Optical Illusion: ಈ ಚಿತ್ರದಲ್ಲಿ ಅಡಗಿರುವ ಬೆಕ್ಕನ್ನು ಕಂಡು ಹಿಡಿಯುವಿರಾ ಸ್ನೇಹಿತರೇ? ಇದಕ್ಕೆ ನಿಮ್ಮ ಬಳಿ ಇರುವುದು ಕೇವಲ 10ಸೆಕೆಂಡ್‌

Optical Illusion game find the cat in this picture within 10 seconds

Optical Illusion: ನಿಮ್ಮ ಮನಸ್ಸಿಗೆ ಒಂದು ಸವಾಲಿನ ಕೆಲಸ ಆಪ್ಟಿಕಲ್‌ ಭ್ರಮೆಗಿಂತ ಬೇರೆನೂ ಇಲ್ಲ. ಸಾಮಾಜಿಕ ಜಾಲತಾಣದಲ್ಲಿ ಹಲವಾರು ಆಪ್ಟಿಕಲ್‌ ಭ್ರಮೆಯಂತಹ ಹಲವಾರು ಚಿತ್ರಗಳಿವೆ. ಇದನ್ನು ನೀವೂ ಪ್ರಯತ್ನಿಸಬಹುದು. ಇಂದು ನಾವು ನಿಮಗಾಗಿ ನಾವು ಒಂದು ಪ್ರಶ್ನೆ ತಂದಿದ್ದೇವೆ. (Optical Illusion) ಈ ಚಿತ್ರದಲ್ಲಿ ಅಡಗಿರುವ ಬೆಕ್ಕನ್ನು ಕಂಡು ಹಿಡಿಯುವುದೇ ನಿಮಗೆ ಸವಾಲು. ಈ ಚಿತ್ರವನ್ನು ಚಾರ್ಲ್ಸ್‌ ಕ್ಲಾಕ್‌ವರ್ಕ್ಸ್‌ ಎಂಬ ಟಿಕ್‌ಟಾಕ್‌ ಬಳಕೆದಾರರು ಹಂಚಿಕೊಂಡಿದ್ದಾರೆ. ಈ ಚಿತ್ರ ಜನರನ್ನು ಆಶ್ಚರ್ಯಚಕಿತರನ್ನಾಗಿಸಿದೆ.

ಈ ಚಿತ್ರದಲ್ಲಿ ಕಾಡಿನಲ್ಲಿ ಮರದ ರಾಶಿಯಿರುವುದನ್ನು ನೀವು ಕಾಣಬಹುದು. ಇದರಲ್ಲಿ ಬೆಕ್ಕೊಂದು ಅಡಗಿ ಕುಳಿತಿದೆ. ನಿಮ್ಮ ಆಲೋಚನೆ ಮತ್ತು ವೀಕ್ಷಣಾ ಕೌಶಲ್ಯಗಳನ್ನು ಪರೀಕ್ಷಿಸಲು ಈ ಚಿತ್ರವನ್ನು ವಿನ್ಯಾಸಗೊಳಿಸಲಾಗಿದೆ. ನೀವು ಈ ಒಗಟನ್ನು ಹತ್ತು ಸೆಕೆಂಡ್‌ಗಳಲ್ಲಿ ಪರಿಹರಿಸಬಹುದೇ ಅಥವಾ ಇಲ್ಲವೇ ಎಂಬುವುದು ನಿಮ್ಮ ಜಾಣ್ಮೆಗೆ ಬಿಟ್ಟದ್ದು. ಇದೊಂದು ಕಷ್ಟಕರವಾದ ಚಿತ್ರವೆಂದೇ ಹೇಳಬಹುದು. ಈ ಭ್ರಮೆಯನ್ನು ಮುರಿಯಲು ಒಳ್ಳೆಯ ತಿಳುವಳಿಕೆ ಬೇಕು.

ಕೆಲವರು ಈ ಚಿತ್ರದಲ್ಲಿ ಅಡಗಿರುವ ಬೆಕ್ಕನ್ನು ಕಂಡು ಹಿಡಿಯಲು ಕೇವಲ ಐದು ಸೆಕೆಂಡ್‌ ತೆಗೆದುಕೊಂಡಿದ್ದಾರೆ. ಅದರಲ್ಲಿ ನೀವೂ ಒಬ್ಬರಾಗಿದ್ದರೆ ನಿಮಗೆ ಅಭಿನಂದನೆಗಳು. ಅದೇ ಸಮಯದಲ್ಲಿ ಯಾರಿಗೆ ಇದಕ್ಕೆ ಉತ್ತರ ಕಂಡು ಹಿಡಿಯಲು ಸಾಧ್ಯವಾಗಿಲ್ಲವೋ. ಅವರಿಗೆ ಈ ಕೆಳಗೆ ಉತ್ತರ ನೀಡಿದ್ದೇವೆ.

Optical Illusion

Leave A Reply

Your email address will not be published.