America: ಗಂಡ ಸತ್ತ ನಂತರ ತನ್ನ ಮಗನಿಂದಲೇ ಕಾಮಾಸಕ್ತಿ ಬಯಕೆ ಈಡೇರಿಸಿಕೊಳ್ಳುತ್ತಿದ್ದ ತಾಯಿಯ ಬಂಧನ!

Latest international news Rudy farias mother kept him for illegal relationship in America

America: ತಾಯಿ-ಮಗು ಸಂಬಂಧ ಪವಿತ್ರ ಸಂಬಂಧ. ಇಲ್ಲಿ ಪ್ರೀತಿಯೇ ಮುಖ್ಯ. ಆದರೆ ಈ ತರಹದ ಒಂದು ಸಂಬಂಧಕ್ಕೆ ಕಳಂಕ ತರುವಂತಹ ಒಂದು ಕೆಲಸ ಅಮೆರಿಕಾದಲ್ಲಿ( America) ನಡೆದಿದೆ. ಇಲ್ಲಿ ತಾಯಿಯೊಬ್ಬಳು ತನ್ನ ಗಂಡ ಸತ್ತ ನಂತರ ತಾನು ಹೆತ್ತ ಮಗುವಿನೊಂದಿಗೆನೇ ಕಾಮಾಸಕ್ತಿ ತೀರಿಸಿಕೊಂಡಿದ್ದಾಳೆ. ಈ ಮೂಲಕ ತನ್ನ ಮಗನಿಗೆ ಲೈಂಗಿಕ ದೌರ್ಜನ್ಯವೆಸಗಿದ್ದಾಳೆ. ಈ ಮೂಲಕ ತನ್ನ ಮಗನ ಜೊತೆ ಲೈಂಗಿಕ ದೌರ್ಜನ್ಯವೆಸಗಿದ್ದಾಳೆ. ಗಂಡ ಸತ್ತ ಬಳಿಕ ಬರೋಬ್ಬರು ಎಂಟು ವರ್ಷಗಳ ಕಾಲ ಮಗನನ್ನು ಬಂಧನದಲ್ಲಿಟ್ಟು ಹಾಸಿಗೆಯಲ್ಲಿ ತನ್ನ ಜೊತೆ ಮಲಗಲು ಒತ್ತಾಯ ಮಾಡಿದ್ದಾಳೆ.

ಅಮೆರಿಕಾದ ಟೆಕ್ಸಾಸ್‌ನಲ್ಲಿ ಈ ಘಟನೆ ನಡೆದಿದೆ. ಈ ಹುಡುಗ ಎಂಟು ವರ್ಷಗಳ ನಾಪತ್ತೆಯಾಗಿದ್ದಾನೆಂದು ಆತನ ತಾಯಿ ದೂರು ನೀಡಿದ್ದಳು. ಆ ಸಮಯದಲ್ಲಿ ಈತನಿಗೆ 17ವರ್ಷ. ರೂಡಿ ಎಂದು ಆ ಬಾಲಕನ ಹೆಸರು. ಈಶಾನ್ಯ ಹೂಸ್ಟನ್‌ನಲ್ಲಿರುವ ತನ್ನ ಮನೆಯಿಂದ ಎರಡು ನಾಯಿಗಳನ್ನು ವಾಕಿಂಗ್‌ಗೆ ಕರೆದುಕೊಂಡು ಹೋಗಿದ್ದ ಸಂದರ್ಭದಲ್ಲಿ ಆತ ನಾಪತ್ತೆಯಾಗಿದ್ದ ಎಂದು ತಾಯಿ ದೂರು ನೀಡಿದ್ದಳು. ಆದರೆ ಸ್ವಲ್ಪ ದಿನಗಳ ನಂತರ ನಾಯಿ ಪತ್ತೆಯಾಗಿತ್ತು. ಆದರೆ ರೂಡಿ ಪತ್ತೆಯಾಗಿರಲಿಲ್ಲ. ಹೀಗೆ ಹಲವಾರು ವರ್ಷ ಆತನ ಪತ್ತೆನೇ ಅಗಿರಲಿಲ್ಲ. ಆದರೆ ಈಗ ಅತ ಪತ್ತೆಯಾಗಿದ್ದು, ಈತನ ವಯಸ್ಸು 25 ಈಗ. ಈತನ ಮೂಲಕವೇ ಈಗ ತನ್ನ ತಾಯಿ ತನ್ನ ಕಾಮದ ಬಯಕೆಯನ್ನು ತೀರಿಸಿಕೊಳ್ಳಲು ತನ್ನನ್ನು ಬಂಧದಲ್ಲಿಟ್ಟಿದ್ದಳು ಎಂಬುವುದು ಬಯಲಾಗಿದೆ.

ಚರ್ಚ್‌ವೊಂದರ ಹೊರಗೆ ಪತ್ತೆಯಾಗಿರುವ ರೂಡಿ, ತನ್ನ ತಾಯಿ ನನ್ನ ಅಪ್ಪ ಮೃತನಾದ ನಂತರ ನನ್ನೊಂದಿಗೆ ಗಂಡನ ರೀತಿಯಲ್ಲಿ ಇರಬೇಕು ಎಂದು ಒತ್ತಾಯಮಾಡುತ್ತಿದ್ದುದಾಗಿ ಹೇಳಿದ್ದಾನೆ. ತನ್ನ ತಾಯಿ ಜೆನ್ನಿ ಸಂತಾನಾ ತನ್ನನ್ನು ಲೈಂಗಿಕ ತೃಷೆಗಾಗಿ ಬಳಸಿಕೊಂಡಿದ್ದಾಗಿ ರೂಡಿ ಒಂದು ವಾರದ ನಂತರ ಹೇಳಿದ್ದಾನೆ. ತಾಯಿ ನನ್ನ ಗಂಡನಾಗಿ ಇರು, ಅಷ್ಟೇ ಅಲ್ಲ ಯಾರಿಗೂ ಇದನ್ನು ಹೇಳಬೇಡ, ಪೊಲೀಸರಿಗೆ ಹೇಳಿದರೆ ತೊಂದರೆಯಾಗುತ್ತದೆ ಎಂದು ಬೆದರಿಕೆ ಹಾಕುತ್ತಿದ್ದಳು ಎಂದು ಮಗ ಹೇಳಿದ್ದಾನೆ.

ಹೂಸ್ಟನ್‌ನ ಪೊಲೀಸರು ತಾಯಿ ಜೆನ್ನಿ ಮತ್ತು ಮಗ ರೂಡಿಯನ್ನು ಮುಖಾಮುಖಿ ವಿಚಾರಣೆ ನಡೆಸಿ, ಸತ್ಯಾಸತ್ಯತೆ ತಿಳಿದು ನಂತರ ಜೆನ್ನಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇದೀಗ ಮಹಿಳೆಯನ್ನು ಲೈಂಗಿಕ ದೌರ್ಜನ್ಯ, ಅಪಹರಣದ ಆರೋಪದ ಮೇಲೆ ವಶಕ್ಕೆ ಪಡೆಯಲಾಗಿದ್ದು, ಮುಂದೆ ಏನಾಗುತ್ತದೆ ಎಂದು ಕಾದು ನೋಡಬೇಕಿದೆ.

 

Leave A Reply

Your email address will not be published.