Sachin-Seema Love Story: ಪ್ರಿಯಕರ ಸಚಿನ್‌ ಮಾಡಿದ ಒಂದು ತಪ್ಪು ಪಾಕಿಸ್ತಾನ ಮಹಿಳೆ ಜೊತೆಗಿನ ʼಪ್ರೀತಿಯʼ ರಹಸ್ಯವನ್ನೇ ಬಯಲು ಮಾಡಿತು! ಅಪರೂಪದ ಪ್ರೇಮ ಕಥೆ

sachin-seema-love-story

Sachin-Seema Love Story: ಭಾರತದಲ್ಲಿರುವ ಪ್ರಿಯಕರನಿಗಾಗಿ ಪಾಕಿಸ್ತಾನದಿಂದ ತನ್ನ ನಾಲ್ಕು ಮಕ್ಕಳೊಂದಿಗೆ ಬಂದ ತಾಯಿಯೋರ್ವಳು ಇತ್ತೀಚೆಗೆ ಸುದ್ದಿಯ ಕೇಂದ್ರಬಿಂದುವಾಗಿದ್ದು ಎಲ್ಲರಿಗೂ ತಿಳಿದೇ ಇದೆ. ಈಕೆ ಪಾಕಿಸ್ತಾನದಿಂದ ದುಬೈ ಮತ್ತು ನೇಪಾಳಕ್ಕೆ ತನ್ನ ನಾಲ್ವರು ಮಕ್ಕಳೊಂದಿಗೆ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ್ದಳು. ಅಕ್ರಮವಾಗಿ ಭಾರತಕ್ಕೆ ಬಂದಿದ್ದಕ್ಕಾಗಿ ಸೀಮಾ ಹೈದರ್‌ ಬಂಧನಗೊಳಗಾಗಿದ್ದು, ಇದೀಗ ನ್ಯಾಯಾಲಯದ ಆದೇಶದ ಮೇರೆಗೆ ಜಾಮೀನು ದೊರಕಿದೆ.

ಇದೆಲ್ಲ ಆದ ನಂತರ ಈಗ ಮಾಧ್ಯಮವೊಂದಕ್ಕೆ ನೀಡಿದ ಹೇಳಿಕೆಯಲ್ಲಿ, ಸಚಿನ್‌ಗಾಗಿ ನಾನು ಏನು ಬೇಕಾದರೂ ಮಾಡಬಲ್ಲೆ. ಅವನ ಮೇಲಿನ ಅಪಾರ ಪ್ರೀತಿಯಿಂದ ನಾನು ದೇಶ ಬಿಟ್ಟು ಇಲ್ಲಿದೆ ಬಂದಿದ್ದೇನೆ. ಮೊದಲು ಭಾರತದ ವೀಸ ಪಡೆಯಲು ಪ್ರಯತ್ನ ಪಟ್ಟೆ, ಆದರೆ ಅದು ಸಿಗಲಿಲ್ಲ. ಅದಕ್ಕೆ ಈ ರೀತಿ ಮಾಡಿದ್ದೇನೆ ಎಂದು ಹೇಳಿದಳು.

ನೇಪಾಳದ ಮೂಲಕ ಭಾರತವನ್ನು ಪ್ರವೇಶಿಸಿದಾಗ ನನ್ನ ಸಂತೋಷಕ್ಕೆ ಮಿತಿಯಿರಲಿಲ್ಲ, ಸಚಿನ್‌ ಗೆ ಕರೆ ಮಾಡಿ ಭಾರತಕ್ಕೆ ಬಂದ ಬಗ್ಗೆ ಹೇಳಿದೆ. ನೇಪಾಳ-ಭಾರತದ ಗಡಿಯಲ್ಲಿ ಅವರನ್ನು ಪ್ರಶ್ನೆ ಮಾಡಿದಾಗ, ಭಾರತೀಯರು ಎಂದು ಮಾತ್ರ ನಾವು ಹೇಳಿದ್ದಾರೆ. ಸೀಮಾ ಭಾರತಕ್ಕೆ ಬಂದಿರುವುದು ಸಂತಸ ತಂದಿದೆ. ಆದರೆ ಆಕೆಯ ಜೊತೆ ನನಗೆ ಇರಲಿಕ್ಕೆ ಆಗುವುದಿಲ್ಲ ಎಂದು ನನಗೆ ಗೊತ್ತಿತ್ತು. ಅದಕ್ಕಾಗಿ ನಾನು ವಕೀಲರ ಬಳಿ ಹೋದೆ. ಆದರೆ ವಕೀಲರಿಂದಾಗಿ ಇವರಿಬ್ಬರ ಲವ್‌ ಸ್ಟೋರಿ ಹೊರಬಿದ್ದಿದೆ.

ಇದೇ ವೇಳೆ ಪಾಕಿಸ್ತಾನಕ್ಕೆ ಹಿಂದಿರುಗಿ ಹೋಗುವ ಪ್ರಶ್ನೆ ಇಲ್ಲ ಎಂದು ಸೀಮಾ ಹೇಳಿದ್ದಾಳೆ. ಹೀಗೇನಾದರೂ ಆದರೆ ಇಬ್ಬರೂ ಒಂದೇ ಸ್ವರದಲ್ಲಿ ವಿಷ ತಿನ್ನುತ್ತೇವೆ ಆದರೆ ಹೋಗುವುದಿಲ್ಲ ಎಂದು ಹೇಳಿದ್ದಾರೆ. ಸೀಮಾ ನಾನು ಭಾರತದಲ್ಲೇ ಇರಲು ಬಯಸುತ್ತೇನೆ. ವಾಪಾಸು ಪಾಕಿಸ್ತಾನಕ್ಕೆ ಹೋಗಲು ಬಯಸುವುದಿಲ್ಲ. ಭಾರತ ಈಗ ನನ್ನ ಮನೆಯಾಗಿದೆ, ನನ್ನ ಗಂಡನ ಮನೆಯಾಗಿದೆ ಎಂದು ಹೇಳುತ್ತಾಳೆ.

ಈ ಸಂದರ್ಭದಲ್ಲಿ ಪಾಕಿಸ್ತಾನದಲ್ಲಿರುವ ಸೀಮಾಳ ಗಂಡನ ವೀಡಿಯೋವೊಂದು ವೈರಲ್‌ ಆಗಿದ್ದು, ಇದಕ್ಕೆ ಉತ್ತರಿಸಿದ ಆಕೆ ನಮ್ಮಿಬ್ಬರದ್ದು ಫೋನ್‌ನಲ್ಲೇ ತಲಾಖ್‌ ಅಗಿದೆ ಎಂದು ಹೇಳಿದ್ದಾಳೆ.

 

 

Leave A Reply

Your email address will not be published.