ರಯತ್ನಗಳ ನಂತರ ಕಾನ್ಪುರ್‌ ದೇಹತ್‌ನ ರಸುಲಾಬಾದ್‌ನ ನಾರ್ಖರ್ದ್‌ನಲ್ಲಿರುವ ಆರೋಗ್ಯ ಕೇಂದ್ರದಲ್ಲಿ ಕೆಲಸ ದೊರಕಿತು. ಇಲ್ಲಿ ಸವಿತಾಗೆ ಒಳ್ಳೆಯ ಸಂಬಳ ಸಿಗತೊಡಗಿತು. ಇದಾದ ನಂತರ ಸವಿತಾಳ ವರ್ತನೆಯಲ್ಲಿ ಬದಲಾವಣೆ ಆಗಿದೆ. ಪತಿಯನ್ನು ಯಾವಾಗಲೂ ನೀನು ಕಪ್ಪು ಮುಖದವನು ಎಂದು ಕರೆದು ಅವಮಾನ ಮಾಡತೊಡಗಿದಳು. ಅದೇ ವೇಳೆ ನನಗೆ ನೀನು ಇಷ್ಟವಿಲ್ಲ, ನಿನ್ನ ಸ್ಥಿತಿಗೆ ನಮ್ಮ ಸ್ಥಿತಿ ಸರಿಬರುವುದಿಲ್ಲ ಎಂದು ನೇರವಾಗಿಯೇ ಹೇಳಿದ್ದಾಳೆ.

ಇದಾದ ಬಳಿಕ ಸವಿತಾ ಪತಿಯಿಂದ ದೂರವಾಗಿದ್ದಾಳೆ. ಪತಿ ಅರ್ಜುನ್ ಈಗ ಈ ವಿಷಯದಲ್ಲಿ ಸರ್ಕಾರ ಮತ್ತು ಆಡಳಿತದಿಂದ ನ್ಯಾಯಕ್ಕಾಗಿ ಮನವಿ ಮಾಡುತ್ತಿದ್ದಾರೆ.

Leave A Reply

Your email address will not be published.